Job Description: * ಪ್ರಸ್ತುತ 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು' ಸತತವಾಗಿ 2 ನೇ ವರ್ಷವು ACI (Airports Council International)ನ 'ವಾಯ್ಸ್ ಆಫ್ ದಿ ಕಸ್ಟಮರ್(Voice of the Customer)' ಮಾನ್ಯತೆಯನ್ನು ಪಡೆದುಕೊಂಡಿದೆ. * ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ACI ಯ ಏರ್‌ಪೋರ್ಟ್ ಸೇವಾ ಗುಣಮಟ್ಟ ಕಾರ್ಯಕ್ರಮದ ಮುಖಾಂತರ ಪ್ರಯಾಣಿಕರ ಪ್ರತಿಕ್ರಿಯೆಯನ್ನು ಸಂಗ್ರಹಿಸುವಲ್ಲಿ ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿದೆ, ಅಷ್ಟೇ ಅಲ್ಲದೆ ಗ್ರಾಹಕರ ಅಗತ್ಯವಿರುವ ಸೇವೆಗಳ ಬಗ್ಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಹಿನ್ನಲೆಯಿಂದಾಗಿ ಸತತ 2 ನೇ ವರ್ಷವು ಈ ಪುರಸ್ಕಾರ ಲಭಿಸಿದೆ. * ಪ್ರಸ್ತುತ ACI ನ 'ವಾಯ್ಸ್ ಆಫ್ ದಿ ಕಸ್ಟಮರ್' ಉಪಕ್ರಮದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾನ್ಯತೆ ಸಿಕ್ಕಿದೆ ಎಂದು ಎಸಿಐ ವರ್ಲ್ಡ್‌ನ ಮಹಾನಿರ್ದೇಶಕ ಲೂಯಿಸ್ ಫೆಲಿಪೆ ಡಿ ಒಲಿವೇರಾ ತಿಳಿಸಿದ್ದಾರೆ. * * ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್ (ACI) : ಜಾಗತಿಕವಾಗಿ ವಿಮಾನ ನಿಲ್ದಾಣದ ಗುಣಮಟ್ಟವನ್ನು ವೃದಿಸುವ ಏಕೀಕೃತ ಉದ್ಯಮದ ಅಭ್ಯಾಸಗಳನ್ನು ರೂಪಿಸುವ ವಿಶ್ವದ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಈ ಸಂಸ್ಥೆಯು ಪ್ರತಿನಿಧಿಸುತ್ತದೆ. ಈ ACI'ನ್ನು 1991 ರಲ್ಲಿ ಸ್ಥಾಪನೆಮಾಡಲಾಗಿದೆ, ಇದು ತನ್ನ ಪ್ರಧಾನ ಕಛೇರಿಯನ್ನು ಕೆನಡಾದ ಮಾಂಟ್ರಿಯಲ್'ನಲ್ಲಿ ಹೊಂದಿದೆ. ಸದ್ಯ ಇದರ ಸದಸ್ಯರು ಅಂದಾಜು 2000 ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿದ್ದಾರೆ. * ಈ ಹಿಂದೆ 1970 ರ ಮೊದಲು, ವಿಶ್ವದ ವಿಮಾನ ನಿಲ್ದಾಣಗಳನ್ನು 3 ವಿಭಿನ್ನ ಸಂಘಗಳು ಅಂತರರಾಷ್ಟ್ರೀಯ ದೃಶ್ಯದಲ್ಲಿ ಪ್ರತಿನಿಧಿಸುತ್ತಿದ್ದವು : - ಏರ್ಪೋರ್ಟ್ ಆಪರೇಟರ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ (AOCI) - ಅಂತರರಾಷ್ಟ್ರೀಯ ನಾಗರಿಕ ವಿಮಾನ ನಿಲ್ದಾಣಗಳ ಸಂಘ (ICAA) - ಪಶ್ಚಿಮ ಯುರೋಪಿಯನ್ ಏರ್‌ಪೋರ್ಟ್ಸ್ ಅಸೋಸಿಯೇಷನ್ (WEAA) * ಪ್ರಸ್ತುತ ಈ ವಿಮಾನ ನಿಲ್ದಾಣದ ಕಾರ್ಯಾಚರಣೆಗಳಲ್ಲಿ ಬಾಹ್ಯ ಅಂಶಗಳ ಹೆಚ್ಚುತ್ತಿರುವ ಹಿನ್ನಲೆಯಿಂದಾಗಿ ಸರ್ಕಾರಗಳು, ವಿಮಾನಯಾನ ಸಂಸ್ಥೆಗಳು, ತಯಾರಕರು ಹಾಗೂ ಅದಕ್ಕೆ ಸಂಬಂಧಪಟ್ಟಿರುವ ಇನ್ನಿತರ ಪಕ್ಷಗಳ ಜೊತೆಗಿನ ಸಂಬಂಧವು ಹೆಚ್ಚು ಸ್ಪಷ್ಟವಾಯಿತು. ಈ ಕಾರಣದಿಂದಾಗಿ 1970 ರಲ್ಲಿ ಈ '3' ಸಂಘಗಳು ಏಕೀಕೃತ ವಿಮಾನ ನಿಲ್ದಾಣ ಉದ್ಯಮ ನೀತಿಗಳನ್ನು ರೂಪಿಸುವ ನಿಟ್ಟಿನಲ್ಲಿ ಏರ್‌ಪೋರ್ಟ್ ಅಸೋಸಿಯೇಷನ್ಸ್ ಕೋಆರ್ಡಿನೇಟಿಂಗ್ ಕೌನ್ಸಿಲ್ (AACC)ನ್ನು ರಚನೆ ಮಾಡಿದವು. * ಮತ್ತೇ 1989 ರಲ್ಲಿ ಪ್ರಸ್ತುತ AACCಯ ಉತ್ತರಾಧಿಕಾರಿಯಾದ ACI'ನ್ನು ರಚಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ACI ಯ ಸಂವಿಧಾನವನ್ನು 1990 ರ ಅಧೀನದಲ್ಲಿ ಅಂಗೀಕರಿಸಲಾಯಿತು ಹಾಗೂ 1991 ರಲ್ಲಿ ಜಾರಿಗೆ ತರಲಾಗಿದೆ.