Job Description: * ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 'ಗ್ರಾಮ ಒನ್ ಯೋಜನೆ'ಗೆ ಚಾಲನೆಯನ್ನು ನೀಡಿದ್ದಾರೆ. ಈ ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಅನೇಕ ಅನುಕೂಲಗಳು ಲಭ್ಯವಾಗಲಿವೆ ಎಂದು ತಿಳಿಸಿದ್ದಾರೆ. * ಈ ಗ್ರಾಮ ಒನ್ ಯೋಜನೆಯು ಜನರ ಬಳಿಗೆ ಸೇವೆಗಳನ್ನು ತಲುಪಿಸುವ ಯೋಜನೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. * ಪ್ರಸ್ತುತ ಈ ಗ್ರಾಮ ಒನ್ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಜಾತಿ, ಆದಾಯ ಪ್ರಮಾಣ ಪತ್ರಗಳು, ಇವುಗಳ ಜೊತೆಗೆ ಬ್ಯಾಂಕಿಂಗ್ ಸೇವೆಗಳು, ಸಕಾಲ ಸೇವೆಗಳು, ಆರ್ ಟಿಐ ಸೇವೆಗಳು, ಸಿಎಂಆರ್ ಎಫ್ ಸೇವೆಗಳು ಹಾಗೂ ಮೈಕ್ರೊ ಬ್ಯಾಂಕಿಂಗ್ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಆಧಾರ್ ತಿದ್ದುಪಡಿ ಇನ್ನು ಹಲವಾರು ಸೇವೆಗಳನ್ನು ಜನರು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. * ಸದ್ಯ ಕರ್ನಾಟಕ ರಾಜ್ಯದ 12 ಜಿಲ್ಲೆಗಳಲ್ಲಿ ಈ ಗ್ರಾಮ ಒನ್ ಯೋಜನೆ ಜಾರಿಯಾಗಿ ಸುಮಾರು 3000 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಇನ್ನ ಉಳಿದ ಎಲ್ಲ ಜಿಲ್ಲೆಗಳಲ್ಲಿ ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಇದೀಗ ರಾಜ್ಯದಲ್ಲಿ ಜನರ ಬಳಿಗೆ ಸರ್ಕಾರ ಹಾಗೂ ಅದರ ಸೇವೆಗಳುನ್ನು ತಲುಪಿಸುವ ನೀತಿಯ ಅಡಿಯಲ್ಲಿ ಈ ಗ್ರಾಮ್ ಒನ್ ಯೋಜನೆಯನ್ನು ಆರಂಭಿಸಲಾಗಿದೆ ರೂಪಿಸಲಾಗಿದೆ. ಹಾಗೂ ಈ 'ಗ್ರಾಮ ಒನ್' ಯೋಜನೆ ಅಡಿಯಲ್ಲಿ ಸೇವಾ ಸಿಂಧು ಕಾರ್ಯಕ್ರಮದ ಸುಮಾರು 750 ಅಧಿಕ ಸೇವೆಗಳನ್ನು ಜನರಿಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಈ 'ಗ್ರಾಮ್ ಒನ್' ಯೋಜನೆ ಗ್ರಾಮ ಮಟ್ಟದಲ್ಲಿನ ಎಲ್ಲಾ ನಾಗರಿಕ ಕೇಂದ್ರಿತ ಚಟುವಟಿಕೆಗಳಿಗೆ ಏಕ-ಬಿಂದು ಸಹಾಯ ಕೇಂದ್ರವಾಗಿದೆ. ಇದನ್ನು FY20-21 ರ ಬಜೆಟ್‌ನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿನ ಈ ಗ್ರಾಮಒನ್ ಕೇಂದ್ರಗಳು ವಾರದ ಏಳು ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 8 ರವರೆಗೆ ಕಾರ್ಯನಿರ್ವಹಿಸುತ್ತವೆ. * * ಗ್ರಾಮ ಒನ್ ಕೇಂದ್ರಗಳ ಪ್ರಯೋಜನಗಳು : - ಸದ್ಯ ನಾಗರಿಕರು ಸರಕಾರಿ ಸೇವೆ ಪಡೆಯಲು ಜಿಲ್ಲಾ, ತಾಲೂಕು, ಹೋಬಳಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. - ನಾಗರಿಕರು ಈ ಗ್ರಾಮಒನ್ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ಸಮಯ ಮತ್ತು ಹಣವನ್ನು ಉಳಿಸಬಹುದು. - ಮಧ್ಯವರ್ತಿಗಳ ಕಾಟವಿರುವದಿಲ್ಲ.