Job Description: * ಪ್ರಸ್ತುತ ಕೇರಳ ಸರ್ಕಾರವು ತನ್ನ ರಾಜ್ಯದಲ್ಲಿನ 'ಕೇರಳ ಲೋಕಾಯುಕ್ತ ಕಾಯಿದೆ'ಗೆ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಯನ್ನು ತರಲು ನಿರ್ಧಾರವನ್ನು ಕೈಗೊಂಡಿದೆ, ಈ ನಿರ್ಧಾರದಿಂದ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ವರದಿಯನ್ನು ತಿರಸ್ಕರಿಸುವ ಅಧಿಕಾರವನ್ನು ಹೊಂದಿರಲಿದೆ ಎಂದು ತಿಳಿಸಿದೆ. * ಇತ್ತೀಚಿಗೆ ಕೇರಳ ರಾಜ್ಯ ಸಚಿವ ಸಂಪುಟವು ಲೋಕಾಯುಕ್ತ ಕಾಯಿದೆ 1999 ಕ್ಕೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ಈ ತಿದ್ದುಪಡಿಯು ನಿರ್ಧಾರವನ್ನು ಲೋಕಾಯುಕ್ತರ ತೀರ್ಪನ್ನು ಪರೀಕ್ಷಿಸಲು ಅವಕಾಶವನ್ನು ಒದಗಿಸಿದ ನಂತರ ಇದನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಸದ್ಯ ಈ ತಿದ್ದುಪಡಿಯ ಪ್ರಕಾರ, ಲೋಕಾಯುಕ್ತರು ಶಿಫಾರಸುಗಳನ್ನು ಮಾಡುವ ಅಥವಾ ಸರ್ಕಾರಕ್ಕೆ ವರದಿಗಳನ್ನು ನೀಡುವ ಅಧಿಕಾರವನ್ನು ಮಾತ್ರ ಹೊಂದಿರುತ್ತಾರೆ ಎನ್ನಲಾಗಿದೆ. * ಪ್ರಸ್ತುತ ಲೋಕಾಯುಕ್ತರು ಭಾರತೀಯ ಸಂಸದೀಯ ಒಂಬುಡ್ಸ್‌ಮನ್ ಆಗಿದ್ದಾರೆ. ಭಾರತದಲ್ಲಿನ ಪ್ರತಿಯೊಂದು ರಾಜ್ಯ ಸರ್ಕಾರಗಳಿಗೆ ಅವರು ಅಧಿಕಾರಕ್ಕೆ ಬರುತ್ತಾರೆ. ಇದನ್ನು ಲೋಕಾಯುಕ್ತ ಕಾಯಿದೆಯ ಮೂಲಕ ಜಾರಿಗೆ ತರಲಾಗಿದೆ. ಹಾಗೂ ಈ ಹುದ್ದೆಗೆ ಪ್ರತಿಷ್ಠಿತ ಹಿನ್ನೆಲೆಯ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಲಾಗುತ್ತದೆ, ಹಾಗೂ ರಾಜ್ಯ ಸರ್ಕಾರಗಳ ಅಥವಾ ಆಡಳಿತದ ಕಾರ್ಯ ದಕ್ಷತೆ ಮತ್ತು ಸಮಗ್ರತೆಯ ವಿರುದ್ಧ ಕುಂದುಕೊರತೆಗಳನ್ನು ಪರಿಹರಿಸಲು ರಚಿಸಲಾಗಿದೆ. * ಪ್ರಸ್ತುತ ರಾಜ್ಯ ಸರ್ಕಾರಗಳು ಲೋಕಾಯುಕ್ತರನ್ನು ನೇಮಕ ಮಾಡಿದ ನಂತರ ಅವರನ್ನು ವಜಾಗೊಳಿಸಲು ಅಥವಾ ವರ್ಗಾವಣೆ ಮಾಡಲು ಅವಕಾಶವಿರುವದಿಲ್ಲ. ಆದರೆ ರಾಜ್ಯ ವಿಧಾನಸಭೆಯಿಂದ ಮಹಾಭಿಯೋಗ ನಿರ್ಣಯವನ್ನು ಅಂಗೀಕರಿಸುವ ಮೂಲಕ ಲೋಕಾಯುಕ್ತರನ್ನು ಹುದ್ದೆಯಿಂದ ತೆಗೆದುಹಾಕಬಹುದಾಗಿದೆ. * ಮಹಾರಾಷ್ಟ್ರ ರಾಜ್ಯವು ಲೋಕಾಯುಕ್ತ ಸಂಸ್ಥೆಯನ್ನು ಪರಿಚಯಿಸಿದ ಮೊದಲ ರಾಜ್ಯವಾಗಿದೆ. ಈ ಹಿಂದೆ 1971 ರಲ್ಲಿ 'ಲೋಕಾಯುಕ್ತ ಮತ್ತು ಉಪ-ಲೋಕಾಯುಕ್ತ ಕಾಯಿದೆ' ಮೂಲಕ ರೂಪಿಸಲಾಗಿದೆ. ನಂತರ ಈ ಲೋಕಾಯುಕ್ತ ಸಂಸ್ಥೆಯನ್ನು ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಹಾಗೂ ದೆಹಲಿ ರಾಜ್ಯಗಳು ತಮ್ಮ ರಾಜ್ಯದಲ್ಲಿ ಜಾರಿಗೆ ತಂದಿವೆ. ಆದರೆ ಪ್ರತಿ ರಾಜ್ಯದಲ್ಲಿ ಲೋಕಾಯುಕ್ತರ ಅಧಿಕಾರಗಳು ವಿಭಿನ್ನವಾಗಿವೆ. * ರಾಜ್ಯದ ರಾಜ್ಯಪಾಲರು ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಿಸುತ್ತಾರೆ. ಲೋಕಾಯುಕ್ತರನ್ನು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ವಿಧಾನಸಭೆ ಹಾಗೂ ವಿಧಾನ ಪರಿಷತ್‌ ನಲ್ಲಿ ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್ತಿನ ಅಧ್ಯಕ್ಷರು ಹಾಗೂ ವಿಧಾನಸಭೆಯ ಸ್ಪೀಕರ್ ಅವರ ಸಹಮತದ ಮೇರೆಗೆ ಹಾಗೂ ಮುಖ್ಯಮಂತ್ರಿಯಿಂದ ನಾಮನಿರ್ದೇಶನದ ಮೂಲಕ ನೇಮಕ ಮಾಡಲಾಗುತ್ತದೆ. * ಈ ಲೋಕಾಯುಕ್ತ ಹುದ್ದೆಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಅಥವಾ ನ್ಯಾಯಾಧೀಶರು ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಅರ್ಹರಾಗಿರುತ್ತಾರೆ.