Job Description: * ಪ್ರಸ್ತುತ ಚೀನಾದ ಬೀಜಿಂಗ್ ನಲ್ಲಿನ ಚಳಿಗಾಲದ ಒಲಿಂಪಿಕ್ಸ್ ನ ಆರಂಭ ಹಾಗೂ ಮುಕ್ತಾಯ ಸಮಾರಂಭಗಳನ್ನು ಇದೀಗ ಭಾರತ ದೇಶವು ಬಹಿಷ್ಕರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂಡಮ್ ಬಾಗ್ಚಿ ಅವರು ಹೇಳಿಕೆ ನೀಡಿದ್ದಾರೆ. * ಚೀನಾ ಈ ಒಲಿಂಪಿಕ್ಸ್ ನ್ನು ರಾಜಕೀಯಗೊಳಿಸಲು ಆಯ್ಕೆ ಮಾಡಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ ಈ ಬಾರಿಯ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ನ ಉದ್ಘಾಟನಾ ಅಥವಾ ಮುಕ್ತಾಯ ಸಮಾರಂಭದಲ್ಲಿ ಭಾರತೀಯ ರಾಯಭಾರಿ ಭಾಗವಹಿಸುವುದಿಲ್ಲ ಎಂದು ತಿಳಿಸಿದೆ. * ಪ್ರಸ್ತುತ ಹಿಮಾಲಯದ ಘರ್ಷಣೆಯಲ್ಲಿ ಭಾಗಿಯಾಗಿದ್ದ ಚೀನಾದ ಸೈನಿಕರು ಸಾಂಪ್ರದಾಯಿಕ ಟಾರ್ಚ್ ರಿಲೇಯಲ್ಲಿ ಪಾಲ್ಗೊಂಡಿರುವ, ಗಾಲ್ವಾನ್‌ ಹುತಾತ್ಮರನ್ನ ಅವಹೇಳನ ಮಾಡಿರುವ ಕಾರಣದಿಂದಾಗಿ ಭಾರತವು ಈ ನಿರ್ಣಯವನ್ನು ಕೈಗೊಂಡಿದೆ. * 2022 ರ ಚಳಿಗಾಲದ ಒಲಿಂಪಿಕ್ಸ್ ಅಂತರರಾಷ್ಟ್ರೀಯ ಚಳಿಗಾಲದ ಬಹು-ಕ್ರೀಡಾ ಕಾರ್ಯಕ್ರಮವಾಗಿದೆ, ಇದನ್ನು 2022 ಫೆಬ್ರವರಿ. 04 ರಂದು ಚೀನಾದ ಬೀಜಿಂಗ್‌ನಲ್ಲಿ ಯಾಂಕ್ವಿಂಗ್ ಮತ್ತು ಚೋಂಗ್ಲಿಯಲ್ಲಿ ಕೆಲವು ಕಾರ್ಯಕ್ರಮಗಳೊಂದಿಗೆ ಆರಂಭಿಸಲು ನಿರ್ಧರಿಸಲಾಗಿದೆ. ಇದರ ಪೂರ್ವಭಾವಿ ಸಭೆಯ ಫೆಬ್ರವರಿ. 02 ರಂದು ಆರಂಭವಾಗಿದೆ. * ಈ ಹಿಂದೆ 2015 ರ ಜುಲೈ ನಲ್ಲಿ ಕೌಲಾಲಂಪುರದಲ್ಲಿ ಜರುಗಿದ 128 ನೇ IOC ಅಧಿವೇಶನದಲ್ಲಿ ಬೀಜಿಂಗ್'ನ್ನು ಅತಿಥೇಯ ನಗರವಾಗಿ ಆಯ್ಕೆ ಮಾಡಲಾಗಿದೆ. 2022 ರ ಚಳಿಗಾಲದ ಒಲಂಪಿಕ್ಸ್ ಚೀನಾದಲ್ಲಿ ಮೊದಲ ಚಳಿಗಾಲದ ಒಲಿಂಪಿಕ್ಸ್ ಆಗಿದೆ, ಬೀಜಿಂಗ್ ಬೇಸಿಗೆ ಹಾಗೂ ಚಳಿಗಾಲದ ಒಲಿಂಪಿಕ್ಸ್ ಎರಡನ್ನು ಆಯೋಜಿಸಿದ ಮೊದಲ ನಗರವಾಗಿದೆ. ಈ ಹಿಂದೆ 2008 ರ ಬೇಸಿಗೆ ಒಲಿಂಪಿಕ್ಸ್‌ಗಾಗಿ ಮೂಲತಃ ನಿರ್ಮಿಸಲಾದ '4' ಅಸ್ತಿತ್ವದಲ್ಲಿರುವ ಒಳಾಂಗಣ ಸ್ಥಳಗಳನ್ನು ಬಳಕೆ ಮಾಡುವದಾಗಿ ತಿಳಿಸಿತ್ತು. ಆದರೆ ಬೀಜಿಂಗ್ ರಾಷ್ಟ್ರೀಯ ಕ್ರೀಡಾಂಗಣವು ಮತ್ತೆ ಉದ್ಘಾಟನಾ ಸಮಾರಂಭಗಳನ್ನು ಆಯೋಜಿಸುತ್ತದೆ. ಪ್ರಸ್ತುತ ಚೀನಾದ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ನ್ನು ಆಯೋಜಿಸುವ ದೊಡ್ಡ ನಗರವಾಗಿದೆ. * ಪ್ರಸ್ತುತ 2022 ರ ಕ್ರೀಡಾಕೂಟಗಳು ಚೀನಾದಲ್ಲಿ ನಡೆಯುತ್ತಿರುವ ಉಯ್ಘರ್ ನರಮೇಧ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಿಂದಾಗಿ ಕಾಳಜಿ ಹಾಗೂ ವಿವಾದ ಮತ್ತು ರಾಜತಾಂತ್ರಿಕವಾಗಿ ಬಹಿಷ್ಕಾರಗಳಿಗೆ ಒಳಪಟ್ಟಿದೆ ಎನ್ನಲಾಗಿದೆ.