Job Description: * ಪ್ರಸ್ತುತ ಈಜಿಪ್ಟ್, ಕೀನ್ಯಾ, ನೈಜೀರಿಯಾ, ಸೆನೆಗಲ್, ದಕ್ಷಿಣ ಆಫ್ರಿಕಾ ಹಾಗೂ ಟುನೀಶಿಯಾ ದೇಶಗಳು (Messenger RNA) 'mRNA' ಲಸಿಕೆ ಉತ್ಪಾದನೆಯನ್ನು ಸ್ಥಾಪಿಸಲಿವೆ ಎಂದು WHO ದ ಮಹಾನಿರ್ದೇಶಕ ಡಾ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಅವರು ತಿಳಿಸಿದ್ದಾರೆ. * ಇತ್ತೀಚಿಗೆ ಯುರೋಪಿಯನ್ ಕೌನ್ಸಿಲ್, ಫ್ರಾನ್ಸ್, ದಕ್ಷಿಣ ಆಫ್ರಿಕಾ ಹಾಗೂ WHO ಆಯೋಜಿಸಿರುವ ಕಾರ್ಯಕ್ರಮದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರ ಭಾಗವಹಿಸಿದ್ದರು ಅದೇ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ ಎಂದು WHO ವರದಿ ಮಾಡಿದೆ. * ಕೋವಿಡ್-19 ಹಾಗೂ ಇನ್ನಿತರ ಯಾವುದೇ ಘಟನೆಯು ಜಾಗತಿಕ ಸಾರ್ವಜನಿಕ ಸರಕುಗಳನ್ನು ರವಾನಿಸಲು ಇದು ಕೆಲವು ಕಂಪನಿಗಳ ಮೇಲೆ ಅವಲಂಬನೆಯನ್ನು ಸೀಮಿತಗೊಳಿಸುತ್ತದೆ. ಹಾಗೂ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ಬಗೆಹರಿಸುವದರ ಜೊತೆಗೆ ಆರೋಗ್ಯ ವ್ಯಾಪ್ತಿಯನ್ನು ತಲುಪಲು ಇದೊಂದು ಉತ್ತಮ ಮಾರ್ಗವಾಗಿದೆ ಎಂದಿದ್ದಾರೆ. ಹಾಗೂ ಇದೊಂದು ಕಾರ್ಯಕ್ರಮವು ನಮ್ಮದೇ ಆಗಿರುವ ಲಸಿಕೆಗಳನ್ನು ಸಿದ್ದಪಡಿಸಲು ಸಹಾಯ ಮಾಡುವ ಉಪಕ್ರಮವಾಗಿದೆ ಎಂದಿದ್ದಾರೆ. * ಈ ಉಪಕ್ರಮವು ಕಡಿಮೆ ಹಾಗೂ ಮಧ್ಯಮ-ಆದಾಯದ ದೇಶಗಳಲ್ಲಿನ ತಯಾರಕರು ಲಸಿಕೆಗಳನ್ನು ಉತ್ಪಾದಿಸಲು ಬೆಂಬಲ ನೀಡುವ ಜಾಗತಿಕ 'mRNA' ತಂತ್ರಜ್ಞಾನ ವರ್ಗಾವಣೆ ಕೇಂದ್ರವನ್ನು 2021 ರಲ್ಲಿ ಸ್ಥಾಪನೆ ಮಾಡಲಾಗಿದೆ. WHO ಹಾಗೂ ಪಾಲುದಾರರು ಮಾರ್ಗಸೂಚಿಯನ್ನು ಬಲಪಡಿಸಲು ಫಲಾನುಭವಿ ದೇಶಗಳ ಜೊತೆ ಕಾರ್ಯ ನಿರ್ವಹಿಸಲಿದ್ದಾರೆ ಇದರಿಂದಾಗಿ ಅವರು ಆದಷ್ಟು ಬೇಗ ಲಸಿಕೆಗಳನ್ನು ಉತ್ಪಾದಿಸಲು ಆರಂಭಿಸಬಹುದಾಗಿದೆ ಎಂದು ತಿಳಿಸಿದ್ದಾರೆ. * ಈ ದೇಶಗಳು ತಮ್ಮದೇ ಲಸಿಕೆಗಳು ಹಾಗೂ ಇನ್ನಿತರ ಆರೋಗ್ಯ ತಂತ್ರಜ್ಞಾನಗಳನ್ನು ಉತ್ಪಾದಿಸಲು ಅಗತ್ಯವಾಗಿರುವ ಸಾಮರ್ಥ್ಯವನ್ನು ನಿರ್ಮಿಸಲು, WHO ಜೈವಿಕ ಉತ್ಪಾದನಾ ಕಾರ್ಯಪಡೆಯ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲು ಕಾರ್ಯ ನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೆ ಇದರಲ್ಲಿ ಆಸಕ್ತಿಯನ್ನು ಹೊಂದಿರುವ ದೇಶದ ಜನರಿಗೆ ವೈಜ್ಞಾನಿಕ ಹಾಗೂ ಕ್ಲಿನಿಕಲ್ ಸಂಶೋಧನೆ ಜೊತೆಗೆ ಉತ್ಪಾದನಾ ತರಬೇತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದೆ.