* ಸಿಜೆಐ ಡಿವೈ ಚಂದ್ರಚೂಡ್ ಅವರು 2024 ನವೆಂಬರ್ 10ರಂದು ನಿವೃತ್ತರಾಗಲಿದ್ದು ಜ್ಯೇಷ್ಠತೆ ಪ್ರಕಾರ, ಭಾರತದ ಸುಪ್ರೀಂ ಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ (CJI) ಮುಂದಿನ ಏಳು ತಿಂಗಳ ಅವಧಿಗೆ ಸಂಜೀವ್ ಖನ್ನಾ ಅವರು 2024ರ ನವೆಂಬರ್‌ನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.* ಹಿರಿತನದ ನಿಯಮದ (seniority rule) ಆಧಾರದಲ್ಲಿ ಸಂಜೀವ್ ಖನ್ನಾಈ ಅಧಿಕಾರ ಪ್ರಾಪ್ತಿಯಾಗಲಿದೆ.ಭಾರತದ ಸಂವಿಧಾನದ ಪ್ರಕಾರ ಮುಖ್ಯ ನ್ಯಾಯಾಧೀಶರು 65 ವರ್ಷವನ್ನು ತಲುಪಿದಾಗ ನಿವೃತ್ತರಾಗುತ್ತಾರೆ. ಹಾಗಾಗಿ 64ರ ಹರೆಯದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸಿಜೆಐ ಆದರೆ ಮೇ 2025ರಲ್ಲಿ ನಿವೃತ್ತರಾಗುತ್ತಾರೆ.* ಮೇ 14, 1960 ರಂದು ಜನಿಸಿದ ನ್ಯಾಯಮೂರ್ತಿ ಖನ್ನಾ ಅವರು ತಮ್ಮ ಕಾನೂನು ವೃತ್ತಿಯನ್ನು ಪ್ರಾರಂಭಿಸುವ ಮೊದಲು ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಅವರು 1983 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ಸೇವೆಸಲ್ಲಿಸಿದ್ದಾರೆ.* 2005 ರಿಂದ 14 ವರ್ಷಗಳ ಕಾಲ ದೆಹಲಿ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಅಧಿಕಾರಾವಧಿಯು ಕಾನೂನಿನ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಮಹತ್ವದ ನಿರ್ಧಾರಗಳಿಂದ ಗುರುತಿಸಲ್ಪಟ್ಟಿದೆ.- ಚುನಾವಣಾ ಬಾಂಡ್‌ಗಳ ಯೋಜನೆ- VVPAT ನೊಂದಿಗೆ EVM ಮತಗಳ ಕ್ರಾಸ್-ವೆರಿಫಿಕೇಶನ್- ಮಾನವ ಹಕ್ಕುಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯ- ಕಾರ್ಪೊರೇಟ್ ಮತ್ತು ಪರಿಸರ ಕಾನೂನು- ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು ನೀಡಿದ್ದ ಖನ್ನಾ