Job Description: * ಪ್ರಸ್ತುತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಾಗಿ 1000 ತ್ವರಿತ ಚಾರ್ಜಿಂಗ್ ಕೇಂದ್ರಗಳ ಸೌಲಭ್ಯ ಸ್ಥಾಪಿಸಲು ಎಥರ್ ಎನರ್ಜಿ(Ather Energy) ಹಾಗೂ ಎಸ್ಕಾಂ(Escom)ನ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. * ಪ್ರಸ್ತುತ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನಗಳಿಗೆ ಎಥರ್ ಎನರ್ಜಿ ಕಂಪನಿಯು ಉಚಿತವಾಗಿ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸಲಿದೆ. ಹಾಗೂ ಇದಕ್ಕೆ ಅಗತ್ಯವಿರುವ ಸೌಲಭ್ಯಗಳಿಗೆ ತಾಂತ್ರಿಕ ಬೆಂಬಲವನ್ನು ಎಸ್ಕಾಂ ಒದಗಿಸಲಿವೆ ಎಂದು ತಿಳಿಸಿದ್ದಾರೆ. *ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಎಥರ್ ಎನರ್ಜಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ತರುಣ್ ಮೆಹ್ತಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು. * ಅಥರ್ ಎನರ್ಜಿ: ಇದೊಂದು ಭಾರತದ ಎಲೆಕ್ಟ್ರಿಕ್ ವಾಹನ ಕಂಪನಿಯಾಗಿದೆ, ಇದು ತನ್ನ ಪ್ರಧಾನ ಕಛೇರಿಯನ್ನು ರಾಜಧಾನಿ ಬೆಂಗಳೂರಿನಲ್ಲಿ ಹೊಂದಿದೆ. ಈ ಕಂಪನಿಯನ್ನು 2013 ರಲ್ಲಿ ತರುಣ್ ಮೆಹ್ತಾ ಹಾಗೂ ಸ್ವಪ್ನಿಲ್ ಜೈನ್ ಅವರು ಸ್ಥಾಪಿಸಿದ್ದಾರೆ. ಸದ್ಯ ಈ ಕಂಪನಿ ಎರಡು ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುತ್ತದೆ. 01) ಅಥರ್ 450X 02) ಅಥರ್ 450 ಪ್ಲಸ್. ಇದೀಗ ಅಥರ್ ಗ್ರಿಡ್ ಎಂಬುವದು ದೇಶದಾದ್ಯಂತ ವಿದ್ಯುತ್ ವಾಹನ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಿದೆ. * ಈ ಕಂಪನಿಯು 2021 ರ ಜನವರಿ 02 ರಂದು ತಮಿಳುನಾಡಿನ ಹೊಸೂರಿನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಅಥರ್ ಎನರ್ಜಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಹೊಸ ಅಥರ್ ಕಾರ್ಖಾನೆಯು ವಾರ್ಷಿಕ 1,10,000 ಸ್ಕೂಟರ್‌ಗಳು ಮತ್ತು 1,20,000 ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಸದ್ಯ ಈ ಕಂಪನಿಯು 15 ರಾಜ್ಯಗಳ 27 ನಗರಗಳಲ್ಲಿ ಅಸ್ತಿತ್ವವನ್ನು ಹೊಂದಿದೆ. * ಎಲೆಕ್ಟ್ರಿಸಿಟಿ ಸಪ್ಲೈ ಕಾರ್ಪೋರೇಶನ್ ಆಫ್ ಮಲಾವಿ(ESCOM): ಮಲಾವಿ(Malawi) ಲಿಮಿಟೆಡ್'ನ ವಿದ್ಯುತ್ ಸರಬರಾಜು ನಿಗಮವು ಸರ್ಕಾರಿ ಸ್ವಾಮ್ಯದ ವಿದ್ಯುತ್ ಪ್ರಸರಣ ಹಾಗೂ ವಿತರಣಾ ಕಂಪನಿಯಾಗಿದೆ. ಇದು ದೇಶದಲ್ಲಿ ವಿದ್ಯುತ್ ಶಕ್ತಿಯ ಪ್ರಸರಣ ಹಾಗೂ ವಿತರಣೆಯ ಸಂಪೂರ್ಣ ನಿಯಂತ್ರಣ ಮಾಡುತ್ತದೆ. ESCOM ದಕ್ಷಿಣ ಆಫ್ರಿಕಾದ ಪವರ್ ಪೂಲ್‌ನಲ್ಲಿ ಮಲಾವಿಯನ್ನು ಪ್ರತಿನಿಧಿಸುತ್ತದೆ. * ಈ ಹಿಂದೆ 1980 ರ ದಶಕದಲ್ಲಿ ಆರಂಭದಲ್ಲಿ ರಚಿಸಿದಾಗ, ಮಲಾವಿಯಾದ್ಯಂತ ಉತ್ಪಾದನೆ ಪ್ರಸರಣ ಹಾಗೂ ವಿದ್ಯುತ್ ಶಕ್ತಿಯ ವಿತರಣೆಯ ಕಾರ್ಯಗಳನ್ನು ESCOM ಏಕಸ್ವಾಮ್ಯಗೊಳಿಸಿತು. ಎಸ್ಕಾಮ್ ಬೃಹತ್-ಖರೀದಿದಾರ, ಪ್ರಸರಣ ಹಾಗೂ ಗ್ರಾಹಕರಿಗೆ ವಿತರಣೆಯ ಪಾತ್ರವನ್ನು ಹೊಂದಿದೆ. ಎಸ್ಕಾಮ್ ವಿದೇಶಿ ಗ್ರಾಹಕರಿಗೆ ಮಾರಾಟ ಮಾಡುವ ಏಕೈಕ ಸಂಸ್ಥೆಯಾಗಿದೆ.