* ಭಾರತವು ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಮುಂದಿನ 10 ವರ್ಷಗಳಲ್ಲಿ 10 ಟ್ರಿಲಿಯನ್ ಡಾಲರ್ ‌ಆರ್ಥಿಕತೆಯಾಗಲಿದೆ. ಇದು ಭಾರತಕ್ಕೆ ಒಂದು ಪ್ರಮುಖ ಸಾಧನೆಯಾಗಿದೆ ಮತ್ತು ಇದು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. * ಭಾರತವು ವಿಶ್ವದ ಅತಿದೊಡ್ಡ ಉದ್ಯೋಗಿಗಳನ್ನು ಸಹ ಹೊಂದಿರುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ತಿಳಿಸಿದ್ದಾರೆ.* ನವದೆಹಲಿಯ ವಿಜ್ಞಾನ ಭವನದಲ್ಲಿ ಗಡಿ ಭದ್ರತಾ ಪಡೆ, ಬಿಎಸ್‌ಎಫ್‌ ಮತ್ತು ರುಸ್ತಮ್‌ಜಿ ಸ್ಮಾರಕ ಉಪನ್ಯಾಸದ 21ನೇ ಇನ್ವೆಸ್ಟಿಚರ್ ಸಮಾರಂಭದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ದೋವಲ್ ಅವರು ಸೆಮಿಕಂಡಕ್ಟರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮ್ಯಾನುಫ್ಯಾಕ್ಟರಿಂಗ್, ಡಿಫೆನ್ಸ್ ಮತ್ತು ಸೆಕ್ಯುರಿಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಾಂತ್ರಿಕವಾಗಿ ಭಾರತ ಅತ್ಯಂತ ಮುಂದುವರಿದ ದೇಶವಾಗಲಿದೆ ಎಂದು ಸಲಹೆ ನೀಡಿದ್ದಾರೆ.