Job Description: * ಪ್ರಸ್ತುತ ವಿಶ್ವ ನಂ.01 ಟೆನಿಸ್ ಆಟಗಾರ್ತಿ ಆಶ್ಲೆಗ್ ಬಾರ್ಟಿ ಅವರು ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 2022 ನೇ ವರ್ಷದ ಮೊದಲ ಗ್ರಾಂಡ್ ಸ್ಲಾಂ ಚಾಂಪಿಯನ್‌ ಪಟ್ಟವನ್ನು ಪಡೆದುಕೊಂಡಿದ್ದಾರೆ. ಕಳೆದ 44 ವರ್ಷಗಳಿಂದ ಆಸ್ಟ್ರೇಲಿಯನ್ ರಿಗೆ ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿಯನ್ನು ತಂದು ಕೊಟ್ಟಿದ್ದಾರೆ. * ಸ್ಟಾರ್ ಆಟಗಾರ್ತಿ ಆಶ್ಲೆಗ್ ಬಾರ್ಟಿ ಅವರು ಫೈನಲ್ ಹಂತದಲ್ಲಿ 6-3, 7-6 ನೇರ ಸೆಟ್‌ಗಳಿಂದ ಅಮೆರಿಕಾದ ಡೇನಿಯಲ್ ಕಾಲಿನ್ಸ್ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಇವರು ತಮ್ಮ ವೃತ್ತಿ ಜೀವನದಲ್ಲಿನ 3 ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಇದಾಗಿದೆ ಎಂದಿದ್ದಾರೆ. ಹಾಗೂ ಈ ಪ್ರಶಸ್ತಿಯನ್ನು ಗೆದ್ದ ನಂತರ ಇವರು ಈ ಪ್ರಶಸ್ತಿಯನ್ನು ಆಸ್ಟ್ರೇಲಿಯಾ ಜನತೆಗೆ ಅರ್ಪಿಸುವೆ ಎಂದು ಹೇಳಿದರು. * ಸ್ಟಾರ್ ಆಟಗಾರ್ತಿ ಆಶ್ಲೆಗ್ ಬಾರ್ಟಿ ಅವರು ಜಯಿಸಿದ 3ನೇ ಗ್ರಾಂಡ್ ಸ್ಲಾಂ ಟ್ರೋಫಿ ಇದಾಗಿದೆ. ಈ ಮೊದಲು 2021 ರಲ್ಲಿ ವಿಂಬಲ್ಡನ್ ಪ್ರಶಸ್ತಿ ಹಾಗೂ 2019 ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಜಯಿಸಿಕೊಂಡಿದ್ದಾರೆ. * * ಆಶ್ಲೀಗ್ ಬಾರ್ಟಿ : ಇವರು ಆಸ್ಟ್ರೇಲಿಯಾದ ವೃತ್ತಿಪರ ಟೆನಿಸ್ ಆಟಗಾರ್ತಿ ಹಾಗೂ ಮಾಜಿ ಕ್ರಿಕೆಟಿಗಳು. ಇವರು ಮಹಿಳಾ ಟೆನಿಸ್ ಅಸೋಸಿಯೇಷನ್ ನಿಂದ ಸಿಂಗಲ್ಸ್‌ನಲ್ಲಿ ವಿಶ್ವದ ನಂ. 1 ಶ್ರೇಯಾಂಕವನ್ನು ಪಡೆದಿದ್ದಾರೆ. ಹಾಗೂ ಸಹ ಸ್ಥಳೀಯ ಆಸ್ಟ್ರೇಲಿಯನ್ ಇವೊನ್ನೆ ಗೂಲಾಗಾಂಗ್ ಕಾವ್ಲೆ ನಂತರ 2 ನೇ ಆಸ್ಟ್ರೇಲಿಯನ್ ಸಿಂಗಲ್ಸ್ ನಂ. 1 ಆಗಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಇವರು ವಿಶ್ವದ ನಂಬರ್. 05 ರ ವೃತ್ತಿಜೀವನದ ಉನ್ನತ ಶ್ರೇಯಾಂಕವನ್ನು ಸಾಧಿಸಿದ್ದಾರೆ. ಒಟ್ಟಾರೆಯಾಗಿ ಇವರು 15 ಸಿಂಗಲ್ಸ್, ಮತ್ತು 12 ಡಬಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. * ಈ ಹಿಂದೆ ಇವರು 2011 ರಲ್ಲಿ ವಿಂಬಲ್ಡನ್‌ನಲ್ಲಿ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ, ನಂತರ ವಿಶ್ವದ ನಂಬರ್ 2 ರ ವೃತ್ತಿಜೀವನದ ಉನ್ನತ ಶ್ರೇಯಾಂಕದ ಮಟ್ಟವನ್ನು ತಲುಪಿದರು. ಮತ್ತು 2013 ರಲ್ಲಿ WTA ಟೂರ್‌ನಲ್ಲಿ ಡಬಲ್ಸ್‌ನಲ್ಲಿ ಮೊದಲ ಯಶಸ್ಸನ್ನು ಗಳಿಸಿದರು. * ಬಾರ್ಟಿ ಅವರು 2016 ರ ಆರಂಭದಲ್ಲಿ ಟೆನಿಸ್‌ಗೆ ಮರಳಿ ಸೇರಿದರು. ಮತ್ತೇ 2017 ರಲ್ಲಿ ಮಲೇಷಿಯನ್ ಓಪನ್‌ನಲ್ಲಿ ಮೊದಲ WTA ಪ್ರಶಸ್ತಿಯನ್ನು ಜಯಿಸಿದರು. 2018 ರಲ್ಲಿ ಡಬಲ್ಸ್‌ನಲ್ಲಿ ತನ್ನ ಮೊದಲ ಪ್ರೀಮಿಯರ್ ಮ್ಯಾಂಡೇಟರಿ ಹಾಗೂ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಮೆಂಟ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಮತ್ತೇ 2021 ರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ 2 ನೇ ಪ್ರಮುಖ ಸಿಂಗಲ್ಸ್ ಪ್ರಶಸ್ತಿ ಹಾಗೂ ಎರಡು WTA 1000 ಪ್ರಶಸ್ತಿಗಳನ್ನು ಸೇರಿ '5' ಪ್ರಶಸ್ತಿಗಳನ್ನು ಜಯಿಸಿದ್ದಾರೆ. 2021 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ. * ಬಾರ್ಟಿ ಅವರು ಆಸ್ಟ್ರೇಲಿಯಾದ ರಾಷ್ಟ್ರೀಯ ಸ್ಥಳೀಯ ಟೆನಿಸ್ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.