Job Description: * ಪ್ರಸ್ತುತ ಕೇಂದ್ರ ಸರ್ಕಾರವು ಗಂಗಾನದಿ ಉಳಿವಿಗಾಗಿ ಮಹತ್ವದ ಯೋಜನೆಯನ್ನು ಕೈಗೊಂಡಿದೆ, ಇದೀಗ ಗಂಗಾ ನದಿ ಪ್ರವಾಹ ಪ್ರದೇಶದಲ್ಲಿ ಗಳಲ್ಲಿ ಹೊಸ ಕೈಗಾರಿಕೆ ಸ್ಥಾಪನೆಗೆ ನಿಷೇಧವನ್ನು ಹೇರಿದೆ, ಆದರೆ ಗಂಗಾ ಯೋಜನೆಗಳಿಗೆ ವಿನಾಯಿತಿಯನ್ನು ನೀಡಿದೆ. * ಕೇಂದ್ರ ಸರ್ಕಾರವು ಗಂಗಾ ನದಿ ಉಳಿವಿಗಾಗಿ ಈ ಹಿಂದಿನ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿದೆ ಇದೀಗ ಕೈಗಾರಿಕಾ ತಾಣಗಳು ಪ್ರವಾಹದಿಂದ ಕನಿಷ್ಠ 0.5 ಕಿಮೀ ದೂರದಲ್ಲಿರಬೇಕು ಅಥವಾ ಅಣೆಕಟ್ಟಿನಿ ಸುತ್ತಮುತ್ತಲಿನ ಪ್ರವಾಹ ಪ್ರದೇಶವನ್ನು ಬದಲಾಯಿಸಬೇಕು ಎಂದು ತಿಳಿಸಿದೆ. ಹಾಗೆಯೇ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ನದಿಯ ಹತ್ತಿರದಲ್ಲಿರುವ ಕೈಗಾರಿಕೆಗಳಿಗೆ ಮಾರ್ಗಸೂಚಿಗಳನ್ನು ಹೊರ ತಂದಿದೆ, ಈ ವಿಷಯಗಳನ್ನು ಸಚಿವಾಲಯದಲ್ಲಿ ಚರ್ಚೆ ಮಾಡಲಾಗಿದೆ ಹಾಗೂ ಜಲ ಶಕ್ತಿ ಸಚಿವಾಲಯ ಒಳಗೊಂಡಂತೆ ಸಚಿವಾಲಯಗಳ ಬಳಿ ಹಲವು ಸಲಹೆಗಳನ್ನು ಕೋರಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಗಂಗಾ ನದಿ ಹಾಗೂ ಅದರ ಉಪನದಿಗಳ ಮಾಲಿನ್ಯ ನಿಯಂತ್ರಣ ಮಾಡುವ ಸಲುವಾಗಿ ನಮಾಮಿ ಗಂಗೆ ಕಾರ್ಯಕ್ರಮದ ಅಡಿಯಲ್ಲಿ ನಿರ್ಮಾಣ, ಅಭಿವೃದ್ಧಿ, ಒಳಚರಂಡಿ ಸಂಸ್ಕರಣಾ ಘಟಕಗಳ ನವೀಕರಣ, ಸ್ನಾನಘಟ್ಟಗಳು, ಸ್ಮಶಾನ ಹಾಗೂ ಶೌಚಾಲಯಗಳನ್ನೂ ನಿಷೇಧ ಹೇರಲಾಗಿಲ್ಲ ಎಂದು ಸಚಿವಾಲಯದ ಮಾರ್ಗಸೂಚಿಗಳಲ್ಲಿವೆ. ಆದರೆ ಈ ನಮಾಮಿ ಗಂಗೆ ಕಾರ್ಯಕ್ರಮದ ಅಡಿಯಲ್ಲಿನ ಜಲ ಶಕ್ತಿ ಸಚಿವಾಲಯ ಕೈಗೊಳ್ಳುವ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಈ ಮಾರ್ಗಸೂಚಿಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ. * ಸರಿ ಸುಮಾರು 25 ವರ್ಷಗಳಲ್ಲಿ ಒಂದು ಪ್ರವಾಹಕ್ಕೆ ಅನುಗುಣವಾಗಿ ನದಿ ಪ್ರವಾಹದ ಪ್ರದೇಶದಲ್ಲಿನ ಕೈಗಾರಿಕೆಗಳು ರಾಜ್ಯ ಜಲಸಂಪನ್ಮೂಲ ಇಲಾಖೆಯ ಜಿಲ್ಲಾಧಿಕಾರಿಗಳು ಅಥವಾ ರಾಜ್ಯ ಸರ್ಕಾರದ ಯಾವುದೇ ಅಧಿಕಾರಿಗಳಿಂದ ಪ್ರಮಾಣೀಕರಿಸಲ್ಪದಡೆ ಆ ಪ್ರದೇಶದಲ್ಲಿ ಸ್ಥಾಪನೆಯಾಗಬಾರದು ಎಂದು ಸಚಿವಾಲಯ ಮಾರ್ಗಸೂಚಿಯನ್ನು ಹೊರಡಿಸಿದೆ. * ಗಂಗಾ ನದಿಯನ್ನು ಭಾರತದಲ್ಲಿ ಗಂಗಾ, ಬಾಂಗ್ಲಾದೇಶದಲ್ಲಿ ಪದ್ಮ ನದಿ ಎಂದು ಕರೆಯಲಾಗುತ್ತದೆ. ಭಾರತ ಹಾಗೂ ಬಾಂಗ್ಲಾದೇಶದ ಮೂಲಕ ಹರಿಯುವ ಏಷ್ಯಾದ ಗಡಿಯಾಚೆಗಿನ ನದಿ ಇದಾಗಿದೆ. ಈ ಗಂಗಾ ನದಿಯು ಭಾರತದ ಉತ್ತರಾಖಂಡ ರಾಜ್ಯದಲ್ಲಿನ ಪಶ್ಚಿಮ ಹಿಮಾಲಯದಲ್ಲಿ ಉಗಮವಾಗುತ್ತದೆ. ಈ ನದಿಯು ಉತ್ತರ ಭಾರತದ ಗಂಗಾ ಬಯಲಿನ ಮೂಲಕ ದಕ್ಷಿಣ ಹಾಗೂ ಪೂರ್ವ ದಿಕ್ಕಿನಡೆಗೆ ಹರಿಯುತ್ತದೆ. ಪ್ರಸ್ತುತ ಇದು ಗಂಗಾ-ಬ್ರಹ್ಮಪುತ್ರ-ಮೇಘನಾ ವ್ಯಸ್ಥೆಯು ಭೂಮಿಯ ಮೇಲಿನ 3 ನೇ ಅತಿ ದೊಡ್ಡ ನದಿಯಾಗಿದೆ. * ಗಂಗಾನದಿಯ ಮುಖ್ಯ ಕಾಂಡವು ಉತ್ತರಾಖಂಡ್ ದೇವಪ್ರಯಾಗ ಪಟ್ಟಣದಲ್ಲಿ ಆರಂಭವಾಗುತ್ತದೆ, ಈ ನದಿಯು ಅಧಿಕ ಉದ್ದದ ಕಾರಣದಿಂದ ಜಲವಿಜ್ಞಾನದ ಮೂಲ ಸ್ಟ್ರೀಮ್ ಎಂದು ಪರಿಗಣಿಸಲಾಗಿದೆ.