Job Description: • ಈ ಒಕ್ಕೂಟದ ಹೆಸರು ಗ್ಲೋಬಲ್ ರಿವರ್ ಸಿಟೀಸ್ ಅಲಯನ್ಸ್ ( Global River Cities Alliance - GRCA ) • ಇದು ಭಾರತ ಸರ್ಕಾರದ ಜಲ ಶಕ್ತಿ ಸಚಿವಾಲಯದ ಅಡಿಯಲ್ಲಿ ಕ್ಲೀನ್ ಗಂಗಾ ರಾಷ್ಟ್ರೀಯ ಮಿಷನ್ ( NMCG ) ನಿಂದ ಪ್ರಾರಂಭಿಸಲ್ಪಟ್ಟಿದೆ. • ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮ್ಮೇಳನ - COP 28 10ನೇ ಡಿಸೆಂಬರ್ 2023 ರಂದು ದುಬೈ ನಲ್ಲಿ ನಡೆಯಿತು. • ಈ ಒಂದು ಸಹಯೋಗವು ಅಸ್ತಿತ್ವದಲ್ಲಿರುವ ನದಿ ನಗರಗಳ ಒಕ್ಕೂಟದ ( River Cities Alliance - RCA ) ಮೌಲ್ಯವನ್ನು ಹೆಚ್ಚಿಸಲಿದ್ದು ಮತ್ತು ದೇಶಗಳು, ನದಿ- ನಗರಗಳು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ಜ್ಞಾನ ನಿರ್ವಹಣೆ ಪಾಲುದಾರರನ್ನು ಒಟ್ಟುಗೂಡಿಸಲು ಸಹಾಯಕವಾಗಿದೆ. • GRCA - 11 ದೇಶಗಳ 275ಕ್ಕಿಂತ ಹೆಚ್ಚು ಜಾಗತಿಕ ನದಿ ನಗರಗಳನ್ನು ಒಳಗೊಂಡ ವಿಶಿಷ್ಟ ಮೈತ್ರಿಯಾಗಿದೆ. ಇದು ನದಿಗಳ ಸಂರಕ್ಷಣೆ ಮತ್ತು ಸುಸ್ಥಿರ ನೀರಿನ ನಿರ್ವಹಣೆಯಡೆಗಿನ ಜಾಗತಿಕ ಪ್ರಯತ್ನಗಳಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಮೈತ್ರಿಯು ಜಾಗತಿಕವಾಗಿ ಮೊದಲನೆಯದಾಗಿದ್ದು, ನದಿಗಳ ಮತ್ತು ಅವುಗಳ ಪರಿಸರ ವ್ಯವಸ್ಥೆಗಳ ಯೋಗಕ್ಷೇಮಕ್ಕಾಗಿ ಸಯೋಗದ ಕ್ರಮಕ್ಕೆ ಬದ್ಧತೆಯನ್ನು ಸೂಚಿಸುತ್ತದೆ.