Job Description: * ಪ್ರಸ್ತುತ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿರುವ ಟಾಟಾ ಓಪನ್ ಪ್ರಶಸ್ತಿಯ ಫೈನಲ್ ಹಂತದಲ್ಲಿ ಭಾರತದ ರೋಹನ್ ಬೋಪಣ್ಣ- ರಾಮ್ ಕುಮಾರ್ ಜೋಡಿಯು ಆಸ್ಟ್ರೇಲಿಯಾದ ಟೆನ್ನಿಸ್ ತಾರೆಯರಾದ ಲೂಕ್ ಹಾಗೂ ಜಾನ್ ಅವರನ್ನು ಸೋಲಿಸುವ ಮೂಲಕ ಪುರುಷರ ಡಬಲ್ಸ್ ವಿಭಾಗದ ಟಾಟಾ ಓಪನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದೀಗ ರೋಹನ್ ಹಾಗೂ ರಾಮ್ ಜೋಡಿಯು 2 ನೇ ATP ವರ್ಲ್ಡ್ ಟೂರ್ ಪ್ರಶಸ್ತಿ ಜಯಿಸಿಕೊಂಡರು. * ರೋಹನ್ ಬೋಪಣ್ಣ ಮತ್ತು ರಾಮ್ ಕುಮಾರ್ ಅವರು ಈ ಹಿಂದೆ ನಡೆದಿರುವ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಜೊತೆಯಾಗಿ ಆಡಿದ್ದರು. ಭಾರತೀಯ ಜೋಡಿಯು ಇದೀಗ ಈ ಪಂದ್ಯಾವಳಿಯಲ್ಲಿ ಮೊದಲ ಪ್ರಶಸ್ತಿಯನ್ನು ಜಯಿಸಿಕೊಂಡಿದೆ. * * ಮಹಾರಾಷ್ಟ್ರ ಓಪನ್ : ಇದನ್ನು ಪ್ರಾಯೋಜಕತ್ವದ ಹಿನ್ನಲೆಯಿಂದಾಗಿ ಟಾಟಾ ಓಪನ್ ಮಹಾರಾಷ್ಟ್ರ ಎಂದು ಕರೆಯುತ್ತಾರೆ. ಈ ಪಂದ್ಯಾವಳಿಯು ಭಾರತದ ಪುಣೆಯಲ್ಲಿನ ಹೊರಾಂಗಣ ಹಾರ್ಡ್ ಕೋರ್ಟ್‌ಗಳಲ್ಲಿ ನಡೆಸುವ ವೃತ್ತಿಪರ ಪುರುಷರ ಟೆನಿಸ್ ಪಂದ್ಯಾವಳಿಯಾಗಿದೆ. ಪ್ರಸ್ತುತ ಇದು ಇದು ATP ಟೂರ್‌ನಲ್ಲಿ ATP ಟೂರ್ ನ 250 ಸರಣಿಯ ಭಾಗವಾಗಿದೆ. * ಈ ಪಂದ್ಯಾವಳಿಯು ಮೊದಲ ಉದ್ಘಾಟನಾ ಕಾರ್ಯಕ್ರಮವು ನವದೆಹಲಿಯಲ್ಲಿ ಜರುಗಿತು, ನಂತರ ಇದನ್ನು 2 ನೇ ಆವೃತ್ತಿಯಿಂದ ಚೆನ್ನೈಗೆ ಸ್ಥಳಾಂತರಿಸಲಾಯಿತು, ಮತ್ತೇ ಅಲ್ಲಿಂದ 2018 ರಲ್ಲಿ ಪುಣೆಗೆ ಮರಳಿ ಸ್ಥಳಾಂತರಿಸಲಾಯಿತು, ಇದೀಗ ಪುಣೆಯಲ್ಲಿ ಈ ಪಂದ್ಯಾವಳಿಗಳನ್ನೂ ಜನವರಿ ತಿಂಗಳಿನಲ್ಲಿ ನಡೆಸಲಾಗುತ್ತದೆ. ಸದ್ಯ ಈ ಪಂದ್ಯಾವಳಿಯನ್ನು RISE ವರ್ಲ್ಡ್‌ವೈಡ್ ಒಡೆತನದಲ್ಲಿದೆ ಆಯೋಜಿಸಲಾಗಿದೆ. * ಪ್ರಸ್ತುತ ಮಹಾರಾಷ್ಟ್ರ ಓಪನ್ ಭಾರತದಲ್ಲಿ ನಡೆಯುತ್ತಿರುವ ಏಕೈಕ ಪ್ರವಾಸ ಮಟ್ಟದ ಟೆನ್ನಿಸ್ ಪಂದ್ಯವಾಗಿದೆ. ಹಾಗೂ ಇದೊಂದು ದಕ್ಷಿಣ ಏಷ್ಯಾದ ಏಕೈಕ ATP ಟೂರ್ ವೃತ್ತಿಪರ ಟೆನಿಸ್ ಆಟವಾಗಿದೆ. ಮಹಾರಾಷ್ಟ್ರ ಲಾನ್ ಟೆನ್ನಿಸ್ ಅಸೋಸಿಯೇಷನ್ (MLTA) ಈ ಪಂದ್ಯಾವಳಿಗಳನ್ನೂ ವಾರ್ಷಿಕವಾಗಿ ಆಯೋಜಿಸುತ್ತದೆ. * ಸ್ಟಾನ್ ವಾವ್ರಿಂಕಾ ಅವರು ಈವೆಂಟ್‌ನಲ್ಲಿ ಅತ್ಯಂತ ಯಶಸ್ವಿ ಆಟಗಾರರಾಗಿದ್ದಾರೆ, ಇವರು '4' ಬಾರಿ 2011, 2014, 2015, ಹಾಗೂ 2016 ಪ್ರಶಸ್ತಿಗಳನ್ನು ಜಯಿಸಿದ್ದಾರೆ. * ಭಾರತದ ಜೋಡಿ ಮಹೇಶ್ ಭೂಪತಿ ಹಾಗೂ ಲಿಯಾಂಡರ್ ಪೇಸ್ ಅವರು 1997 ಮತ್ತು 2002 ರ ಮಧ್ಯೆ '4' ಬಾರಿ ಹಾಗೂ 2011 ರಲ್ಲಿ ಡಬಲ್ಸ್ ಪ್ರಶಸ್ತಿಗಳನ್ನು ಜಯಿಸಿಕೊಂಡಿದ್ದಾರೆ. * ಈ ಪಂದ್ಯಾವಳಿಗಳನ್ನು ಕೋವಿಡ್-19 ಹಾಗೂ ಆಸ್ಟ್ರೇಲಿಯನ್ ಓಪನ್‌ನೊಂದಿಗೆ ದಿನಾಂಕಗಳ ಗೊಂದಲದಿಂದಾಗಿ 2021 ರಲ್ಲಿ ಆಯೋಜಿಸಲಾಗಿಲ್ಲಾ. ಪ್ರಸ್ತುತ ಮಹಾರಾಷ್ಟ್ರ ಓಪನ್ ಪಂದ್ಯಾವಳಿಗಳನ್ನು ವಾರ್ಷಿಕವಾಗಿ ಭಾರತದಲ್ಲಿ ಪುಣೆಯಲ್ಲಿನ ಮ್ಲುಂಗೆ ಬಾಲೆವಾಡಿ ಟೆನಿಸ್ ಕಾಂಪ್ಲೆಕ್ಸ್‌ನಲ್ಲಿ ನಡೆಸಲಾಗುತ್ತದೆ.