* ಟೆನಿಸ್ ಜಗತ್ತು ಕಂಡ ದಿಗ್ಗಜ ಆಟಗಾರ ರಾಫೆಲ್ ನಡಾಲ್ (Rafael Nadal) ಅವರು ಟೆನ್ನಿಸ್ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ.* ರಾಫೆಲ್ ನಡಾಲ್ ಜಯಿಸಿದ 22 ಟೆನಿಸ್ ಗ್ರ್ಯಾನ್‌ ಸ್ಲಾಂ ಪೈಕಿ 14 ಗ್ರ್ಯಾನ್‌ ಸ್ಲಾಂಗಳು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಜಯಿಸಿದ್ದಾಗಿದೆ. ಇಂದು ಅವರು ಟೆನಿಸ್‌ಗೆ ವಿದಾಯ ಹೇಳಿದ್ದಾರೆ.* 38 ವರ್ಷದ ಟೆನಿಸ್ ಐಕಾನ್ ನವೆಂಬರ್ ನಲ್ಲಿ ಮಾಲಾಗಾದಲ್ಲಿ ನಡೆಯಲಿರುವ ಡೇವಿಸ್ ಕಪ್ ಫೈನಲ್‌ ಮ್ಯಾಚ್‌, ನಡಾಲ್ ಅವರ ಅಂತಿಮ ಪಂದ್ಯಾವಳಿಯಾಗಿದೆ.* ನವೆಂಬರ್ 19 ಮತ್ತು 21 ರ ನಡುವಿನ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಅನ್ನು ಸ್ಪೇನ್‌ ಎದುರಿಸಲಿದೆ. * ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ನಡಾಲ್ ಸ್ಪ್ಯಾನಿಷ್ ದಿಗ್ಗಜ ನಡಾಲ್‌, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊದ ಮೂಲಕ ನಿವೃತ್ತಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅವರ ವೃತ್ತಿಜೀವನದುದ್ದಕ್ಕೂ ಬೆಂಬಲ ನೀಡಿದವರು ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.* ರಾಫೆಲ್ ನಡಾಲ್ ಇದುವರೆಗೂ ಒಟ್ಟು 92 ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪೈಕಿ 36 ಮಾಸ್ಟರ್ಸ್‌ ಪ್ರಶಸ್ತಿಗಳಾಗಿರುವುದು ಇನ್ನೊಂದು ವಿಶೇಷ ಸಾಧನೆಯಾಗಿದೆ.* ಟೆನಿಸ್ ಇತಿಹಾಸದಲ್ಲೇ ಸಿಂಗಲ್ಸ್‌ ವಿಭಾಗದಲ್ಲಿ ಗೋಲ್ಡನ್ ಗ್ರ್ಯಾನ್‌ ಸ್ಲಾಂ ಜಯಿಸಿದ ಕೇವಲ ಮೂರು ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಗೋಲ್ಡನ್ ಗ್ರ್ಯಾನ್‌ ಸ್ಲಾಂ ಅಂದರೆ ಟೆನಿಸ್‌ ಸಿಂಗಲ್ಸ್‌ನಲ್ಲಿ ಒಂದೇ ವರ್ಷದಲ್ಲಿ 4 ಗ್ರ್ಯಾನ್‌ ಸ್ಲಾಂ ಹಾಗೂ ಅದೇ ವರ್ಷ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದರೆ, ಅಂತಹ ಸಾಧನೆಯನ್ನು ಗೋಲ್ಡನ್ ಗ್ರ್ಯಾನ್‌ ಸ್ಲಾಂ ಎಂದು ಕರೆಯಲಾಗುತ್ತದೆ.