Job Description: * ಇತ್ತೀಚಿಗೆ ಭಾರತೀಯ ಕ್ರಿಕೆಟ್ ತಂಡವು 2022 ರ ಫೆಬ್ರವರಿ 6 ರಂದು ತನ್ನ 1000 ನೇ ODI (ಏಕದಿನ ಅಂತಾರಾಷ್ಟ್ರೀಯ) ಪಂದ್ಯವನ್ನು ಆಡಿದೆ. ಭಾರತ ತಂಡವು ಈ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡದ ವಿರುದ್ಧ ಆಡಿ ಪಂದ್ಯವನ್ನು ಗೆದ್ದುಕೊಂಡಿದೆ. * ಭಾರತ ಕ್ರಿಕೆಟ್ ತಂಡವು 1000 ODI ಪಂದ್ಯಗಳನ್ನು ಪೂರೈಸಿದ ವಿಶ್ವದ ಮೊದಲ ತಂಡವಾಗಿ ಹೊರ ಹೊಮ್ಮಿದೆ. ಈ ತಂಡವು ಇಲ್ಲಿಯವರೆಗೆ '2' ಏಕದಿನ ವಿಶ್ವಕಪ್ ಹಾಗೂ ಒಂದು ಟಿ20 ವಿಶ್ವಕಪ್ ನ್ನು ಜಯಿಸಿಕೊಂಡಿದೆ. ಭಾರತ ತಂಡವು ಆಡಿರುವ 1000 ಏಕದಿನ ಪಂದ್ಯಗಳಲ್ಲಿ 519 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅವುಗಲ್ಲಿ '9' ಪಂದ್ಯಗಳು ಟೈ ಹಾಗೂ ಇನ್ನು 41 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಯಾಗಿವೆ. * ಪ್ರಸ್ತುತ ಭಾರತ ತಂಡವು ಅತಿ ಹೆಚ್ಚು ಪಂದ್ಯಗಳನ್ನು ಆಡಿದೆ, ಇದರ ನಂತರ ಆಸ್ಟ್ರೇಲಿಯ ತಂಡವು ಅತಿ ಹೆಚ್ಚು ಪಂದ್ಯಗಳನ್ನು ಆಡಿದ ತಂಡವಾಗಿದೆ. ಇಲ್ಲಿಯವರೆಗೆ ಆಸ್ಟ್ರೇಲಿಯಾ ತಂಡವು 958 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಇದರ ನಂತರ ಪಾಕಿಸ್ತಾನ ತಂಡವು 936 ಏಕದಿನ ಪಂದ್ಯಗಳನ್ನು ಆಡಿದೆ. * * (One Day International) ODI : ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪೂರ್ಣ ಸಮಯದ ಸದಸ್ಯರಾಗಿರುವ ತಂಡಗಳ ನಡುವೆ ODI ಪಂದ್ಯಗಳನ್ನು ಆಡಲಾಗುತ್ತದೆ. ಇದೀಗ ಲಿಸ್ಟ್-ಎ ಕ್ರಿಕೆಟ್ ನಿಗದಿತ ಓವರ್‌ಗಳನ್ನು ಹೊಂದಿರುವ ಒಂದು ರೀತಿಯ ಕ್ರಿಕೆಟ್ ಆಗಿದೆ. ಕ್ರಿಕೆಟ್‌ನ ಇತರ ಪ್ರಕಾರಗಳೆಂದರೆ ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಟ್ವೆಂಟಿ-20 ಕ್ರಿಕೆಟ್ ಗಳಾಗಿವೆ. * ಪ್ರಸ್ತುತ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಪ್ರತಿನಿಧಿಗಳು ಈ ಹಿಂದೆ 1909 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇದನ್ನು ಇಂಪೀರಿಯಲ್ ಕ್ರಿಕೆಟ್ ಕಾನ್ಫರೆನ್ಸ್ ಎಂದು ಸ್ಥಾಪನೆ ಮಾಡಿ ಇದನ್ನು ರಚಿಸಿದ್ದಾರೆ. ಹಾಗೂ ಇದನ್ನು 1987 ರಲ್ಲಿ ICC ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ ICC ಯ ಪ್ರಧಾನ ಕಛೇರಿಯು ದುಬೈ (UAE)ನಲ್ಲಿದೆ. ಟೆಸ್ಟ್ ಪಂದ್ಯಗಳನ್ನು ICC ನಡೆಸುವುದಿಲ್ಲ. ಹಾಗೂ ICC ದೇಶದೊಳಗೆ ನಡೆಯುವ ದೇಶೀಯ ಪಂದ್ಯಗಳನ್ನು ನಡೆಸುವುದಿಲ್ಲ. ಅಲ್ಲದೇ IPL ನ್ನು ನಡೆಸುವುದಿಲ್ಲ. IPL (ಇಂಡಿಯನ್ ಪ್ರೀಮಿಯರ್ ಲೀಗ್) ಈ ಪಂದ್ಯಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು(BCCI) ನಡೆಸುತ್ತದೆ. * ಸದ್ಯ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಮೆನ್ ಇನ್ ಬ್ಲೂ ಅಥವಾ ಟೀಮ್ ಇಂಡಿಯಾ ಎಂದು ಕರೆಯುತ್ತಾರೆ. ಇದನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ನಿಯಂತ್ರಿಸುತ್ತದೆ. ಪ್ರಸ್ತುತ ರಾಹುಲ್ ದ್ರಾವಿಡ್ ಅವರು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿದ್ದಾರೆ. * ಭಾರತ ದೇಶವು 1926 ರಿಂದ ICC ಯ ಪೂರ್ಣ ಸಮಯದ ಸದಸ್ಯವಾಗಿದೆ. ಸದ್ಯ ಭಾರತ ತಂಡವು ಟೆಸ್ಟ್ ಸರಣಿಯಲ್ಲಿ 3 ನೇ ಸ್ಥಾನದಲ್ಲಿದೆ, ODI ನಲ್ಲಿ 4 ನೇ ಸ್ಥಾನದಲ್ಲಿದೆ. ಹಾಗೂ T20 ನಲ್ಲಿ 2 ನೇ ಸ್ಥಾನದಲ್ಲಿದೆ. ಇದೀಗ ಭಾರತ ಕ್ರಿಕೆಟ್ ತಂಡವು ಆಟಗಳಲ್ಲಿ ಉತ್ತಮ ಪ್ರದರ್ಶವನ್ನು ನೀಡುತ್ತಿದೆ.