Job Description: * ಭಾರತದ ಸ್ಟಾರ್ ವೇಟ್ ಲಿಫ್ಟರ್ ಆಟಗಾರ್ತಿ ಮೀರಾಬಾಯಿ ಚಾನು ಅವರು ಸಿಂಗಾಪುರ ವೇಟ್ ಲಿಫ್ಟಿಂಗ್ ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಚಿನ್ನವನ್ನು ಪಡೆದುಕೊಂಡು 2022 ರ ಕಾಮನ್ ವೆಲ್ತ್ ಗೇಮ್ಸ್ ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. * ಪ್ರಸ್ತುತ ಬರ್ನಿಂಗ್ ಹ್ಯಾಮ್ ನಲ್ಲಿ ಜರುಗುವ 2022 ಕಾಮನ್ ವೆಲ್ತ್ ಗೇಮ್ಸ್'ನ ಅರ್ಹತಾ ಪಂದ್ಯವಾಗಿದೆ. ಇದೇ ಮೊದಲ ಬಾರಿಗೆ 55 ಕೆಜಿ ವೇಟ್ ವಿಭಾಗದಲ್ಲಿ ಸ್ಪರ್ಧಿಸಿದ ಚಾನು 191 KG ಭಾರ ಎತ್ತುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. - ಆಸ್ಟ್ರೇಲಿಯಾದ ಜೆಸ್ಸಿಕಾ ಸೆವಾಸ್ಟೆಂಕೊ 167 KG ಭಾರ ಎತ್ತುವ ಮೂಲಕ 2 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. - ಮಲೇಷ್ಯಾದ ಕಸ್ಸಂದ್ರ ಎಂಗಲ್ಬರ್ಟ್ 165 KG ಭಾರ ಎತ್ತುವ ಮೂಲಕ 3 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. * ಭಾರತೀಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರು ಕಳೆದ ವರ್ಷ ಟೋಕಿಯೋ ಒಲಂಪಿಕ್ಸ್ ನಲ್ಲಿ ನಡೆದ ವೇಟ್ ಲಿಫ್ಟಿಂಗ್'ನಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದರು. * ಈ ಹಿಂದೆ 1958 ರಿಂದ ಸಿಂಗಾಪುರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದೆ, ಇದು ಸುಮಾರು 20 ಆವೃತ್ತಿಗಳಲ್ಲಿ 15 ಭಾಗವಹಿಸಿದೆ. ಸಿಂಗಾಪುರವು 1958 ಹಾಗೂ 1962 ರಲ್ಲಿ ಕ್ರೌನ್ ಕಾಲೋನಿಯಾಗಿ ಮತ್ತೇ 1966 ರಿಂದ ಸ್ವತಂತ್ರ ಕಾಮನ್ವೆಲ್ತ್ ದೇಶವಾಗಿ ಪಾಲ್ಗೊಂಡಿತು. * ಸಿಂಗಾಪುರದ ಮೊದಲ '4' ಪದಕಗಳು ವೇಟ್‌ಲಿಫ್ಟಿಂಗ್‌ನಿಂದ ಬಂದಿವೆ. ಒಟ್ಟಾರೆಯಾಗಿ ಸಿಂಗಾಪುರವು ರಾಷ್ಟ್ರವು ವೇಟ್‌ಲಿಫ್ಟಿಂಗ್‌'ನಲ್ಲಿ '8' ಪದಕಗಳನ್ನು ಜಯಿಸಿದೆ. ಸಿಂಗಾಪುರ 2002 ರಲ್ಲಿ 3 ಚಿನ್ನ, 2006 ರಲ್ಲಿ 4 ಚಿನ್ನ, 2010 ರಲ್ಲಿ 6 ಚಿನ್ನ, ಹಾಗೂ 2014 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 6 ಚಿನ್ನದ ಪದಕಗಳನ್ನು ಗೆದ್ದಿದ್ದೆ. ಅಷ್ಟೇ ಅಲ್ಲದೇ ಈ ರಾಷ್ಟ್ರವು ಪ್ರತಿ ಬಾರಿ ಕ್ರೀಡೆಯಲ್ಲಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. * ಸಿಂಗಾಪುರದ ಕ್ರೀಡಾಪಟುಗಳು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ '7' ಕ್ರೀಡೆಗಳಲ್ಲಿ ಪದಕಗಳನ್ನು ಜಯಿಸಿದ್ದಾರೆ.