Job Description: * ಪ್ರಸ್ತುತ ಕ್ರಿಕೆಟ್ ಆಸ್ಟ್ರೇಲಿಯಾ ನೀಡುವ "ಅಲನ್‌ ಬಾರ್ಡರ್‌" ಪುರಸ್ಕಾರಕ್ಕೆ ಅನುಭವಿ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರು ಭಾಜನರಾಗಿದ್ದಾರೆ. ಇದೇ ಮೊದಲ ಬಾರಿ ಇವರಿಗೆ ಈ ಗೌರವ ಪ್ರಶಸ್ತಿ ಸಂದಿದೆ. * ಮಿಚೆಲ್ ಸ್ಟಾರ್ಕ್‌ ಅವರು ಕ್ರಿಕೆಟ್‌ನ ಮೂರು ಮಾದರಿಗಳಲ್ಲಿ ತೋರಿಸಿರುವ ಸಾಮರ್ಥ್ಯವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಸರಿ ಸುಮಾರು 22 ವರ್ಷಗಳ ಕಾಲಾವಕಾಶದಲ್ಲಿ ಈ ಪುರಸ್ಕಾರವನ್ನು ಪಡೆದಿರುವ 5 ನೇ ಬೌಲರ್ ಇವರಾಗಿದ್ದಾರೆ. * ಪ್ರಸ್ತುತ ಬೆಲಿಂಡಾ ಕ್ಲಾರ್ಕ್ ಪುರಸ್ಕಾರ ಪಡೆಯುವು ಮೂಲಕ ಆಯಶ್ಲಿ ಗಾರ್ಡನರ್ ಅವರು ಈ ಪ್ರಶಸ್ತಿಗೆ ಭಾಜನರಾದ ಮೊದಲ ಮೂಲನಿವಾಸಿ ಆಟಗಾರ್ತಿ ಇವರಾಗಿದ್ದಾರೆ. * ಅಲನ್ ರಾಬರ್ಟ್ ಬಾರ್ಡರ್: ಅವರು ಆಸ್ಟ್ರೇಲಿಯಾದ ಕ್ರಿಕೆಟ್ ವಿಮರ್ಶಕ ಹಾಗೂ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದಾರೆ. ಹಾಗೂ ಇವರು ಹಲವು ವರ್ಷಗಳ ಕಾಲ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಇವರು ತಮ್ಮ ವೃತ್ತಿಜೀವನದಲ್ಲಿ 156 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಹಾಗೂ ಟೆಸ್ಟ್ ವೃತ್ತಿಜೀವನದಲ್ಲಿ 27 ಶತಕಗಳನ್ನು ಬಾರಿಸಿದ್ದಾರೆ. * ಬಾರ್ಡರ್ ಅವರು ICC ಕ್ರಿಕೆಟ್ ಹಾಲ್ ಆಫ್ ಫೇಮ್‌ ನ 55 ಆರಂಭಿಕ ಸೇರ್ಪಡೆಗಳಲ್ಲಿ ಒಬ್ಬರಾಗಿದ್ದರು. ಹಾಗೂ ಈ ಹಿಂದೆ 2009 ರಲ್ಲಿ Q150 ಆಚರಣೆಯ ಅಂಗವಾಗಿ 'ಅಲನ್ ಬಾರ್ಡರ್' ಅವರನ್ನು 'ಕ್ರೀಡಾ ದಂತಕಥೆ'ಯ ಪಾತ್ರಕ್ಕಾಗಿ ಕ್ವೀನ್ಸ್‌ಲ್ಯಾಂಡ್‌ ನ Q150 ಐಕಾನ್‌ಗಳಲ್ಲಿ ಒಂದಾಗಿ ಘೋಷಣೆ ಮಾಡಿದ್ದಾರೆ. * 'ಅಲನ್ ಬಾರ್ಡರ್' ಅವರು 2016 ರಲ್ಲಿ ಕ್ವೀನ್ಸ್‌ಲ್ಯಾಂಡ್ ಗ್ರೇಟ್ಸ್ ಅವಾರ್ಡ್ಸ್‌ಗೆ ಪಾತ್ರರಾಗಿದ್ದಾರೆ. 2017 ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ (CA) ನಡೆಸಿರುವ ಅಭಿಮಾನಿಗಳ ಸಮೀಕ್ಷೆಯಲ್ಲಿ ಸುಮಾರು 40 ವರ್ಷಗಳಲ್ಲಿ ದೇಶದ ಅತ್ಯುತ್ತಮ ಆಶಸ್ XI ರಲ್ಲಿ ಇವರನ್ನು ಹೆಸರಿಸಲಾಗಿದೆ. * ಕ್ರಿಕೆಟ್ ಆಸ್ಟ್ರೇಲಿಯಾ (CA) ವರ್ಷದ ಪ್ರಮುಖ ಪ್ರಶಸ್ತಿಗಳ ವಿಜೇತರನ್ನು ಘೋಷಣೆ ಮಾಡಿದೆ. - ಬೆಲಿಂಡಾ ಕ್ಲಾರ್ಕ್‌ -ಆಯಶ್ಲಿ ಗಾರ್ಡನರ್‌ - ಅಲನ್ ಬಾರ್ಡರ್‌ -ಮಿಚೆಲ್ ಸ್ಟಾರ್ಕ್‌ - ಟೆಸ್ಟ್ ಆಟಗಾರ -ಟ್ರಾವಿಸ್‌ ಹೆಡ್‌ - ಏಕದಿನ ಆಟಗಾರ -ಮಿಚೆಲ್ ಸ್ಟಾರ್ಕ್‌ - ಏಕದಿನ ಆಟಗಾರ್ತಿ -ಅಲಿಸಾ ಹೀಲಿ - ಟಿ20 ಆಟಗಾರ -ಮಿಚೆಲ್ ಮಾರ್ಷ್‌ - ಟಿ20 ಆಟಗಾರ್ತಿ -ಬೆತ್ ಮೂನಿ