Job Description: * ಪ್ರಸ್ತುತ ಭಾರತದ ಕಾಶ್ಮಿರದ ವಿಷಯದಲ್ಲಿ ಏಕಪಕ್ಷೀಯ ತೀರ್ಮಾನಗಳ ಬದಲಾಗಿ ಸೂಕ್ತ ಹಾಗೂ ಶಾಂತಿಯುತವಾಗಿ ವಿವಾದ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಚೀನಾ ರಾಷ್ಟ್ರವು ಆಗ್ರಹಿಸಿದೆ. ಇತ್ತೀಚಿಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಚೀನಾ ದೇಶದ ಹಿರಿಯ ನಾಯಕರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಮಾತುಕತೆಯನ್ನು ನಡೆಸಿದ ಬಳಿಕ ಉಭಯ ದೇಶಗಳ ನಾಯಕರು ಜಂಟಿ ಹೇಳಿಕೆಯನ್ನು ನೀಡಿದ್ದಾರೆ. * ಪ್ರಸ್ತುತ ಪಾಕಿಸ್ತಾನ ದೇಶದಿಂದ ಚೀನಾದ ಹಿರಿಯ ನಾಯಕರಿಗೆ ಕಾಶ್ಮಿರದಲ್ಲಿನ ವಿಷಯದ ಬಗೆಗಿನ ಹೊಸ ಬೆಳವಣಿಗೆಗಳನ್ನು ವಿಸ್ತಾರವಾಗಿ ವಿವರಿಸಲಾಗಿದೆ. ಇದೀಗ ಚೀನಾ ಅಲ್ಲಿನ ಸ್ಥಿತಿ ಹಾಗೂ ಬೆಳವಣಿಗೆಗಳ ಬಗ್ಗೆ ಆತಂಕವನ್ನು ಹೇಳಿಕೊಂಡಿದೆ. * ಇಲ್ಲಿವರೆಗಿನ ಇತಿಹಾಸದಲ್ಲಿ ಜಮ್ಮು-ಕಾಶ್ಮೀರ ವಿವಾದವು ಇತ್ಯರ್ಥವಾಗದೆ ಉಳಿದಿರುವ ವಿಷಯವಾಗಿದೆ. ಇದೀಗ ಎಲ್ಲ ದೇಶಗಳು ಕಡ್ಡಾಯವಾಗಿ ಸೂಕ್ತವಾಗಿ ಹಾಗೂ ಶಾಂತಿಯುತವಾದ ರೀತಿಯಲ್ಲಿ ಇದರ ವಿವಾದವನ್ನು ಇತ್ಯರ್ಥ ಮಾಡಿಕೊಳ್ಳಬೇಕು ಎನ್ನಲಾಗಿದೆ. ಅಷ್ಟೇ ಅಲ್ಲದೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನೇತೃತ್ವದಲ್ಲಿ ದ್ವಿಪಕ್ಷೀಯ ಮಾತುಕತೆಗಳು ನಡೆಸಬೇಕು, ಯಾವುದೇ ಕಾರಣಕ್ಕೂ ಕಾಶ್ಮೀರದ ವಿಷಯದಲ್ಲಿ ಏಕಪಕ್ಷೀಯವಾಗಿ ವಿವಾದಿತ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಚೀನಾ ದೇಶವು ಹೇಳಿಕೆ ನೀಡಿದೆ. * ಪ್ರಸ್ತುತ ಭರತ್ ದೇಶವು ಕಾಶ್ಮೀರದ ವಿಷಯದಲ್ಲಿ ಅನ್ಯರ ಮಧ್ಯಸ್ಥಿಕೆಯನ್ನು ಈ ಮೊದಲಿನಿಂದಲೂ ವಿರೋಧಿಸುತ್ತಿದೆ. ಸದ್ಯ ಲಡಾಕ್ ಸೇರಿ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಹೇಳಿದೆ. ಇದರಲ್ಲಿ ಬೇರೆಯವರ ಚರ್ಚೆ ಅನಗತ್ಯ ಎಂದು ಭಾರತ ಹೇಳಿಕೆ ನೀಡಿದೆ. ಆದರೆ ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಬಾಚಿ ಅವರು ಈ ವಿಷಯಕ್ಕೆ ಉತ್ತರವನ್ನು ನೀಡಿದ್ದಾರೆ. ಇದೀಗ ಕಾಶ್ಮೀರದ ವಿಷಯದಲ್ಲಿ ಬೇರೆಯವರ ಮಧ್ಯಸ್ಥಿಕೆ ವಹಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. * ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗೆ 60 ಬಿಲಿಯನ್ ಅಮೆರಿಕಾ ಡಾಲರ್ ಹೂಡಿಕೆಯನ್ನು ಚೀನಾ ಖಚಿತ ಪಡಿಸಿದೆ ಇಸು ಆ ಪ್ರದೇಶದಲ್ಲಿನ ಮಹತ್ವದ ಬೆಳವಣಿಗೆಯಾಗಿದೆ. ಪ್ರಸ್ತುತ ಚೀನಾ ದೇಶವು ಪಾಕಿಸ್ತಾನ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಬದ್ಧತೆ ಪ್ರದರ್ಶನವನ್ನು ತೋರಿಸಬೇಕು. ಅಷ್ಟೇ ಅಲ್ಲದೇ ಏಷ್ಯಾ ಖಂಡದಲ್ಲಿ ಶಾಂತಿಯ ವಾತಾವರಣ ನಿರ್ಮಿಸಲು ಉಭಯ ರಾಷ್ಟ್ರಗಳು ಪರಸ್ಪರ ಜೊತೆಯಾಗಿ ಕೆಲಸ ಮಾಡಬೇಕು ಎಂದು ಹೇಳಲಾಗಿದೆ. * ರಕ್ಷಣಾ ಕ್ಷೇತ್ರಗಳಲ್ಲಿ ಚೀನಾ ಹಾಗೂ ಪಾಕಿಸ್ತಾನ ದೇಶಗಳು ಪರಸ್ಪರ ಸಹಕಾರ ವಿವಿಧ ಹಂತಗಳಲ್ಲಿ ಒಪ್ಪಂದಗಳಿಗೆ ಸಹಿ ಹಾಕಿವೆ. ಪ್ರಸ್ತುತ ಚೀನಾ ದೇಶವು ಯುದ್ಧ ಟ್ಯಾಂಕರ್, ಯುದ್ಧವಿಮಾನಗಳು, ಹಾಗೂ ಆತ್ಯಧುನಿಕ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ಒಂದು ಹೆಜ್ಜೆ ಮುಂದಿದೆ.