Job Description: * ಪ್ರಸ್ತುತ ಇಂಗ್ಲೆಂಡ್ ಆಲ್ ರೌಂಡರ್ ಟಿಮ್ ಬ್ರೆಸ್ನನ್(Tim Bresnan) ಅವರು ತಮ್ಮ ಕೌಂಟಿ ತಂಡದ 8 ನೇ ಕೌಂಟಿ ಚಾಂಪಿಯನ್ ಶಿಪ್ ಪ್ರಶಸ್ತಿ ಜಯಿಸಿದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. * ತಿಮೋತಿ ಥಾಮಸ್ ಬ್ರೆಸ್ನನ್ ಇವರೊಬ್ಬ ಇಂಗ್ಲಿಷ್ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದಾರೆ, ಇತ್ತೀಚಿಗೆ ಇವರು ಕೊನೆಯದಾಗಿ ವಾರ್ವಿಕ್‌ಷೈರ್‌ಗಾಗಿ ಆಡಿದ್ದಾರೆ. ಇವರು ವೇಗದ-ಮಧ್ಯಮ ಬೌಲರ್ ಆಗಿದ್ದಾರೆ. * ಬ್ರೆಸ್ನನ್ 2002 ಮತ್ತು 2003 ರಲ್ಲಿ NBC ಡೆನಿಸ್ ಕಾಂಪ್ಟನ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಹಾಗೂ 2006 ರ ಜೂನ್'ನಲ್ಲಿ ಇವರನ್ನು ಇಂಗ್ಲೆಂಡ್ ಏಕದಿನ ಅಂತರಾಷ್ಟ್ರೀಯ ತಂಡಕ್ಕೆ ಸೇರಿಸಲಾಯಿತು, ಮತ್ತೇ 2009 ರ ಮೇ ನಲ್ಲಿ ಇವರು ಟೆಸ್ಟ್ ತಂಡವನ್ನು ಸೇರಿಕೊಂಡರು, ನಂತರ 2010–11 ರ ಆಶಸ್ ಸರಣಿಗೆ ಆಯ್ಕೆಯಾದರು. ಇವರು ಇತ್ತೀಚಿಗೆ 2022 ರ ಜನವರಿಯಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. * ಬ್ರೆಸ್ನನ್ ಅವರು ಈ ಹಿಂದೆ 2007 ರ ಏಪ್ರಿಲ್'ನಲ್ಲಿ ತಮ್ಮ ಮೊದಲ ಪ್ರಥಮ ದರ್ಜೆ ಶತಕವನ್ನು ಓವಲ್‌ನಲ್ಲಿ ಸರ್ರೆ ವಿರುದ್ಧದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಬಾರಿಸಿದ್ದಾರೆ, ಇವರು ಪ್ರಥಮ ದರ್ಜೆಯಲ್ಲಿ 1,000 ರನ್‌ಗಳ ಕಲೆಹಾಕಿರುವ ಸಾಧನೆಯನ್ನು ಹೊಂದಿದ್ದಾರೆ. * ಬ್ರೆಸ್ನನ್ ಅವರು 2007 ರಲ್ಲಿ16 ಪ್ರಥಮ ದರ್ಜೆ ಪಂದ್ಯಗಳಿಂದ 48.50 ಸರಾಸರಿಯಲ್ಲಿ '3' ಶತಕಗಳನ್ನು ಬಾರಿಸಿ ಒಟ್ಟು 679 ರನ್'ಗಳನ್ನೂ ಕಲೆಹಾಕಿದ್ದಾರೆ. ಹಾಗೂ 34.02 ಸರಾಸರಿಯಲ್ಲಿ 35 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಹಿಂದೆ 2017 ರಲ್ಲಿ ಲಂಕಾಶೈರ್ ವಿರುದ್ಧದ T20 ಬ್ಲಾಸ್ಟ್ ರೋಸಸ್ ಪಂದ್ಯದ ವೇಳೆಯಲ್ಲಿ 19 ಕ್ಕೆ 6 ವಿಕೆಟ್ ಗಳನು ಕಬಳಿಸಿದ್ದಾರೆ. * ಈ ಹಿಂದೆ 2020 ರ ಜೂನ್ ನಲ್ಲಿ ಬ್ರೆಸ್ನನ್ ಅವರು ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ನ್ನು ಹೊರಬರಲು ಒಪ್ಪಿಕೊಂಡರು, ಇವರು 2020 ರಲ್ಲಿ ಸಾಲದ ಮೇಲೆ ವಾರ್ವಿಕ್‌ಷೈರ್‌ಗೆ ಸೇರಿಕೊಂಡರು, ಹಾಗೂ 2021 ಮತ್ತು 2022 ರ ಕ್ರೀಡಾ ವರ್ಷಗಳಿಗೆ ಕ್ಲಬ್‌ನ ಜೊತೆಗೆ ಎರಡು ವರ್ಷಗಳ ಶಾಶ್ವತ ಒಪ್ಪಂದಕ್ಕೆ ಸಹಿ ಹಾಕಿದರು. ಆದರೆ ಇತ್ತೀಚಿಗೆ ಇವರು 2022 ರ ಜನವರಿಯಲ್ಲಿ ಅಂತರರಾಷ್ಟ್ರೀಯ ಕ್ರೀಡೆಯಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ.