Job Description: * ಪ್ರಸ್ತುತ ಬೀಜಿಂಗ್‌ ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ ನಲ್ಲಿ ಸ್ನೋಬೋರ್ಡ್ ಪಟು ಜೊಯಿ ಸ್ಯಾಡೊವ್‌ಸ್ಕಿ ಸೈನಟ್ ಅವರು ನ್ಯೂಜಿಲೆಂಡ್‌ಗೆ ಚಿನ್ನದ ಪದಕ ಜಯಿಸಿಕೊಟ್ಟಿದ್ದಾರೆ. * ಮಹಿಳೆಯರ ಸ್ಲೋಪಿ ಸ್ಟೈಲ್‌ ವಿಭಾಗದಲ್ಲಿ 20 ವರ್ಷದ ಸ್ಯಾಡೊವ್‌ಸ್ಕಿ ಅವರು ಅಮೆರಿಕಾದ ಜೂಲಿಯಾ ಮರಿನೊ ಹಾಗೂ ಆಸ್ಟ್ರೇಲಿಯಾದ ಟೆಸ್ ಕಾಡಿ ಅವರನ್ನು ಹಿಂದಿಕ್ಕಿ ಚಿನ್ನದ ಪದವನ್ನು ಗೆದ್ದಿದ್ದಾರೆ. ಪ್ರಸ್ತುತ ನ್ಯೂಜಿಲೆಂಡ್ ಗೆದ್ದ ಮೊಟ್ಟಮೊದಲ ಚಿನ್ನದ ಪದಕ ಇದಾಗಿದೆ. * ಈ ಹಿಂದೆ 2018 ರಲ್ಲಿ ನಡೆದಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ನ್ಯೂಜಿಲೆಂಡ್ ದೇಶಕ್ಕೆ ಒಂದು ಬೆಳ್ಳಿ ಹಾಗೂ '2' ಕಂಚಿನ ಪದಕಗಳು ಲಭಿಸಿದ್ದವು, ಆ ವರ್ಷದಲ್ಲಿ ಸ್ಯಾಡೊವ್‌ಸ್ಕಿ ಅವರು ಬಿಗ್ ಏರ್‌ ವಿಭಾಗದಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದ್ದರು. * ಇದೀಗ ಕ್ರಾಸ್ ಕಂಟ್ರಿ ಸ್ಕೀಯಿಂಗ್‌ನಲ್ಲಿ ರಷ್ಯಾದ ಅಲೆಕ್ಸಾಂಡರ್ ಬೊಲ್ಶುನೊವ್ ಅವರು ಚಿನ್ನದ ಪದಕವನ್ನು ಗೆದಿದ್ದಾರೆ. ಆದರೆ ಈ ಚಿನ್ನದ ಪದಕ ರಷ್ಯಾದ ರಾಷ್ಟ್ರಕ್ಕೆ ಸೇರಲಿಲ್ಲ, ಕಾರಣ ಕ್ರೀಡಾ ಪಟುಗಳು ಸಾಮೂಹಿಕವಾಗಿ ಉದ್ದೀಪನ(Drugs) ಮದ್ದು ಸೇವಿಸಿರುವ ಹಿನ್ನಲೆಯಿಂದಾಗಿ ರಷ್ಯಾ ರಾಷ್ಟ್ರವನ್ನು ಈ ಹಿಂದೆ 2014 ರ ಸೋಚಿ ಒಲಿಂಪಿಕ್ಸ್‌ನಿಂದ ನಿಷೇಧಿಸಲಾಗಿದೆ. ಪ್ರಸ್ತುತ ಈ ಬಾರಿ ಅಲ್ಲಿನ ಕ್ರೀಡಾಪಟುಗಳು ರಷ್ಯಾ ಒಲಿಂಪಿಕ್ ಸಮಿತಿಯ ಧ್ವಜದಡಿ ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. * ಜರ್ಮನಿಯ ಜೊಹಾನ್ಸ್‌ ಲುಡ್ವಿಂಗ್ ಅವರು ಪುರುಷರ ವಿಭಾಗದ ಲ್ಯೂಜ್ ಸ್ಪರ್ಧೆಯಲ್ಲಿ ಗಂಟೆಗೆ 133 ಕಿಮೀ ವೇಗದಲ್ಲಿ ಸಾಗಿ ಚಿನ್ನದ ಪದಕ ಜಯಿಸಿಕೊಂಡಿದ್ದಾರೆ. * ಸ್ಕೀ ಜಂಪಿಂಗ್‌ನಲ್ಲಿ ಜಪಾನ್‌ನ ರ‍್ಯೋಯು ಕೊಬಾಯಶಿ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ, ಪ್ರಸ್ತುತ ಈ ವಿಭಾಗದಲ್ಲಿ ಜಪಾನ್‌ ದೇಶಕ್ಕೆ ಲಭಿಸಿರುವ ಮೊದಲ ಚಿನ್ನ ಇದಾಗಿದೆ.