Job Description: * ಇತ್ತೀಚಿಗೆ 2022 ರ ಫೆಬ್ರವರಿ. 13 ರಂದು ಜರ್ಮನಿಯ ವಿಶೇಷ ಸಂಸತ್ತಿನ ಸಭೆಯು ಜರ್ಮನ್ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್'ನ್ನು '5' ವರ್ಷಗಳ 2 ನೇ ಅವಧಿಗೆ ಮರು ಆಯ್ಕೆ ಮಾಡಿದೆ. ಪ್ರಸ್ತುತ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ನ್ನು ಅಧಿಕ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಂದ ಚುನಾವಣೆಗೆ ಮೊದಲೇ ರಾಜ್ಯದ ಮುಖ್ಯಸ್ಥರನ್ನಾಗಿ ಅನುಮೋದಿಸಿದೆ. * ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ಅವರು ಸಂಸತ್ತಿನ ಕೆಳಮನೆಯ ಸದಸ್ಯರು ಹಾಗೂ ಜರ್ಮನಿಯ 16 ರಾಜ್ಯಗಳ ಪ್ರತಿನಿಧಿಗಳ ವಿಶೇಷ ಅಸೆಂಬ್ಲಿಯಲ್ಲಿ ಬಹುಮತದೊಂದಿಗೆ ಚುನಾಯಿತರಾಗಿದ್ದಾರೆ. ಈ ಹಿಂದೆ ಇವರು 2017 ರಲ್ಲಿ ಅಧ್ಯಕ್ಷರಾಗಿದ್ದರು. * ಪ್ರಸ್ತುತ ಜರ್ಮನಿಯ ಅಧ್ಯಕ್ಷರಿಗೆ ಸ್ವಲ್ಪ ಕಾರ್ಯಕಾರಿ ಅಧಿಕಾರವಿದೆ. ಹಾಗೂ ಇದೊಂದು ಪ್ರಮುಖ ನೈತಿಕ ಅಧಿಕಾರವಾಗಿದೆ ಪರಿಗಣಿಸಿದ್ದಾರೆ. ಇವರು ರಾಜಕೀಯವಾಗಿ ಕಾರ್ಯನಿರ್ವಹಿಸುವ ಹಕ್ಕು ಹಾಗೂ ಕರ್ತವ್ಯವನ್ನು ಹೊಂದಿದ್ದಾರೆ. ಇವರು ಸಾಮಾನ್ಯ ಸಾಮಾಜಿಕ ಹಾಗೂ ರಾಜಕೀಯ ಚರ್ಚೆಗಳಿಗೆ ನಿರ್ದೇಶನವನ್ನು ನೀಡುವ ಹಕ್ಕನ್ನು ಹೊಂದಿದ್ದಾರೆ. ಆರ್ಟಿಕಲ್ 81 ಹಾಗೂ ಮೂಲಭೂತ ಕಾನೂನಿಗೆ ಸಂಬಂಧಿಸಿದ ರಾಜಕೀಯ ಅಸ್ಥಿರತೆಯ ಸಂದರ್ಭದಲ್ಲಿ ಅವರಿಗೆ ಕೆಲ 'ಮೀಸಲು ಅಧಿಕಾರಗಳನ್ನು' ನೀಡಲಾಗುತ್ತದೆ. ಪ್ರಸ್ತುತ ಅಲ್ಲಿನ ಅಧ್ಯಕ್ಷರಿಗೆ ಅವರ ಒಕ್ಕೂಟದ ಪರವಾಗಿ ಕ್ಷಮಾದಾನ ನೀಡಲು ವಿಶೇಷ ಅಧಿಕಾರವನ್ನು ನೀಡಲಾಗಿದೆ. * ಸದ್ಯ ಜರ್ಮನ್ ಅಧ್ಯಕ್ಷರ ಅಧ್ಯಕ್ಷರನ್ನು ಸತತವಾಗಿ '2' ಬಾರಿ '5' ವರ್ಷಗಳ ಅವಧಿಗೆ ಆಯ್ಕೆ ಮಾಡಬಹುದು. ಈ ಹಿಂದಿನ 1949 ರ ಸಂವಿಧಾನದ ಅನುಗುಣವಾಗಿ, ಜರ್ಮನಿಯು ಸಂಸದೀಯ ಸರ್ಕಾರದ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ, ಹಾಗೂ ಅವರು ಅಲ್ಲಿನ ಚಾನ್ಸೆಲರ್ ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ. * ಪ್ರಸ್ತುತ ಜರ್ಮನಿಯ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್ಮಿಯರ್: ಇವರೊಬ್ಬ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಜರ್ಮನಿ ಸದಸ್ಯರಾಗಿದ್ದಾರೆ, ಇವರು ಕಾನೂನಿನಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ.