Job Description: * ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ ಪೆಗಾಸಸ್ ಸಾಫ್ಟವೇರ ವಿಷಯದ ಬಗ್ಗೆ ಸದನವನ್ನು ತಪ್ಪುದಾರಿಗೆಳೆದಿದ್ದಾರೆ ಎಂದು ಆರೋಪಿಸಿ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ವಿಶೇಷ ಹಕ್ಕು ನಿರ್ಣಯವನ್ನು ಮಂಡಿಸಲು ನೋಟಿಸ್ ನೀಡಿತು. * ಭಾರತವು ಈ ಹಿಂದೆ 2017 ರಲ್ಲಿ ಶಸ್ತ್ರಾಸ್ತ್ರಗಳಿಗಾಗಿ USD 2-ಬಿಲಿಯನ್ ಪ್ಯಾಕೇಜ್‌ ನ್ನು ಇಸ್ರೇಲಿ ತಂತ್ರಜ್ಞಾನವನ್ನು ಖರೀದಿಸಿದೆ ಎಂಬ ಮಾಹಿತಿಯನ್ನು ವಿಶೇಷ ಹಕ್ಕಾಗಿ ಮಂಡಿಸಲಾಗಿದೆ. ರಾಜಕೀಯ ನಾಯಕರು, ನ್ಯಾಯಾಧೀಶರು, ಪತ್ರಕರ್ತರು ಹಾಗೂ ನಾಗರಿಕ ಸಮಾಜದ ಕಾರ್ಯಕರ್ತರನ್ನು ಸ್ನೂಪ್ ಮಾಡಲು ಇಸ್ರೇಲಿ ಪೆಗಾಸಸ್ ತಂತ್ರಜ್ಞಾನವನ್ನು ಸರ್ಕಾರ ಬಳಸುತ್ತಿದೆ ಎಂದು ವಿರೋಧವನ್ನು ಆರೋಪಿಸಲಾಗಿದೆ. * ಭಾರತೀಯ ಸರ್ಕಾರವು NSO ಗ್ರೂಪ್‌ನಿಂದ ಪೆಗಾಸಸ್ ಸಾಫ್ಟವೇರನ್ನು ಎಂದಿಗೂ ಖರೀದಿಸಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. * ಪ್ರಸ್ತುತ ಈ ಪೆಗಾಸಸ್ ಸಾಫ್ಟವೇರನ್ನು ಉದ್ಯಮಿಗಳು, ಪತ್ರಕರ್ತರು ಹಾಗೂ ವಿರೋಧಿಗಳ ಮೇಲೆ ಕಣ್ಣಿಡಲು ವಿಶ್ವದಾದ್ಯಂತ ಹಲವಾರು ಸರ್ಕಾರಗಳು ಬಳಸಿಕೊಂಡಿವೆ ಎಂದು ಮಾಧ್ಯಮ ಗುಂಪುಗಳ ಜಾಗತಿಕ ಒಕ್ಕೂಟವು ಜುಲೈ 2021 ರಲ್ಲಿ ವರದಿ ಮಾಡಿವೆ. ಭಾರತದಲ್ಲಿಯೂ ಕೂಡ ಇದನ್ನು ಬಳಸಲಾಗಿದೆ ಎಂದಿದ್ದಾರೆ. ಇದರಲ್ಲಿ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ, ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹಾಗೂ ಸುಮಾರು 40 ಪತ್ರಕರ್ತರನ್ನೂ ಇತರ ಪ್ರಮುಖ ಹೆಸರುಗಳನ್ನು ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. * ಪೆಗಾಸಸ್ ಒಂದು ರೀತಿಯ ದುರುದ್ದೇಶಪೂರಿತ ಸಾಫ್ಟ್‌ವೇರ್, ಇದನ್ನು ಸ್ಪೈವೇರ್ ಎಂದು ವರ್ಗೀಕರಿಸಲಾಗಿದೆ. ಅನೇಕ ಸಾಧನಗಳಿಗೆ ಪ್ರವೇಶವನ್ನು ಪಡೆಯಲು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಾಫ್ಟವೇರ ಬಳಕೆಗಳ ವೈಯಕ್ತಿಕ ಮಾಹಿತಿಯನ್ನು ಅವರ ಅರಿವಿಲ್ಲದೆ ಸಂಗ್ರಹಿಸುತ್ತದೆ ಹಾಗೂ ಕಣ್ಣಿಡಲು ಸ್ಪೈವೇರ್ ನ್ನು ಬಳಸುವ ಜನರಿಗೆ ಅದನ್ನು ಹಿಂದಿರುಗಿಸಲಾಗುತ್ತದೆ. * ಪೆಗಾಸಸ್ ನ್ನು ಇಸ್ರೇಲಿ ಸಂಸ್ಥೆ NSO ಗ್ರೂಪ್ ಅಭಿವೃದ್ಧಿಪಡಿಸಿದೆ. NSO ಗ್ರೂಪ್ ನ್ನು 2010 ರಲ್ಲಿ ಸ್ಥಾಪನೆ ಮಾಡಲಾಗಿದೆ. ಪೆಗಾಸಸ್‌ ನ ಆರಂಭಿಕ ಆವೃತ್ತಿಯು ಸ್ಪಿಯರ್-ಫಿಶಿಂಗ್, ಇಮೇಲ್‌ಗಳು ಅಥವಾ ಪಠ್ಯ ಸಂದೇಶಗಳ ಮೂಲಕ ಫೋನ್‌ಗಳಿಗೆ ಸೋಂಕು ತಗುಲಿತ್ತು, ಇದನ್ನು ಸಂಶೋಧಕರು 2016 ರಲ್ಲಿ ಸೆರೆಹಿಡಿದಿದ್ದಾರೆ. * ಈ ಹಿಂದೆ 2019 ರಲ್ಲಿ ಯುನೈಟೆಡ್ ಸ್ಟೇಟ್ಸ್ ನ್ಯಾಯಾಲಯದಲ್ಲಿ WhatsApp ಇಸ್ರೇಲ್‌ ನ NSO ಗ್ರೂಪ್ ವಿರುದ್ಧ ಮೊಕದ್ದಮೆ ಹೂಡಿತು ಹಾಗೂ ಸಂಸ್ಥೆಯು ಮೊಬೈಲ್ ಸಾಧನಗಳಿಗೆ ಸೋಂಕು ತಗುಲಿಸುವ ಮೂಲಕ ಅಪ್ಲಿಕೇಶನ್‌ನಲ್ಲಿ ಸೈಬರ್-ದಾಳಿಗಳನ್ನು ಸಂಯೋಜಿಸಲಿದೆ ಎಂದು ಆರೋಪಿಸಲಾಗಿತ್ತು. * * ಸೈಬರ್ ದಾಳಿಗಳ ವಿರುದ್ಧ ಭಾರತ ಸರ್ಕಾರ ಕೈಗೊಂಡ ಕ್ರಮಗಳು : - ಸೈಬರ್ ಸುರಕ್ಷಿತ್ ಭಾರತ ಉಪಕ್ರಮ : ಪ್ರಸ್ತುತ ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸುರಕ್ಷತಾ ಕ್ರಮಗಳಿಗಾಗಿ ಸಾಮರ್ಥ್ಯವನ್ನು ವೃದಿಸುವ ಉದ್ದೇಶದಿಂದ ಭಾರತವು ಈ ಉಪಕ್ರಮವನ್ನು 2018 ರಲ್ಲಿ ಆರಂಭಿಸಿದೆ. - ಭಾರತದಲ್ಲಿ ಇಂಟರ್ನೆಟ್ ಟ್ರಾಫಿಕ್ ಹಾಗೂ ಸಂವಹನ ಮೆಟಾಡೇಟಾವನ್ನು ಸ್ಕ್ಯಾನ್ ಮಾಡಲು, ನೈಜ-ಸಮಯದ ಸೈಬರ್ ಬೆದರಿಕೆಗಳನ್ನು ಪತ್ತೆಹಚ್ಚಲು ರಾಷ್ಟ್ರೀಯ ಸೈಬರ್ ಭದ್ರತಾ ಸಮನ್ವಯ ಕೇಂದ್ರ (NCCC)ನ್ನು 2017 ರಲ್ಲಿ ಅಭಿವೃದ್ಧಿಪಡಿಸಿದ್ದಾರೆ. - ಮಾಲ್‌ವೇರ್ ಹಾಗೂ ವೈರಸ್‌ಗಳನ್ನು ಅಳಿಸಿಹಾಕುವ ಮೂಲಕ ತಮ್ಮ ಸಾಧನಗಳನ್ನು ಸ್ವಚ್ಛಗೊಳಿಸಲು ಇಂಟರ್ನೆಟ್ ಬಳಕೆದಾರರಿಗಾಗಿ ಸೈಬರ್ ಸ್ವಚ್ಛತಾ ಕೇಂದ್ರವನ್ನು 2017 ರಲ್ಲಿ ಆರಂಭಿಸಲಾಗಿದೆ. - ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ - ಇಂಡಿಯಾ : ಇದೊಂದು ನೋಡಲ್ ಏಜೆನ್ಸಿಯಾಗಿದೆ, ಫಿಶಿಂಗ್ ಹಾಗೂ ಹ್ಯಾಕಿಂಗ್‌ನಂತಹ ಸೈಬರ್‌ ಸೆಕ್ಯುರಿಟಿ ಬೆದರಿಕೆಗಳೊಂದಿಗೆ ವ್ಯವಹರಿಸುತ್ತದೆ.