Job Description: * ಪ್ರಸ್ತುತ ಕೇಂದ್ರ ಸರ್ಕಾರವು ಇತ್ತೀಚಿಗಿನ ಎರಡು ತಿಂಗಳಲ್ಲಿ ದೇಶ ವಿರೋಧಿ ಹಾಗೂ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ 60 ಕ್ಕೂ ಅಧಿಕ ಸಾಮಾಜಿಕ ಜಾಲತಾಣ ಖಾತೆಗಳನ್ನು ಬಂದ್‌ ಮಾಡಲಾಗಿದೆ ಎಂದು ತಿಳಿಸಿದೆ. * ಮಾಹಿತಿ ಹಾಗೂ ಪ್ರಸಾರ ಖಾತೆ ರಾಜ್ಯ ಸಚಿವ ಎಲ್‌.ಮುರುಗನ್‌ ಅವರು ಸರ್ಕಾರ ಜನರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಎಂದು ತಿಳಿಸಿದರು. ಪ್ರಸ್ತುತ ದೇಶ ವಿರೋಧಿ ಹಾಗೂ ಸುಳ್ಳು ಸುದ್ದಿ ಹರಡುವ ಸಾಮಾಜಿಕ ಜಾಲತಾಣಗಳ ಫೇಸ್‌ಬುಕ್‌, ಟ್ವಿಟರ್‌, ಇನ್ಸ್ಟಾಗ್ರಾಮ್‌ ಮತ್ತು ಪಾಕಿಸ್ತಾನದ ಪ್ರಾಯೋಜಿತ ಯೂಟ್ಯೂಬ್‌ ಸೇರಿ 60 ಖಾತೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. * ಸುಳ್ಳು ಸುದ್ದಿ ಪ್ರಸಾರ ಮಾಡುವ ಟೆಕ್‌ಫಾಗ್‌ ಆಯಪ್‌ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುರುಗನ್‌ ಅವರ, ಸರಕಾರವು ವಾಸ್ತವ ಪರಿಶೀಲನೆ ಘಟನೆ ಸ್ಥಾಪಿಸಿದೆ, ಇದೀಗ ಸುಳ್ಳು ಸುದ್ದಿಗಳ ಹರಡುವ ವಿಷಯಗಳ ಮೇಲೆ ಎಚ್ಚರವಹಿಸುತ್ತದೆ, ಹಾಗೂ ವೈರಲ್‌ ಆಗುವ ಸುದ್ದಿಗಳ ಸತ್ಯಾಂಶ ಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಕೇಂದ್ರ ಸರ್ಕಾರವು ಈ ಹಿಂದೆ ಭಾರತದ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದ್ದ 35 ಸಾಮಾಜಿಕ ಜಾಲತಾಣಗಳು ಯ್ಯೂಟೂಬ್‌ ಚಾನಲ್‌, ಎರಡು ಟ್ವಿಟರ್‌ ಖಾತೆ ಹಾಗೂ ಇನ್ಸ್ಟಾಗ್ರಾಮ್‌ ಮತ್ತು ಒಂದು ಫೇಸ್‌ಬುಕ್‌ ಖಾತೆಯನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದೆ. ಹಾಗೂ ಕಳೆದ ಡಿಸೆಂಬರ್‌ ತಿಂಗಳಿನಲ್ಲಿ 20 ಯೂಟ್ಯೂಬ್‌ ಚಾನಲ್ ಹಾಗೂ ಎರಡು ವೆಬ್‌ಸೈಟ್‌'ಗಳನ್ನೂ ಬಂದ್ ಮಾಡಲಾಗಿದೆ. * ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇದೊಂದು ಭಾರತ ಸರ್ಕಾರದ ಮಂತ್ರಿ ಮಟ್ಟದ ಏಜೆನ್ಸಿಯಾಗಿದೆ, ಮಾಹಿತಿ, ಪ್ರಸಾರ, ಪತ್ರಿಕಾ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ನಿಯಮಗಳು, ನಿಬಂಧನೆಗಳು ಹಾಗೂ ಕಾನೂನುಗಳ ರಚನೆ ಮತ್ತು ಆಡಳಿತದ ಜವಾಬ್ದಾರಿಯನ್ನು ಒಳಗೊಂಡಿದೆ. * ಭಾರತ ಸರ್ಕಾರದ ಪ್ರಸಾರ ವಿಭಾಗವು ಪ್ರಸಾರ ಭಾರತಿಯ ಆಡಳಿತದ ಜವಾಬ್ದಾರಿಯನ್ನು ಈ ಸಚಿವಾಲಯ ತಿಳಿಸಿದೆ. ಇದೊಂದು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಈ ಸಚಿವಾಲಯದ ಅಡಿಯಲ್ಲಿನ ಇತರ ಪ್ರಮುಖ ಶಾಸನಬದ್ಧ ಸಂಸ್ಥೆಯಾಗಿದೆ, ಭಾರತದಲ್ಲಿ ಪ್ರಸಾರವಾಗುವ ಚಲನ ಚಿತ್ರಗಳ ನಿಯಂತ್ರಣಕ್ಕೆ ಕಾರಣವಾಗಿದೆ.