* ಕಝಕ್‌ಸ್ತಾನದ ಅಸ್ತಾನದಲ್ಲಿ ಬುಧವಾರ (ಅ.09) ನಡೆದ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳೆಯರ ತಂಡ ಕಂಚಿನ ಪದಕ ಗೆದ್ದುಕೊಂಡು ಇತಿಹಾಸ ನಿರ್ಮಿಸಿದ್ದಾರೆ.* 1972ರಲ್ಲಿ ಏಷ್ಯನ್ ಟೇಬಲ್ ಟೆನಿಸ್ ಯೂನಿಯನ್ ಈ ಸ್ಪರ್ಧಾವಳಿಯನ್ನು ಆಯೋಜಿಸಲು ಆರಂಭಿಸಿದ ನಂತರ ಮೊಟ್ಟ ಮೊದಲ ಬಾರಿ ಭಾರತದ ಮಹಿಳೆಯರ ತಂಡ ಸ್ಫರ್ಧೆಯಲ್ಲಿ ಪದಕ ಗೆದ್ದುಕೊಂಡಿದೆ.* ಭಾರತದ ಮಹಿಳಾ ತಂಡ ಮಂಗಳವಾರ (ಅ.8)ನಡೆದ ಕ್ವಾಟರ್ ಫೈನಲ್ ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್ ಕಂಚು ವಿಜೇತ ತಂಡ ಕೊರಿಯಾ ತಂಡವನ್ನು 3-2ರಿಂದ ಮಣಿಸುವ ಮೂಲಕ ಭಾರತ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ ನಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. * ವಿಶ್ವ ನಂ. 92 ಐಹಿಕಾ ಮುಖರ್ಜಿ ವಿಶ್ವ ನಂ. 8 ಶಿನ್ ಯುಬಿನ್ ಮತ್ತು ವಿಶ್ವ ನಂ. 16 ಜಿಆನ್ ಜಿಹೀ ವಿರುದ್ಧ ಅವಳಿ ಗೆಲುವು ದಾಖಲಿಸುವ ಮೂಲಕ ಭಾರತದ ಐತಿಹಾಸಿಕ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿದರು.* ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದ ಐಹಿಕಾ ಮತ್ತು ಮನಿಕಾ ಬಾತ್ರಾ ಭಾರತಕ್ಕೆ 2-0ಯಿಂದ ಅಚ್ಚರಿಯ ಮುನ್ನಡೆಯನ್ನು ಒದಗಿಸಿದರು. ನಂತರ ಕೊರಿಯಾ ತಂಡ 2-2ರಿಂದ ಸಮಬಲ ಸಾಧಿಸಿದರೂ ಐಹಿಕಾ ನಿರ್ಣಾಯಕ ಪಂದ್ಯದಲ್ಲಿ ಜಿಹೀ ವಿರುದ್ಧ ಗೆದ್ದು ಬೀಗಿದರು.