Job Description: ಜೀವಸಂಕುಲದ ಉಳಿವಿಗಾಗಿ ಪರ್ವತಗಳು ವಹಿಸುವ ಪಾತ್ರದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಡಿಸೆಂಬರ್ 11 ರಂದು ಅಂತರಾಷ್ಟ್ರೀಯ ಪರ್ವತ ದಿನವನ್ನು (International Mountain Day)ಆಚರಿಸಲಾಗುತ್ತದೆ. ಡಿಸೆಂಬರ್ 20, 2002 ರಂದು, ವಿಶ್ವಸಂಸ್ಥೆಯು ಡಿಸೆಂಬರ್ 11 ಅನ್ನು ಅಂತರರಾಷ್ಟ್ರೀಯ ಪರ್ವತ ದಿನ ವಾಗಿ ಆಚರಿಸಲು ನಿರ್ಧರಿಸಿತು, ತದನಂತರ ಮೊದಲ ಅಂತರರಾಷ್ಟ್ರೀಯ ಪರ್ವತ ದಿನವನ್ನು 11 ಡಿಸೆಂಬರ್ 2003 ರಂದು ಆಚರಿಸಲಾಯಿತು. ಅಂದಿನಿಂದ, ಪ್ರತಿ ವರ್ಷ ಡಿಸೆಂಬರ್ 11 ರಂದು ಆಯೋಜಿಸಲಾಗಿದೆ. *ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು 2023-2027 ಅನ್ನು "ಪರ್ವತ ಪ್ರದೇಶಗಳ ಅಭಿವೃದ್ಧಿಗಾಗಿ ಐದು ವರ್ಷಗಳ ಕ್ರಿಯೆ" ಎಂದು ಘೋಷಿಸಿದೆ . *"ಪರ್ವತ ಪರಿಸರ ವ್ಯೆವಸ್ಥೆಗಳನ್ನು ಮರುಸ್ಥಾಪಿಸುವುದು" 2023 ರ ಅಂತಾರಾಷ್ಟ್ರೀಯ ಪರ್ವತ ದಿನದ ಘೋಷವಾಕ್ಯವಾಗಿದೆ. ಪರ್ವತಗಳ ಅಧ್ಯಯನಕ್ಕೆ Orology ಎನ್ನುವರು ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ (8,848ಮೀ) ವಿಶ್ವದ 2ನೇ ಅತಿ ಎತ್ತರದ ಪರ್ವತ ಗಾಡ್ವಿನ್ ಆಸ್ಟೆನ್ [K2 ]-8,611 ಮೀ ವಿಶ್ವದ 3ನೇ ಅತಿ ಎತ್ತರದ ಪರ್ವತ ಕಾಂಚನ ಜುಂಗಾ 8,586 ಮೀ