* ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಜನವರಿ 12, 2024.ರಂದು ಒಡಿಶಾದ ಕರಾವಳಿಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಿಂದ ಹೊಸ ತಲೆಮಾರಿನ ಆಕಾಶ್ (AKASH-NG) ಕ್ಷಿಪಣಿಯ ಯಶಸ್ವಿ ಹಾರಾಟ-ಪರೀಕ್ಷೆಯನ್ನು ನಡೆಸಿತು.* "ಹೈ-ಸ್ಪೀಡ್ ಎಕ್ಸ್ ಪ್ಯಾಂಡೆಬಲ್ ಏರಿಯಲ್ ಟಾರ್ಗೆಟ್ (HEAT) ನ ನಾಲ್ಕು ಹಾರಾಟ ಪ್ರಯೋಗಗಳನ್ನು ಜನವರಿ 30 ರಿಂದ ಫೆಬ್ರವರಿ 2 ರವರೆಗೆ ಒಡಿಶಾದ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಯಶಸ್ವಿಯಾಗಿ ನಡೆಸಿತು" ಎಂದು ಸಚಿವಾಲಯ ತಿಳಿಸಿದೆ.* ಕ್ಷಿಪಣಿ ಮಾದರಿಯ ಹೈಸ್ಪೀಡ್ ಎಕ್ಸ್ ಪ್ಯಾಂಡೆಬಲ್ ಏರಿಯಲ್ ಟಾರ್ಗೆಟ್ 'ಅಭಯಾಸ್'ನ ಪರೀಕ್ಷಾರ್ಥ ಪ್ರಯೋಗವನ್ನು ಡಿಆರ್‌ಡಿಒ, ಒಡಿಶಾ ಕರಾವಳಿ ತೀರದಲ್ಲಿ ಯಶಸ್ವಿಯಾಗಿ ನಡೆಸಿದೆ.* ಐಟಿಆರ್, ಚಂಡಿಪುರದಿಂದ ನಿಯೋಜಿಸಲಾದ ಹಲವಾರು ರಾಡಾರ್‌ಗಳು, ಟೆಲಿಮೆಟ್ರಿ ಮತ್ತು ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್‌ಗಳಿಂದ ಸೆರೆಹಿಡಿಯಲಾದ ಡೇಟಾದ ಮೂಲಕ ಸಿಸ್ಟಮ್‌ನ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಲಾಗಿದೆ.* 'ಅಭಯಾಸ್' ಅನ್ನು ಡಿಆರ್‌ಡಿಒದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎಡಿಇ) ಹಾಗೂ ಹೈದರಾಬಾದ್‌ನ ಅಡ್ವಾನ್ಸ್ ಸಿಸ್ಟಮ್ ಲ್ಯಾಬೊಂಬರ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.