Job Description: * ಇದೀಗ ಉಕ್ರೇನ್ ಮೇಲೆ ರಷ್ಯಾ ರಾಷ್ಟ್ರವು ಆಕ್ರಮಣ ಮಾಡುತ್ತಿರುವ ಹಿನ್ನೆಲೆಯಿಂದಾಗಿ ಪ್ರಸ್ತುತ ವರ್ಷದ ಚಾಂಪಿಯನ್ಸ್ ಲೀಗ್ ಫೈನಲ್, ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಸ್ಟೇಡ್‌ ಡಿ ಫ್ರಾನ್ಸ್‌ಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಐರೋಪ್ಯ ಫುಟ್ಬಾಲ್ ಸಂಸ್ಥೆಗಳ ಒಕ್ಕೂಟವು ಘೋಷಣೆ ಮಾಡಿದೆ. * ಪ್ರಸ್ತುತ ಉಕ್ರೇನ್ ಮತ್ತು ರಷ್ಯನ್ ಕ್ಲಬ್‌ಗಳು ಸ್ಪರ್ಧಿಸುವ ಹೋಮ್ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ನಡೆಸಲಾಗುತ್ತದೆ ಎಂದಿದ್ದಾರೆ. ಇತ್ತೀಚಿಗೆ ಯುಇಎಫ್‌ಎ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಭದ್ರತೆಯ ವಿಷಯದ ಬಗ್ಗೆ ಹೆಚ್ಚಿನ ಕಳವಳ ವ್ಯಕ್ತವಾಗಿರುವ ಕಾರಣದಿಂದಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. * ಪ್ರಸ್ತುತ ವರ್ಷದ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯವು ಮೇ. 28ರಂದು ನಿಗದಿಪಡಿಸಲಾಗಿದೆ. * UEFA ಚಾಂಪಿಯನ್ಸ್ ಲೀಗ್ ಇದನ್ನು ಯುರೋಪಿನ ಫುಟ್‌ಬಾಲ್ ಅಸೋಸಿಯೇಷನ್ಸ್ ಸಂಘಟಿಸಿದ ವಾರ್ಷಿಕ ಕ್ಲಬ್ ಫುಟ್‌ಬಾಲ್ ಸ್ಪರ್ಧೆಯಾಗಿದೆ ಹಾಗೂ ಉನ್ನತ-ವಿಭಾಗದ ಯುರೋಪಿಯನ್ ಕ್ಲಬ್‌ಗಳಿಂದ ಸ್ಪರ್ಧಿಸಲಾಗುತ್ತದೆ. ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಫುಟ್‌ಬಾಲ್ ಪಂದ್ಯಾವಳಿಗಳಲ್ಲಿ ಒಂದಾಗಿದೆ. ಹಾಗೂ ಯುರೋಪಿಯನ್ ಫುಟ್‌ಬಾಲ್‌ನಲ್ಲಿನ ಅತ್ಯಂತ ಪ್ರತಿಷ್ಠಿತ ಕ್ಲಬ್ ಸ್ಪರ್ಧೆಯಾಗಿದೆ, ಈ ಸ್ಪರ್ಧೆಯನ್ನು ರಾಷ್ಟ್ರೀಯ ಲೀಗ್ ಚಾಂಪಿಯನ್‌ಗಳು ತಮ್ಮ ರಾಷ್ಟ್ರೀಯ ಸಂಘಗಳಿಂದ ಆಟವಾಡುತ್ತಾರೆ. * ಈ ಹಿಂದೆ 1955 ರಲ್ಲಿ ಕೂಪೆ ಡೆಸ್ ಕ್ಲಬ್ಸ್ ಚಾಂಪಿಯನ್ಸ್ ಯುರೋಪಿಯನ್ಸ್ ಎಂದು ಪರಿಚಯ ಮಾಡಲಾಗಿದೆ. ಇದನ್ನು ಸಾಮಾನ್ಯವಾಗಿ ಯುರೋಪಿಯನ್ ಕಪ್ ಎನ್ನಲಾಗುತ್ತದೆ. * ಸ್ಪ್ಯಾನಿಷ್ ಕ್ಲಬ್‌ಗಳು ಅತಿ ಹೆಚ್ಚು ಗೆಲುವುಗಳನ್ನು ಹೊಂದಿವೆ, ನಂತರದ ಸ್ತನಗಳಲ್ಲಿ ಇಂಗ್ಲೆಂಡ್ ಮತ್ತು ಇಟಲಿ ಅತಿ ಹೆಚ್ಚು ವಿಜೇತ ತಂಡಗಳನ್ನು ಹೊಂದಿದೆ, ಪ್ರಸ್ತುತ ರಿಯಲ್ ಮ್ಯಾಡ್ರಿಡ್ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ಲಬ್ ಆಗಿದೆ.