Job Description: * ಬಿಹಾರದ ಕ್ರಿಕೆಟ್ ಆಟಗಾರರಾಗಿರುವ ಶಕೀಬುಲ್ ಗನಿ ಅವರು ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ ತ್ರಿಶತಕ ಸಿಡಿಸಿರುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. * ಬಿಹಾರ ತಂಡದ ಶಕೀಬುಲ್ ಗನಿ ಅವರು ಮಿಝೋರಾಂ ತಂಡದ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಅವರ ಚೊಚ್ಚಲ ಪಂದ್ಯದಲ್ಲಿ 405 ಎಸೆತಗಳಲ್ಲಿ 341 ರನ್ (ತ್ರಿಶತಕ) ಗಳಿಸಿ ಮೊದಲ ಕ್ರಿಕೆಟಿಗ ಇವರಾಗಿದ್ದಾರೆ. ಈ ಹಿಂದೆ 2018-19 ರ ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ತಂಡದ ವಿರುದ್ಧ ಆಡಿರುವ ಮೊದಲ ಪಂದ್ಯದಲ್ಲಿ ಔಟಾಗದೆ 267 ರನ್ ಕಲೆಹಾಕಿದ್ದಾರೆ. ಇದೀಗ ಶಕೀಬುಲ್ ಗನಿ ಅವರು ಮಧ್ಯಪ್ರದೇಶದ ಅಜಯ್ ರೊಹೆರಾ ಅವರ ದಾಖಲೆಯನ್ನು ಮುರಿದಿದ್ದಾರೆ. * ಶಕೀಬುಲ್ ಗನಿ ಅವರು ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾನಿಲಯದ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದ ಅಂತಿಮ ಇನ್ನಿಂಗ್ಸ್ ನಲ್ಲಿ 405 ಎಸೆತಗಳಲ್ಲಿ 341 ರನ್‌ ಗಳನ್ನೂ ಕಲೆಹಾಕಿದ್ದಾರೆ. ಹಾಗೂ ಬಿಹಾರ ತಂಡದ ಮತ್ತೊಬ್ಬ ಆಟಗಾರ ಬಬುಲ್ ಕುಮಾರ್ ಅವರು ದ್ವಿಶತಕವನ್ನು ಸಿಡಿಸಿದ್ದಾರೆ. * ಈ ಹಿಂದೆ ಶ್ರೀಲಂಕಾದ ಕುಮಾರ ಸಂಗಕ್ಕರ ಹಾಗೂ ಮಹೇಲ ಜಯವರ್ಧನೆ ಅವರು 2006 ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 624 ರನ್ ಗಳನ್ನೂ ಸಿಡಿಸಿದ್ದರು. * ರಣಜಿ ಟ್ರೋಫಿಯು ಭಾರತದಲ್ಲಿ ಪ್ರಾದೇಶಿಕ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ಪ್ರತಿನಿಧಿಸುವ ಬಹು ತಂಡಗಳ ನಡುವೆ ನಡೆಸುವ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ ಚಾಂಪಿಯನ್‌ಶಿಪ್ ಇದಾಗಿದೆ. ಈ ಸ್ಪರ್ಧೆಯು ಪ್ರಸ್ತುತ 38 ತಂಡಗಳನ್ನು ಒಳಗೊಂಡಿತ್ತು. ಭಾರತದಲ್ಲಿನ 28 ರಾಜ್ಯ ಹಾಗೂ 08 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಲ್ಕು ಪ್ರದೇಶಗಳು ಕನಿಷ್ಠ ಒಂದು ಪ್ರಾತಿನಿಧ್ಯವನ್ನು ಹೊಂದಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಮೊದಲ ಭಾರತೀಯ ಕ್ರಿಕೆಟಿಗ ರಂಜಿತ್‌ಸಿನ್‌ಜಿ ಅವರ ಹೆಸರನ್ನು ಈ ಸ್ಪರ್ಧೆಗೆ ಇಡಲಾಗಿದೆ. * ಈ ಸ್ಪರ್ಧೆಯನ್ನು 1934 ರಲ್ಲಿ ಆರಂಭಿಸಲಾಗಿದೆ. ಮೊದಲ ಪಂದ್ಯಗಳು 1934-35 ರಲ್ಲಿ ನಡೆದಿವೆ. ಈ ಟ್ರೋಫಿಯನ್ನು ಪಟಿಯಾಲದ ಮಹಾರಾಜ ಭೂಪಿಂದರ್ ಸಿಂಗ್ ಅವರು ದಾನ ಮಾಡಿದ್ದಾರೆ. ಈ ರಣಜಿ ಟ್ರೋಫಿಯ ಮೊದಲ ಪಂದ್ಯವು 1934 ರ ನವೆಂಬರ್. 04 ರಂದು ಮದ್ರಾಸ್ ಹಾಗೂ ಮೈಸೂರು ತಂಡಗಳ ನಡುವೆ ಮದ್ರಾಸ್ ನ ಚೆಪಾಕ್ ಮೈದಾನದಲ್ಲಿ ನಡೆಸಲಾಗಿದೆ. * ಪ್ರಸ್ತುತ ಮುಂಬೈ ತಂಡವು 1958-59 ರಿಂದ 1972-73 ರವರೆಗಿನ ಸುಮಾರು 15 ಬ್ಯಾಕ್-ಟು-ಬ್ಯಾಕ್ ಗೆಲುವುಗಳು ಪಡೆದುಕೊಂಡಿದೆ, ಹಾಗೂ ಈ ಪಂದ್ಯಾವಳಿಯಲ್ಲಿ ಅತೀ ಹೆಚ್ಚು ಬಾರಿ ಗೆದ್ದ ತಂಡವಾಗಿದೆ.