Job Description: * ಪ್ರಸ್ತುತ ಭಾರತೀಯ ಕೋಸ್ಟಲ್ ಗಾರ್ಡ್ ಫೆಬ್ರವರಿ. 1 ರಂದು ತನ್ನ 46 ನೇ ಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಇದೀಗ ಭಾರತವು ವಿಶ್ವದ 4 ನೇ ಅತಿದೊಡ್ಡ ಕೋಸ್ಟ್ ಗಾರ್ಡ್ ಆಗಿದೆ, ಹಾಗೂ ಇದನ್ನು 1977 ರಲ್ಲಿ ಸ್ಥಾಪನೆ ಮಾಡಲಾಗಿದೆ. ಭಾರತೀಯ ಕೋಸ್ಟಲ್ ಗಾರ್ಡ್ ತನ್ನ ದಾಸ್ತಾನುಗಳಲ್ಲಿ ಸುಮಾರು 158 ಹಡಗುಗಳು ಹಾಗೂ 70 ವಿಮಾನಗಳನ್ನೂ ಹೊಂದಿರುವ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಮುಂಬರುವ 2025 ರ ವೇಳೆಗೆ 200 ಮೇಲ್ಮೈ ವೇದಿಕೆಗಳು ಹಾಗೂ 80 ವಿಮಾನಗಳ ಗುರಿಯ ಬಲದ ಮಟ್ಟವನ್ನು ತಲುಪುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. * ಪ್ರಸ್ತುತ 'ವಯಂ ರಕ್ಷಮಃ' (ನಾವು ರಕ್ಷಿಸುತ್ತೇವೆ) ಎಂಬುವದು ಭಾರತೀಯ ಕೋಸ್ಟ್ ಗಾರ್ಡ್‌ನ ಧ್ಯೇಯವಾಕ್ಯವಾಗಿದೆ. * ಇಂಡಿಯನ್ ಕೋಸ್ಟ್ ಗಾರ್ಡ್ (ICG): ಭಾರತದ ಕಡಲ ಕಾನೂನು ಜಾರಿ ಹಾಗೂ ಹುಡುಕಾಟದ ಸಂಸ್ಥೆಯಾಗಿದೆ, ಇದು ಅದರ ಪಕ್ಕದ ವಲಯ ಹಾಗೂ ವಿಶೇಷ ಆರ್ಥಿಕ ವಲಯ ಸೇರಿ ಅದರ ಪ್ರಾದೇಶಿಕ ನೀರಿನ ಮೇಲೆ ಅಧಿಕಾರವನ್ನು ಹೊಂದಿದೆ. ಪ್ರಸ್ತುತ ಭಾರತೀಯ ಕೋಸ್ಟ್ ಗಾರ್ಡ್'ನ್ನು ಈ ಹಿಂದೆ 1977 ರ ಫೆಬ್ರವರಿ. 01 ರಂದು ಭಾರತದ ಸಂಸತ್ತಿನ ಕರಾವಳಿ ಕಾವಲು ಕಾಯಿದೆ, 1978 ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ ಇಂಡಿಯನ್ ಕೋಸ್ಟ್ ಗಾರ್ಡ್ ಸಂಸ್ಥೆಯು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. * ಕೋಸ್ಟ್ ಗಾರ್ಡ್ ಭಾರತೀಯ ನೌಕಾಪಡೆ, ಮೀನುಗಾರಿಕೆ ಇಲಾಖೆ, ಕಂದಾಯ ಇಲಾಖೆ ಹಾಗೂ ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟ ಸಹಕಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಈ ಇಂಡಿಯನ್ ಕೋಸ್ಟ್ ಗಾರ್ಡ್ ಪಡೆಯು ಕರಾವಳಿ ಪ್ರದೇಶಗಳಲ್ಲಿ ಕಳ್ಳಸಾಗಣೆ ಚಟುವಟಿಕೆಗಳನ್ನು ತಡೆಗಟ್ಟಲು ಸ್ಥಾಪಿಸಲಾಗಿದೆ. ಈ ಭಾರತೀಯ ಕೋಸ್ಟ್ ಗಾರ್ಡ್‌ ಕಡಲಾಚೆಯ ಭದ್ರತೆ, ಸಮುದ್ರ ಸುರಕ್ಷತೆ ಹಾಗೂ ಕರಾವಳಿ ಭದ್ರತೆ ಕಾಪಾಡುವದಾಗಿದೆ. * ಇಂಡಿಯನ್ ಕೋಸ್ಟ್ ಗಾರ್ಡ್: ಇದು ಕಡಲಾಚೆಯ ಟರ್ಮಿನಲ್‌ಗಳಿಗೆ ರಕ್ಷಣೆಯನ್ನು ನೀಡುತ್ತದೆ, ಹಾಗೂ ಮೀನುಗಾರರು ಮತ್ತು ನಾವಿಕರನ್ನು ರಕ್ಷಿಸಲು ಸಹಾಯವನ್ನು ಮಾಡುವ ಗುರಿಯನ್ನು ಹೊಂದಿದೆ. ಅಷ್ಟೇ ಅಲ್ಲದೆ ಕಂದಾಯ ಇಲಾಖೆ ಹಾಗೂ ಇತರ ಅಧಿಕಾರಿಗಳಿಗೆ ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಯಲ್ಲಿ ಈ ಪಡೆಯು ಸಹಾಯ ಮಾಡುತ್ತದೆ. ಇದರ ಜೊತೆಗೆ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ನೀರಿನಲ್ಲಿ ಕಾನೂನು ಜಾರಿಯನ್ನು ನೋಡಿಕೊಳ್ಳುತ್ತಾರೆ. * ಪ್ರಸ್ತುತ ಭಾರತೀಯ ಕೋಸ್ಟ್ ಗಾರ್ಡ್ ವಿಶ್ವದ ಇತರ ಕೋಸ್ಟ್ ಗಾರ್ಡ್‌ಗಳೊಂದಿಗೆ ವ್ಯಾಯಾಮಗಳನ್ನು ನಡೆಸುತ್ತದೆ. 2005 ರ ಮೇ ತಿಂಗಳಿನಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ ಜೊತೆಗೆ ಸಂಪರ್ಕವನ್ನು ಸ್ಥಾಪಿಸಲು ಸಿದ್ದವಾಯಿತು. ಮತ್ತೇ 2006 ರಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಜಪಾನೀಸ್ ಹಾಗೂ ಕೊರಿಯಾದ ಸಹವರ್ತಿಗಳೊಂದಿಗೆ ವ್ಯಾಯಾಮವನ್ನು ನಡೆಸಿತು. * ಇಂಡಿಯನ್ ಕೋಸ್ಟ್ ಗಾರ್ಡ್ 2023 ರ ವೇಳೆಗೆ ತನ್ನ ನೌಕಾಪಡೆಯಲ್ಲಿ 200 ಹಡಗುಗಳು ಹಾಗೂ 100 ಅವಳಿ-ಎಂಜಿನ್ ವಿಮಾನಗಳನ್ನು ಹೊಂದುವ ಗುರಿ ಹೊಂದಿದೆ. * ಭಾರತೀಯ ಕೋಸ್ಟ್ ಗಾರ್ಡ್ ಸಂಘಟನೆಯು ನವದೆಹಲಿಯಲ್ಲಿರುವ ಕೋಸ್ಟ್ ಗಾರ್ಡ್ ಹೆಡ್ ಕ್ವಾರ್ಟರ್ಸ್ ನಲ್ಲಿರುವ ಡೈರೆಕ್ಟರ್-ಜನರಲ್ ನೇತೃತ್ವದಲ್ಲಿದೆ. ಇಂಡಿಯನ್ ಕೋಸ್ಟ್ ಗಾರ್ಡ್‌ನ ಡೈರೆಕ್ಟರ್-ಜನರಲ್ ಅವರು ಭಾರತೀಯ ನೌಕಾಪಡೆಯ ವೈಸ್ ಅಡ್ಮಿರಲ್‌ಗೆ ಸಮಾನರಾಗಿದ್ದಾರೆ. ಪ್ರಸ್ತುತ ಡೈರೆಕ್ಟರ್-ಜನರಲ್ ವೀರೇಂದ್ರ ಸಿಂಗ್ ಪಠಾನಿಯಾ ಅವರಿದ್ದಾರೆ. * ಭಾರತೀಯ ಕೋಸ್ಟ್ ಗಾರ್ಡ್ '5' ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ ಈ '5' ಪ್ರದೇಶವು ಇನ್ಸ್ಪೆಕ್ಟರ್-ಜನರಲ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿರುತ್ತವೆ. * ಕೋಸ್ಟ್ ಗಾರ್ಡ್'ನ ಪ್ರದೇಶಗಳು ಮತ್ತು ಕಮಾಂಡರ್: - ಪಶ್ಚಿಮ ಪ್ರದೇಶ (W) ಮುಂಬೈ IG ಎಸ್ ಪರಮೇಶ್. - ಪೂರ್ವ ಪ್ರದೇಶ (E) ಚೆನ್ನೈ IG ಪ್ರಕಾಶ್ ಬಡೋಲಾ. - ಈಶಾನ್ಯ ಪ್ರದೇಶ (NE) ಕೋಲ್ಕತ್ತಾ IG AK ಹರ್ಬೋಲಾ. - ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶ (A&N) ಪೋರ್ಟ್ ಬ್ಲೇರ್ IG ಮನೀಶ್ ವಿ ಪಾಠಕ್. - ವಾಯುವ್ಯ ಪ್ರದೇಶ (NW) ಗಾಂಧಿನಗರ IG ರಾಕೇಶ್ ಪಾಲ್ ಅವರಾಗಿದ್ದಾರೆ.