Job Description: ಇದೇ ಮೊದಲ ಬಾರಿಗೆ ಮಣಿಪುರಕ್ಕೆ ಮೊದಲ ಗೂಡ್ಸ್‌ ರೈಲು * ಇದೇ ಮೊದಲ ಬಾರಿಗೆ ಸರಕು ಸಾಗಣೆಯ ರೈಲು ಮಣಿಪುರ ರಾಜ್ಯಕ್ಕೆ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದೆ. ಈ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಹಾಗೂ ಇನ್ನು ಮುಂದೆ ಮಣಿಪುರ ರಾಜ್ಯಕ್ಕೆ ಅಧಿಕವಾಗಿ ಸರಕು ಸಾಗಣೆಗೆ ಹಾಗೂ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. * ಅಸ್ಸಾಂನ ಸಿಲ್ಚಾರ್‌ನಿಂದ ಪ್ರಯಾಣಿಕ ರೈಲು ಮಣಿಪುರದ ಬೊಂಗೈಚುಂಗ್‌ಪಾವೊ ರೈಲು ನಿಲ್ದಾಣವನ್ನು ತಲುಪಿದ ದಿನಗಳ ನಂತರ ಸರಕು ರೈಲು ಜನವರಿ. 27 ರಂದು ಈಶಾನ್ಯ ರಾಜ್ಯದ ರಾಣಿ ಗೈಡಿನ್ಲಿಯು ನಿಲ್ದಾಣಕ್ಕೆ ಆಗಮಿಸಿದೆ. * ದೇಶದ ಅತಿ ಉದ್ದದ ರೈಲು ಸುರಂಗವನ್ನು ಹೊಂದಿರುವ ಯೋಜನೆಯು ಇಂಫಾಲನ್ನು ಗುವಾಹಟಿಯೊಂದಿಗೆ ಸಂಪರ್ಕಿಸುತ್ತದೆ. * ಪ್ರಸ್ತುತ ಕೇಂದ್ರ ಸರ್ಕಾರವು ಈಶಾನ್ಯ ರಾಜ್ಯದಲ್ಲಿನ ರೈಲ್ವೇ ಮಾರ್ಗಗಳ ಅಭಿವೃದ್ಧಿಗಾಗಿ ಸುಮಾರು 7 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಮಣಿಪುರ: ಇದೊಂದು ಈಶಾನ್ಯ ಭಾರತದ ರಾಜ್ಯವಾಗಿದೆ, ಇಂಫಾಲ್ ನಗರವು ರಾಜ್ಯದ ರಾಜಧಾನಿಯಾಗಿದೆ. ಈ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ ಹಾಗೂ ಪಶ್ಚಿಮಕ್ಕೆ ಅಸ್ಸಾಂ ರಾಜ್ಯಗಳಿಂದ ಗಾಡಿಯನ್ನು ಹಂಚಿಕೊಂಡಿದೆ. ಹಾಗೂ ಈ ರಾಜ್ಯವು ಮ್ಯಾನ್ಮಾರ್‌ ದೇಶದ ಎರಡು ಪ್ರದೇಶಗಳ ಗಡಿಯಾಗಿದೆ, ಅವುಗಳು ಪೂರ್ವಕ್ಕೆ ಸಾಗಯಿಂಗ್ ಪ್ರದೇಶ ಹಾಗೂ ದಕ್ಷಿಣಕ್ಕೆ ಚಿನ್ ರಾಜ್ಯ. ಈ ರಾಜ್ಯವು ಭಾರತೀಯ ಉಪಖಂಡವನ್ನು ಆಗ್ನೇಯ ಏಷ್ಯಾಕ್ಕೆ ಸಂಪರ್ಕಿಸುತ್ತದೆ ಹಾಗೂ ಜನರು, ಸಂಸ್ಕೃತಿಗಳು ಹಾಗೂ ಧರ್ಮಗಳ ವಲಸೆಯನ್ನು ಸಕ್ರಿಯಗೊಳಿಸುತ್ತದೆ. * ಈ ಹಿಂದೆ ಬ್ರಿಟಿಷ್ ಭಾರತೀಯ ಸಾಮ್ರಾಜ್ಯದ ದಿನಗಳಲ್ಲಿ, ಮಣಿಪುರ ರಾಜ್ಯವು ರಾಜಪ್ರಭುತ್ವದ ರಾಜ್ಯಗಳಲ್ಲಿ ಒಂದಾಗಿತ್ತು. ಈ ಹಿಂದೆ 1917 ಹಾಗೂ 1939 ರ ಮಧ್ಯೆ ಮಣಿಪುರದ ಅನೇಕ ಜನರು ಪ್ರಜಾಪ್ರಭುತ್ವಕ್ಕಾಗಿ ರಾಜಪ್ರಭುತ್ವದ ಆಡಳಿತಗಾರರ ಮೇಲೆ ಒತ್ತಾಯವನ್ನು ಹೇರಿದ್ದರು. ತಡ ನಂತರ 1930 ರ ದಶಕದ ಅಂತ್ಯದ ವೇಳೆಗೆ, ಮಣಿಪುರದ ರಾಜಪ್ರಭುತ್ವವು ಬ್ರಿಟಿಷ್ ಆಡಳಿತದ ಜೊತೆ ಚರ್ಚೆಮಾಡಿ ಬರ್ಮಾದ ಭಾಗಕ್ಕಿಂತ ಹೆಚ್ಚಾಗಿ ಭಾರತೀಯ ಸಾಮ್ರಾಜ್ಯದ ಭಾಗವಾಗಿ ಮುಂದುವರಿಯಲು ಆದ್ಯತೆಯನ್ನು ನೀಡಿತು. 1947 ರ ಆಗಸ್ಟ್. 11 ರಂದು, ಮಹಾರಾಜ ಬುಧಚಂದ್ರ ಭಾರತಕ್ಕೆ ಸೇರ್ಪಡೆಗೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದರು. ನಂತರದ ದಿನಗಳಲ್ಲಿ 1949 ರ ಸೆಪ್ಟೆಂಬರ್. 21 ರಂದು ವಿಲೀನ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಆಗ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಲಾಯಿತು. * ಮಣಿಪುರ ರಾಜ್ಯದ ಮುಖ್ಯ ಭಾಷೆ ಮೈಟಿಲೋನ್'ಯಾಗಿದೆ ಇದನ್ನು ಮಣಿಪುರಿ ಎಂದು ಕರೆಯುತ್ತಾರೆ. 2011 ರ ಜನಗಣತಿಯ ಪ್ರಕಾರ, ಹಿಂದೂ ಧರ್ಮವು ಈ ರಾಜ್ಯದಲ್ಲಿ ಪ್ರಮುಖ ಧರ್ಮವಾಗಿದೆ. ಮಣಿಪುರ ರಾಜ್ಯವು ಪ್ರಾಥಮಿಕವಾಗಿ ಕೃಷಿ ಆರ್ಥಿಕತೆಯನ್ನು ಹೊಂದಿದೆ, ಹಾಗೂ ಈ ರಾಜ್ಯವು ಈಶಾನ್ಯ ಭಾರತದಲ್ಲಿ 2 ನೇ ಅತಿದೊಡ್ಡ ಇಂಫಾಲ್ ವಿಮಾನ ನಿಲ್ದಾಣದ ಮೂಲಕ ದೈನಂದಿನ ವಿಮಾನಗಳ ಸಹಾಯದಿಂದ ಇತರ ಪ್ರದೇಶಗಳಿಗೆ ಸಂಪರ್ಕ ಹೊಂದಿದೆ.