Job Description: * ಪ್ರಸ್ತುತ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(JNU)ಕ್ಕೆ ಹೊಸ ಕುಲಪತಿಗಳನ್ನು ನೇಮಕ ಮಾಡಲಾಗಿದೆ. ಆದರೆ ಶಿಕ್ಷಣ ಸಚಿವಾಲಯ ಇದೇ ಮೊದಲ ಬಾರಿಗೆ ಮಹಿಳಾ ಕುಲಪತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಅವರೇ ಸಾಂತಿಶ್ರೀ ಧೂಲಿಪುಡಿ ಪಂಡಿತ್. * ಇದೀಗ JNU'ನ ಕುಲಪತಿಯಾಗಿ ನೇಮಕವಾಗಿರುವ ಸಾಂತಿಶ್ರೀ ಧೂಲಿಪುಡಿ ಪಂಡಿತ್ JNU ಹಳೆ ವಿದ್ಯಾರ್ಥಿಯಾಗಿದ್ದಾರೆ, ಇವರು ಅಂತಾರಾಷ್ಟ್ರೀಯ ವ್ಯವಹಾರ ವಿಷಯದಲ್ಲಿ ph.D, ಹಾಗೂ ಎಂ.ಫಿಲ್ ಪದವಿಯನ್ನು ಹೊಂದಿದ್ದಾರೆ. ಇವರು ಈ ಮೊದಲು ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಇವರನ್ನು ಶಿಕ್ಷಣ ಸಚಿವಾಲಯ JNU'ನ ಕುಲಪತಿಗಳಾಗಿ ನೇಮಿಸಿದೆ. * ಪ್ರಸ್ತುತ ಎಂ ಜಗದೇಶ್ ಕುಮಾರ್ ಅವರ '5' ವರ್ಷಗಳ ಅವಧಿ ಮುಗಿದ ನಂತರ ಇವರು JNUನಲ್ಲಿ ಹಂಗಾಮಿ ವಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದರು, ಇದೀಗ ಇವರನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇನ್ನು ಸಾಂತಿಶ್ರೀ ಧೂಲಿಪುಡಿ ಪಂಡಿತ್ ಅವರನ್ನು ಮುಂದಿನ '5' ವರ್ಷಗಳ ಅವಧಿಗೆ JNU ನ ಕುಲಪತಿಗಳಾಗಿ ನೇಮಕ ಮಾಡಲು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಅನುಮೋದಿಸಿದ್ದಾರೆ. * ಈ ಹಿಂದೆ 1988 ರಲ್ಲಿ ಸಾಂತಿಶ್ರೀ ಪಂಡಿತ್ ಅವರು ತಮ್ಮ ಬೋಧನಾ ವೃತ್ತಿಯನ್ನು ಗೋವಾ ವಿಶ್ವವಿದ್ಯಾನಿಲಯದಿಂದ ಆರಂಭಿಸಿದ್ದಾರೆ. ಮತ್ತೆ ಇವರು 1993 ರಲ್ಲಿ ಪುಣೆ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಯಾದರು. ಇವರು ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಸ್ಥಾನದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಸಾಂತಿಶ್ರೀ ಪಂಡಿತ್ ಅವರು UGC, ICSSR ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಸಂದರ್ಶಕರ ನಾಮನಿರ್ದೇಶನದ ಸದಸ್ಯರಾಗಿದ್ದಾರೆ. * ಸಾಂತಿಶ್ರೀ ಪಂಡಿತ್ ಅವರು ತಮ್ಮ ವೃತ್ತಿಜೀವನದಲ್ಲಿ ಸುಮಾರು 29 ಪಿಎಚ್‌ಡಿಗಳಿಗೆ ಮಾರ್ಗದರ್ಶನವನ್ನು ಒದಗಿಸಿದ್ದಾರೆ.