Job Description: * ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದಲ್ಲಿನ ಸರ್ಕಾರಿ ನೌಕರರಿಗೆ ಖುಷಿ ವಿಚಾರವನ್ನು ತಿಳಿಸಿದ್ದಾರೆ, ಅದುವೇ ಪ್ರಸ್ತುತ ಛತ್ತೀಸ್‌ಗಢ ರಾಜ್ಯದಲ್ಲಿನ ಎಲ್ಲ ಸರ್ಕಾರಿ ಕಚೇರಿಗಳು ಇನ್ನು ಮುಂದೆ ವಾರದಲ್ಲಿ ಐದು ದಿನ ಮಾತ್ರ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಈ ಕ್ರಮವು ರಾಜ್ಯದಲ್ಲಿನ ಸರ್ಕಾರಿ ನೌಕರರ ದಕ್ಷತೆ ಹಾಗೂ ಕಾರ್ಯ ನಿಷ್ಠೆಯನ್ನು ವೃದ್ಧಿಸುವ ಪ್ರಯತ್ನವಾಗಿದೆ ಎಂದಿದ್ದಾರೆ. ಇದೀಗ ಛತ್ತೀಸ್‌ಗಢ ರಾಜ್ಯ ಸರ್ಕಾರವು ತನ್ನ ರಾಜ್ಯದಲ್ಲಿ ವಾರದಲ್ಲಿ ಐದು ದಿನ ಕೆಲಸ ನಿಯಮವನ್ನು ಜಾರಿಗೊಳಿಸುತ್ತಿದೆ. ಇದರ ಜೊತೆಗೆ ಪಿಂಚಣಿ ಯೋಜನೆಯಲ್ಲಿ ಶೇ. 10 ರಿಂದ ಶೇ. 14 ಕ್ಕೆ ಏರಿಕೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಘೇಲ್ ಅವರು ಟ್ವೀಟ್‌ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. * ಪ್ರಸ್ತುತ ಛತ್ತೀಸ್‌ಗಢ ರಾಜ್ಯ ಸರ್ಕಾರವು ವಸತಿ ಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತಿರುವ ಸಣ್ಣ ವಾಣಿಜ್ಯ ಚಟುವಟಿಕೆಗಳಿಗೆ ನ್ಯಾಯವನ್ನು ಕಲ್ಪಿಸುವ ಮಸೂದೆಯನ್ನು ಪರಿಚಯಿಸುತ್ತಿದೆ. ಈ ಮಸೂದೆಯು ರಾಜ್ಯದಲ್ಲಿನ ಸಾವಿರಾರು ಸಣ್ಣ ಉದ್ಯಮಿಗಳಿಗೆ ಉಪಯೋಗವಾಗಲಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ. * ಛತ್ತೀಸ್‌ಗಢ ರಾಜ್ಯದಲ್ಲಿನ ಮಹಿಳೆಯರ ಸುರಕ್ಷತೆಯನ್ನು ಬಲಪಡಿಸಲು ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಸುರಕ್ಷತಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. * * ಛತ್ತೀಸ್‌ಗಢ್ ರಾಜ್ಯ : ಈ ರಾಜ್ಯವು ಮಧ್ಯ ಭಾರತದ ಪ್ರದೇಶದಲ್ಲಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಈ ರಾಜ್ಯವು ಈ ಮೊದಲು ಮಧ್ಯಪ್ರದೇಶದ ಭಾಗವಾಗಿತ್ತು. ಇದಕ್ಕೆ 2000 ರ ನವೆಂಬರ್. 01 ರಂದು ರಾಜ್ಯತ್ವವನ್ನು ಒದಗಿಸಲಾಗಿದೆ. ಸದ್ಯ ಈ ರಾಜ್ಯವು ಭಾರತದ 9ನೇ ದೊಡ್ಡ ರಾಜ್ಯವಾಗಿದೆ. ಈ ಛತ್ತೀಸ್‌ಗಢ ರಾಜ್ಯವನ್ನು ಮಧ್ಯಪ್ರದೇಶದ ಆಗ್ನೇಯದಲ್ಲಿರುವ '10' ಛತ್ತೀಸ್‌ಗಢಿ ಮತ್ತು '6' ಗೊಂಡಿ ಭಾಷೆ ಮಾತನಾಡುವ ಜಿಲ್ಲೆಗಳ ವಿಭಜನೆಯಿಂದ ರಚಿಸಲಾಗಿದೆ. ಇದು 32 ಜಿಲ್ಲೆಗಳನ್ನು ಒಳಗೊಂಡಿರುವ ರಾಜ್ಯವಾಗಿದೆ. ರಾಯ್ಪುರ್ ಛತ್ತೀಸ್‌ಗಢ ರಾಜ್ಯದ ರಾಜಧಾನಿಯಾಗಿದೆ. * ಛತ್ತೀಸ್‌ಗಢ ರಾಜ್ಯವು 7 ರಾಜ್ಯಗಳ ಜೊತೆ ಗಡಿಯನ್ನು ಹಂಚಿಕೊಂಡಿದೆ. ಅವುಗಳು ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ಒಡಿಶಾ, ತೆಲಂಗಾಣ ಮತ್ತು ಆಂಧ್ರ ರಾಜ್ಯಗಳೊಂದಿಗೆ ಗಾಡಿಯನ್ನು ಹಂಚಿಕೊಂಡಿದೆ. ಪ್ರಸ್ತುತ ಛತ್ತೀಸ್‌ಗಢ ರಾಜ್ಯವು ರಾಷ್ಟ್ರದ ಉಳಿದ ಭಾಗಗಳಿಗೆ ವಿದ್ಯುತ್, ಕಲ್ಲಿದ್ದಲು ಮತ್ತು ಉಕ್ಕನ್ನು ಒದಗಿಸುತ್ತದೆ. * ಸದ್ಯ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾಗಿರುವ ಹರ್ದೀಪ್ ಸಿಂಗ್ ಪುರಿ ಅವರು ತಿಳಿಸಿರುವಂತೆ "ಸ್ವಚ್ಛ ಸರ್ವೇಕ್ಷಣ್ 2020" ನಂತರ ರಾಜ್ಯದಲ್ಲಿ 100 ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಸ್ವಚ್ಛ ರಾಜ್ಯ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿವೆ.