Job Description: * ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‌ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ರಾಜ್ಯದಲ್ಲಿನ ಆಡಳಿತ ಸುಧಾರಣೆಯ ಕ್ರಮವಾಗಿ ರಾಜ್ಯದಲ್ಲಿ ಹೊಸದಾಗಿ 13 ಜಿಲ್ಲೆಗಳನ್ನು ಆಂಧ್ರಪ್ರದೇಶ ಜಿಲ್ಲಾ ರಚನೆ ಕಾಯ್ದೆಯ ಸೆಕ್ಷನ್ 3(5) ರ ಅಡಿಯಲ್ಲಿ ರಚಿಸಿ ಅಧಿಸೂಚನೆಯನ್ನು ಹೊರಡಿಸಿದೆ. ಪ್ರಸ್ತುತ ರಾಜ್ಯದಲ್ಲಿನ ಸರ್ಕಾರದ ಸೇವೆಗಳು ಮತ್ತು ಯೋಜನೆಗಳಿಂದ ಜನರಿಗೆ ಸೌಲಭ್ಯವನ್ನು ಕಲ್ಪಿಸಲು ಪೂರಕವಾಗುವಂತೆ ಈ ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ ಮುಖ್ಯಮಂತ್ರಿ ಜಗನ್‌ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ತಿಳಿಸಿದೆ. * ಸದ್ಯ ಈ ಎಲ್ಲ 13 ಹೊಸ ಜಿಲ್ಲೆಗಳು ತೆಲುಗು ರಾಜ್ಯದ ಹೊಸ ವರ್ಷ ಯುಗಾದಿಯ ನಂತರ ಅಸ್ತಿತ್ವಕ್ಕೆ ಬರಲಿವೆ ಹಾಗೂ ಅಲ್ಲಿಂದ ಈ ಜಿಲ್ಲೆಗಳು ಕಾರ್ಯಾರಂಭವನ್ನು ಮಾಡಲಿವೆ ಎಂದು ಸರ್ಕಾರ ತಿಳಿಸಿದೆ. * ಈ ಮೊದಲು ಆಂಧ್ರ ರಾಜ್ಯದಲ್ಲಿ 13 ಜಿಲ್ಲೆಗಳಿದ್ದವು, ಇದೀಗ ಹೊಸದಾಗಿ ಮತ್ತೇ 13 ಜಿಲ್ಲೆಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಸರ್ಕಾರ ತಿಳಿಸಿದೆ. ಸದ್ಯ ಆಂಧ್ರ ಪ್ರದೇಶ ರಾಜ್ಯದಲ್ಲಿ ಒಟ್ಟಾರೆ 26 ಜಿಲ್ಲೆಗಳಾಗಿವೆ. * ಪ್ರಸ್ತುತ ಆಂಧ್ರದಲ್ಲಿ 25 ಲೋಕಸಭಾ ಸ್ಥಾನಗಳಿವೆ, ಈ ಹಿಂದೆ 2019 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಸ್ತುತ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ರಾಜ್ಯದಲ್ಲಿನ ಪ್ರತಿಯೊಂದು ಲೋಕಸಭಾ ಮತಕ್ಷೇತ್ರವನ್ನು ಜಿಲ್ಲೆಯಾಗಿ ಪರಿವರ್ತಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಇಡಿದ ಅದರಂತೆ ನಡೆದುಕೊಂಡಿದ್ದಾರೆ ಎನ್ನಲಾಗಿದೆ. * * ಪ್ರಸ್ತುತ ಆಂಧ್ರಪ್ರದೇಶ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ 13 ಜಿಲ್ಲೆಗಳು : ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣಾ, ಗುಂಟೂರು, ಪ್ರಕಾಶಂ, ನೆಲ್ಲೂರು, ಅನಂತಪುರಂ, ಕಡಪ, ಕರ್ನೂಲ್ ಹಾಗೂ ಚಿತ್ತೂರು ಜಿಲ್ಲೆಗಳು. * * ಆಂಧ್ರಪ್ರದೇಶ ರಾಜ್ಯದಲ್ಲಿನ '13' ಹೊಸ ಜಿಲ್ಲೆಗಳು : ಮಾನ್ಯಂ, ಅಲ್ಲೂರಿ ಸೀತಾರಾಮ್ ರಾಜು, ಅನಕಾಪಲ್ಲಿ, ಕಾಕಿನಾಡ, ಕೋನ ಸೀಮಾ, ಏಲೂರು, ಎನ್ಟಿಆರ್, ಬಾಪತಿಯಾ, ಪಲ್ನಾಡು, ನಂದ್ಯಾಲ್, ಶ್ರೀ ಸತ್ಯಸಾಯಿ, ಅನ್ನಮಯ್ಯ, ಶ್ರೀ ಬಾಲಾಜಿ ಎಂಬ ಜಿಲ್ಲೆಗಳಾಗಿವೆ. ಸದ್ಯ ರಾಜ್ಯದಲ್ಲಿ ಒಟ್ಟು 26 ಕ್ಷೇತ್ರಗಳನ್ನು ಹೊಸ ಜಿಲ್ಲೆಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಮುಖ್ಯಮಂತ್ರಿ ಜಗನ್‌ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ತಿಳಿಸಿದೆ.