Job Description: * ಪ್ರಸ್ತುತ ಮುಂಬಯಿನ ಜನತೆಗೆ ವಾಟರ್‌ ಟ್ಯಾಕ್ಸಿ ಸೌಲಭ್ಯವು ಆರಂಭವಾಗಿದೆ. ಇದೀಗ ಈ ಸೌಲಭ್ಯವು ಮುಂಬಯಿ ಹಾಗೂ ನವಿ ಮುಂಬಯಿ ನಡುವೆ ಆರಂಭವಾಗಿರುವ ಸೇವೆಯಾಗಿದೆ. ಈ ಯೋಜನೆಯು ಸರಿ ಸುಮಾರು 10 ವರ್ಷಗಳ ಹಿಂದಿನ ಯೋಜನೆಯಾಗಿದೆ ಆದರೆ ಇದೀಗ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. * ಈ ಮುಂಬಯಿ ವಾಟರ್‌ ಟ್ಯಾಕ್ಸಿ ಸೇವೆಗೆ ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್‌ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. * ಇದೀಗ ಮುಂಬೈನ ಬೇಲಾಪುರದಿಂದ ಈ ವಾಟರ್ ಸೇವೆ ಆರಂಭವಾಗಿದೆ. ಸದ್ಯ 8 ಬೋಟ್‌ಗಳಿವೆ, ಇವುಗಲ್ಲಿ '7' ಬೋಟ್‌'ಗಳು ಸ್ಪೀಡ್‌ ಬೋಟ್‌ಗಳಾಗಿವೆ. ಹಾಗೂ ಈ ಸವೆಯಲ್ಲಿ ಕ್ಯಾಟಮಾರನ್‌ ಬೋಟ್‌ ಸೇವೆ ಲಭ್ಯವಿದೆ ಅದರಲ್ಲಿ 56 ಪ್ರಯಾಣಿಕರು ಸಂಚರಿಸಬಹುದು. ಪ್ರಸ್ತುತ ನವಿ ಮುಂಬೈನ ಬೇಲಾಪುರದಿಂದ ದಕ್ಷಿಣ ಮುಂಬೈನ ಬೌಚಾ ಢಕ್ಕಾ ಪ್ರದೇಶಕ್ಕೆ ಪ್ರಯಾಣ ಬೆಳೆಸಲು 1 ಗಂಟೆ 50 ನಿಮಿಷ ಬೇಕಾಗಿತ್ತು. ಆದರೆ ಈ ವಾಟರ್ ಸೇವೆಯ ಮೂಲಕ ಪ್ರಯಾಣ ಬೆಳೆಸಲು ಕೇವಲ 30 ನಿಮಿಷ ಸಾಕಾಗುತ್ತದೆ. * ಪ್ರಸ್ತುತ ಈ ವಾಟರ್ ಟ್ಯಾಕ್ಸಿ ಸೇವೆಯು ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಕಾರ್ಯ ನಿರ್ವಹಿಸಲಿವೆ. ಹಾಗೂ ಇವುಗಳು 3 ಮಾರ್ಗಗಳಲ್ಲಿ ಸಂಚರಿಸಲಿವೆ : - ಬೇಲಾಪುರದಿಂದ ಫೆರ್ರಿ ವಾರ್ಫ್, - ಬೇಲಾಪುರದಿಂದ ಎಲಿಫೆಂಟಾ ಕೇವ್ಸ್‌, - ಬೇಲಾಪುರದಿಂದ ಜೆಎನ್‌ ಪಿಟಿಗೆ. * ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವಾಟರ್ ಟ್ಯಾಕ್ಸಿ ಯೋಜನೆಯನ್ನು 8.37 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿವೆ.