Job Description: * ಪ್ರಸ್ತುತ ಮಲೇಷ್ಯಾದ ಖ್ಯಾತ ಬ್ಯಾಡ್ಮಿಂಟನ್ ತರಬೇತುದಾರ ತಾನ್ ಕಿಮ್ ಹರ್ ಅವರನ್ನು 2026 ರ ಏಷ್ಯನ್ ಗೇಮ್ಸ್ ವರೆಗೆ ಭಾರತದ ಡಬಲ್ಸ್ ತರಬೇತುದಾರರನ್ನಾಗಿ ನೇಮಕ ಮಾಡಲು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಅನುಮೋದನೆಯನ್ನು ನೀಡಿದೆ. * ಬ್ಯಾಡ್ಮಿಂಟನ್ ಇದೊಂದು ರಾಕೆಟ್ ಕ್ರೀಡೆಯಾಗಿದೆ, ಈ ಆಟದ ಅತ್ಯಂತ ಸಾಮಾನ್ಯ ರೂಪಗಳೆಂದರೆ "ಸಿಂಗಲ್ಸ್" ಮತ್ತು "ಡಬಲ್ಸ್". ಬ್ಯಾಡ್ಮಿಂಟನ್'ನ್ನು ಸಾಮಾನ್ಯವಾಗಿ ಅಂಗಳದಲ್ಲಿ ಅಥವಾ ಕಡಲತೀರದಲ್ಲಿ ಸಾಂದರ್ಭಿಕ ಹೊರಾಂಗಣ ಚಟುವಟಿಕೆಯಾಗಿ ಆಡುತ್ತಾರೆ. ಹಾಗೂ ಔಪಚಾರಿಕ ಆಟಗಳನ್ನು ಆಯತಾಕಾರದ ಒಳಾಂಗಣ ಮೈದಾನದಲ್ಲಿ ಆಡಲಾಗುತ್ತದೆ. ಶಟಲ್ ಕಾಕ್'ನ್ನು ರಾಕೆಟ್‌ನಿಂದ ಹೊಡೆಯುವ ಮುಖಾಂತರ ಅಂಕಗಳನ್ನು ಪಡೆಯಲಾಗುತ್ತದೆ. * ಪ್ರಸ್ತುತ ಈ ಆಟವು ಬ್ರಿಟಿಷ್ ಭಾರತದಲ್ಲಿ ಹಿಂದಿನ ಬ್ಯಾಟಲ್‌ಡೋರ್ ಹಾಗೂ ಶಟಲ್ ಕಾಕ್ ಆಟದಿಂದ ಅಭಿವೃದ್ಧಿಗೊಂಡಿದೆ. ಯುರೋಪಿಯನ್ ಆಟವು ಡೆನ್ಮಾರ್ಕ್‌ನಿಂದ ಪ್ರಾಬಲ್ಯಕ್ಕೆ ಬಂದಿದೆ, ಆದರೆ ಈ ಆಟವು ಏಷ್ಯಾದಲ್ಲಿ ಬಹಳ ಜನಪ್ರಿಯವಾಗಿದೆ, ಚೀನಾ ದೇಶವು ಇತ್ತೀಚಿನ ಈ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಹೊಂದಿದೆ. * ಈ ಹಿಂದೆ 1992 ರಿಂದ ಬ್ಯಾಡ್ಮಿಂಟನ್ '4' ಈವೆಂಟ್‌ಗಳ ಜೊತೆಗೆ ಬೇಸಿಗೆ ಒಲಿಂಪಿಕ್ ಕ್ರೀಡೆಯಾಗಿದೆ ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್, ಹಾಗೂ ಪುರುಷರ ಡಬಲ್ಸ್, ಮಹಿಳೆಯರ ಡಬಲ್ಸ್, ಮಿಶ್ರ ಡಬಲ್ಸ್‌ನ ಜೊತೆಗೆ '4' ವರ್ಷಗಳ ನಂತರ ಸೇರ್ಪಡೆ ಮಾಡಲಾಗಿದೆ. ಈ ಕ್ರೀಡೆಯ ಹೆಚ್ಚಿನ ಮಟ್ಟದ ಅತ್ಯುತ್ತಮ ಫಿಟ್ನೆಸ್'ನ್ನು ಬಯಸುತ್ತದೆ. ಆಟಗಾರರಿಗೆ ಏರೋಬಿಕ್ ತ್ರಾಣ, ಚುರುಕುತನ, ಶಕ್ತಿ, ವೇಗ ಮತ್ತು ನಿಖರತೆಯ ಅಗತ್ಯವಾಗಿರುತ್ತದೆ. ಇದೊಂದು ತಾಂತ್ರಿಕ ಕ್ರೀಡೆಯಾಗಿದೆ, ಉತ್ತಮ ಮೋಟಾರು ಸಮನ್ವಯ ಹಾಗೂ ಅತ್ಯಾಧುನಿಕ ರಾಕೆಟ್ ಚಲನೆಗಳ ಅಭಿವೃದ್ಧಿಯ ಅಗತ್ಯವಾಗಿರುತ್ತದೆ. * ಇದೀಗ ಶಟಲ್ ಕಾಕ್‌ಗಳನ್ನು ಬಳಸಿಕೊಳ್ಳುವ ಆಟಗಳನ್ನು ಯುರೇಷಿಯಾದಾದ್ಯಂತ ಶತಮಾನಗಳಿಂದ ಆಡಲಾಗುತ್ತದೆ, ಈ ಆಟವು ಆಧುನಿಕ ಬ್ಯಾಡ್ಮಿಂಟನ್ ಆಟವು 19 ನೇ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷ್ ಇಂಡಿಯಾದ ವಲಸಿಗ ಅಧಿಕಾರಿಗಳಲ್ಲಿ ಹಿಂದಿನ ಬ್ಯಾಟಲ್‌ಡೋರ್ ಮತ್ತು ಶಟಲ್ ಕಾಕ್‌ನ ರೂಪಾಂತರವಾಗಿ ಅಭಿವೃದ್ಧಿಗೊಂಡಿದೆ.ಈ ಆಟವು 1870 ರ ದಶಕದಲ್ಲಿ ಬಹಳ ಜನಪ್ರಿಯವಾಗಿತ್ತು. ಬಾಲ್ ಬ್ಯಾಡ್ಮಿಂಟನ್ ಇದೊಂದು ಶಟಲ್ ಕಾಕ್ ಬದಲಾಗಿ ಉಣ್ಣೆಯ ಚೆಂಡಿನೊಂದಿಗೆ ಆಡುವ ಆಟದ ಒಂದು ರೂಪವಾಗಿ 1850 ರ ದಶಕದಷ್ಟು ಹಿಂದೆಯೇ ತಂಜಾವೂರಿನಲ್ಲಿ ಆಡಲಾಗುತ್ತಿತ್ತು.