Job Description: * ಪ್ರಸ್ತುತ ಇಂಡಿಗೊ ಸಹಸಂಸ್ಥಾಪಕರಾಗಿರುವ ರಾಕೇಶ್‌ ಗಂಗ್ವಾಲ್‌ ಅವರು ಇಂಡಿಗೊ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಈ ವಿಮಾನ ಸಂಸ್ಥೆಯಲ್ಲಿನ ತಮ್ಮ ಪಾಲುದಾರಿಕೆಯನ್ನು ಮುಂದಿನ '5' ವರ್ಷಗಳಲ್ಲಿ ಕಡಿತಗೊಳಿಸಲು ನಿರ್ಧರಿಸಿದ್ದಾರೆ ಎಂದು ಇಂಡಿಗೊದ ಸಂಸ್ಥೆಯಾಗಿರುವ ಇಂಟರ್‌ಗ್ಲೋಬ್‌ ಏವಿಯೇಷನ್‌ ಈ ಮಾಹಿತಿಯನ್ನು ನೀಡಿದೆ. * ರಾಕೇಶ್‌ ಗಂಗ್ವಾಲ್‌ ಅವರು ಇಂಟರ್‌ಗ್ಲೋಬ್‌ ಏವಿಯೇಷನ್‌ನಲ್ಲಿ ಶೇ. 36.61 ರಷ್ಟು ಪಾಲುದಾರಿಕೆಯನ್ನು ಹೊಂದಿದ್ದಾರೆ. ಹಾಗೂ ಇನ್ನೊಬ್ಬ ಸಹಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಹುಲ್‌ ಭಾಟಿಯಾ ಅವರು ಶೇ. 37.8 ರಷ್ಟು ಪಾಲುದಾರಿಕೆಯನ್ನು ಹೊಂದಿದ್ದಾರೆ. ರಾಕೇಶ್‌ ಗಂಗ್ವಾಲ್‌ ಅವರು ಕಂಪನಿ ಆಡಳಿತದ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತರುವ ಪ್ರಸ್ತಾವನೆಯನ್ನು ತಿಳಿಸಿದರು, ರಾಹುಲ್‌ ಭಾಟಿಯಾ ಅವರು ಅದಕ್ಕೆ ಸ್ಪಂದನೆ ನೀಡಲಿಲ್ಲ ಈ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. * ರಾಕೇಶ್‌ ಗಂಗ್ವಾಲ್‌ ನಾನು ಸುಮಾರು 15 ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಕಂಪನಿಯ ಷೇರುದಾರನಾಗಿದ್ದೇನೆ ಷೇರು ವಿಕ್ರಯಗೊಳಿಸುವ ವಿಷಯದ ಬಗ್ಗೆ ಒಂದು ದಿನ ಯೋಚಿಸಬೇಕಾಗುತ್ತದೆ ಎಂದು ಗಂಗ್ವಾಲ್‌ ಅವರು ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಕಂಪನಿಯ ಷೇರುದಾರರು ನಿಯಮಗಳಲ್ಲಿ ಬದಲಾವಣೆಯನ್ನು ತರಲು ಅನುಮತಿಯನ್ನು ನೀಡಲಾಗಿತ್ತು ಈ ಹಿನ್ನಲೆಯಿಂದಾಗಿ ಸಹಸಂಸ್ಥಾಪಕರು ಷೇರುಗಳನ್ನು 3 ನೇ ವ್ಯಕ್ತಿಗೆ ಮಾರಾಟ ಅಥವಾ ವರ್ಗಾವಣೆ ಮಾಡಬಹುದಾಗಿದೆ. * ರಾಕೇಶ್ ಗಂಗ್ವಾಲ್ ಅವರೊಬ್ಬ ಅಮೇರಿಕನ್ ಬಿಲಿಯನೇರ್ ಉದ್ಯಮಿಯಾಗಿದ್ದಾರೆ. ಇವರು ಇಂಡಿಗೋ ಏರ್‌ಲೈನ್‌ನ ಸಹ-ಸ್ಥಾಪಕರಾಗಿ 37% ಮಾಲೀಕತ್ವವನ್ನು ಹೊಂದಿದ್ದಾರೆ. ಗಂಗ್ವಾಲ್ ಅವರು 2003 ರಿಂದ 2007 ರವರೆಗೆ US ಏರ್ವೇಸ್ ಗ್ರೂಪ್ ನ ಮಾಜಿ CEO ಹಾಗೂ ಅಧ್ಯಕ್ಷರಾಗಿದ್ದರು. ಗಂಗ್ವಾಲ್ ಅವರು ಖಾಸಗಿ ಇಕ್ವಿಟಿ ಯೋಜನೆಗಳು ಹಾಗೂ ಸಲಹಾ ಯೋಜನೆಗಳು ಒಳಗೊಂಡಿರುವ ವಿವಿಧ ವೈಯಕ್ತಿಕ ವ್ಯಾಪಾರಗಳಲ್ಲಿ ಭಾಗಿಯಾಗಿದ್ದರು. * ರಾಕೇಶ್ ಗಂಗ್ವಾಲ್ ಅವರು 1998 ರಿಂದ 2001 ರಲ್ಲಿ ರಾಜೀನಾಮೆ ಸಲ್ಲಿಸುವರೆಗೂ US ಏರ್‌ವೇಸ್ ಗ್ರೂಪ್‌ನ ಅಧ್ಯಕ್ಷ ಹಾಗೂ CEO ಆಗಿದ್ದರು.