* ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ(Asia Team Championships) ಭಾರತದ ಮಹಿಳಾ ತಂಡ ಐತಿಹಾಸಿಕ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ಟೂರ್ನಿಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಪಿ.ವಿ. ಸಿಂಧು ಸಾರಥ್ಯದ ಮಹಿಳಾ ತಂಡ ಫೈನಲ್ ನಲ್ಲಿ ಥಾಯ್ಲೆಂಡ್‌ ವಿರುದ್ಧ 3-2 ಅಂತರದಿಂದ ಗೆದ್ದು ಈ ಸಾಧನೆ ಮಾಡಿದೆ. * 2016 ಮತ್ತು 2020ರಲ್ಲಿ ಭಾರತ ಪುರುಷರ ತಂಡ ಕಂಚಿನ ಪದಕ ಜಯಿಸಿತ್ತು. ಇದೀಗ ಮಹಿಳೆಯರು ಚಾರಿತ್ರಿಕ ಚಿನ್ನದ ಪದಕದಿಂದ ಮಿನುಗಿದ್ದಾರೆ. * ಸೆಮಿಫೈನಲ್‌ನಲ್ಲಿ ಭಾರತ 2 ಬಾರಿಯ ಮಾಜಿ ಚಾಂಪಿಯನ್‌ ಜಪಾನ್‌ ವಿರುದ್ಧ 3-2 ಅಂತರದ ರೋಚಕ ಗೆಲುವು ಸಾಧಿಸಿ ಫೈನಲ್  ಪ್ರವೇಶಿಸಿತ್ತು. ಫೈನಲ್ ನಲ್ಲಿಯೂ ಇದೇ ಪ್ರದರ್ಶನವನ್ನು ತೋರುವ ಮೂಲಕ ಚೊಚ್ಚಲ ಪದಕ ತನ್ನಾಗಿಸಿಕೊಂಡಿತು. * ಅನುಭವಿ ಆಟಗಾರ್ತಿ ಪಿವಿ ಸಿಂಧು, ಗಾಯತ್ರಿ ಗೋಪಿಚಂದ್‌-ಟ್ರೇಸಾ ಜಾಲಿ ಹಾಗೂ 16 ವರ್ಷದ ಸೆನ್ಸೇಷನಲ್‌ ಸ್ಟಾರ್‌ ಅನ್ಮೋಲ್‌ ಖ್ರಾಬ್‌ ತಮ್ಮ ಪಂದ್ಯಗಳನ್ನು ಗೆಲ್ಲುವ ಮೂಲಕ ಶಾ ಅಲಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 3-2 ಅಂತರದಿಂದ ಗೆಲವು ಕಂಡಿತು. ಸಾಕಷ್ಟು ಹೋರಾಟದಿಂದ ಕೂಡಿದ ಫೈನಲ್‌ ಪಂದ್ಯದಲ್ಲಿ ಭಾರತ ಮೊದಲಿಗೆ 2-0ಯಿಂದ ಮುನ್ನಡೆ ಕಂಡಿತ್ತು.