Job Description: * ಇತ್ತೀಚಿಗೆ ABG ಶಿಪ್‌ಯಾರ್ಡ್ ಲಿಮಿಟೆಡ್ ನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತನ್ನ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಬುಕ್ ಮಾಡಿದೆ. * CBI ತನ್ನ ಅಂದಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರ್ವಾಲ್ ಒಳಗೊಂಡಂತೆ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. SBI ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ 22,842 ಕೋಟಿ ರೂ. ಅಧಿಕ ವಂಚನೆ ಮಾಡಿದ ಆರೋಪದ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಅಷ್ಟೇ ಅಲ್ಲದೇ IPC ಹಾಗೂ ಭ್ರಷ್ಟಾಚಾರ ತಡೆ ಕಾಯಿದೆ ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ ಹಾಗೂ ಅಧಿಕೃತ ಸ್ಥಾನದ ದುರುಪಯೋಗದ ಜೊತೆ ವಂಚನೆಯ ಆರೋಪಗಳನ್ನು ಇವರ ಮೇಲೆ ಹೇರಲಾಗಿದೆ. * ಈ ಹಿಂದೆ 2019 ನವೆಂಬರ್ 8,ರಂದು SBI ಮೊದಲ ಬಾರಿಗೆ ದೂರು ದಾಖಲಿಸಿದೆ. ಈ ವಿಷಯವಾಗಿ CBI 2020 ರ ಮಾರ್ಚ್ 12 ರಂದು ಕೆಲವು ದಾಖಲೆಗಳನ್ನು ಕೇಳಿತ್ತು. ಸರಿ ಸುಮಾರು ಒಂದೂವರೆ ವರ್ಷಗಳ ಕಾಲ ಪರಿಶೀಲನೆ ನಡೆಸಿ 2020 ರ ಆಗಸ್ಟ್ ನಲ್ಲಿ ಬ್ಯಾಂಕ್ ಹೊಸ ದೂರನ್ನು ನೀಡಿತ್ತು. 2022 ರ ಫೆಬ್ರವರಿ. 7 ರಂದು FIR ದಾಖಲಿಸಿ CBI ಕ್ರಮ ಜರುಗಿಸಿದೆ. * ABG ಶಿಪ್‌ಯಾರ್ಡ್ ಲಿಮಿಟೆಡ್‌ಗೆ 28 ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಮಂಜೂರು ಮಾಡಲಾಗಿದೆ. ಈ ಮೂಲಕ SBI 2468.51 ಕೋಟಿ ರೂ. ಗಳ ವಿಧಿವಿಜ್ಞಾನ ಲೆಕ್ಕದ ಪ್ರಕಾರ, 2012-17 ರ ನಡುವೆ ಆರೋಪಿಗಳು ಒಟ್ಟಾಗಿ ಸೇರಿ ದುರುಪಯೋಗ ಹಾಗೂ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಿದ್ದಾರೆ. ಪ್ರಸ್ತುತ ಬ್ಯಾಂಕ್‌ಗಳು ಬಿಡುಗಡೆ ಮಾಡಿರುವ ಹಣವನ್ನು ಬೇರೆ ಉದ್ದೇಶಗಳಿಗೆ ಬಳಿಸಿಕೊಂಡಿವೆ. ಇದೀಗ CBI ದಾಖಲಿಸಿರುವ ಅತಿ ದೊಡ್ಡ ಬ್ಯಾಂಕ್ ವಂಚನೆಯ ಪ್ರಕರಣವಾಗಿದೆ. * ABG ಶಿಪ್‌ಯಾರ್ಡ್ ಲಿಮಿಟೆಡ್ ಇದೊಂದು ಮುಂಬೈ ಮೂಲದ ಹಡಗು ನಿರ್ಮಾಣ ಕಂಪನಿಯಾಗಿದೆ. ಈ ಕಂಪನಿಯು 1985 ರಲ್ಲಿ ಸ್ಥಾಪನೆ ಮಾಡಲಾಗಿದೆ. ಈ ಕಂಪನಿಯು ಗುಜರಾತ್‌ನ ದಹೇಜ್ ಹಾಗೂ ಸೂರತ್‌ನಲ್ಲಿ ಹಡಗು ನಿರ್ಮಾಣ ಕಾರ್ಯಾಚರಣೆಯ ಘಟಕವನ್ನು ಹೊಂದಿದೆ. ಈ ಹಿಂದೆ 2010 ರ ಅಕ್ಟೋಬರ್ ನಲ್ಲಿ ವೆಸ್ಟರ್ನ್ ಇಂಡಿಯಾ ಶಿಪ್‌ಯಾರ್ಡ್ ಲಿಮಿಟೆಡ ನ್ನು ಸ್ವಾಧೀನಪಡಿಸಿಕೊಂಡ ಬಳಿಕ ಗೋವಾದಲ್ಲಿ ಹಡಗು ದುರಸ್ತಿ ಘಟಕವನ್ನು ನಿರ್ವಹಿಸುತ್ತಿದೆ. * ಪ್ರಸ್ತುತ ಈ ABG ಅತಿದೊಡ್ಡ ಖಾಸಗಿ ಹಡಗು ನಿರ್ಮಾಣ ಕಂಪನಿಯಾಗಿದೆ. ಇದು 20 ಟನ್ ತೂಕದ ಹಡಗುಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿರುವ ಕಂಪನಿಯಾಗಿದೆ.