Job Description: * ಭಾರತೀಯ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಂಗರಕ್ಷಕ ಕಮಾಂಡೆಂಟ್ ನ ಕಪ್ಪು ಕುದುರೆ 'ವಿರಾಟ್' ಇದೀಗ ತನ್ನ ಸೇವೆಯಿಂದ ನಿವೃತ್ತಿಯನ್ನು ಹೊಂದಿದೆ. ಈ ಕುದುರೆಯನ್ನು 73 ನೇ ಗಣರಾಜ್ಯೋತ್ಸವ ಪರೇಡ್ ನ ಕಾರ್ಯಕ್ರಮದ ನಂತರ ಬೀಳ್ಕೊಡಲಾಗಿದೆ. * ಪ್ರಸ್ತುತ ರಾಷ್ಟ್ರಪತಿಗಳ ಅಂಗರಕ್ಷಕ ಕಮಾಂಡೆಂಟ್ ಕರ್ನಲ್ ಅನುಪ್ ತಿವಾರಿ ಅವರ ಒಡನಾಟ, ಹಾಗೂ ಆರೈಕೆ, ಸಾರಥ್ಯದಲ್ಲಿರುವ ಈ ಕಪ್ಪು ಕುದುರೆ 'ವಿರಾಟ್'ನ್ನು ಇದು ಒಟ್ಟಾರೆ 13 ಬಾರಿ ಗಣರಾಜ್ಯೋತ್ಸವದ ಪರೇಡ್'ನಲ್ಲಿ ಪಾಲ್ಗೊಂಡಿದೆ. * ಈ ಕಪ್ಪು ಕುದುರೆ 'ವಿರಾಟ್'ನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 73ನೇ ಗಣರಾಜ್ಯೋತ್ಸವದ ಮೆರವಣಿಗೆಯ ಕಾರ್ಯಕ್ರಮದ ನಂತರ ಈ ಕುದುರೆಯನ್ನು ಬೀಳ್ಕೊಟ್ಟರು. * ಇತ್ತೀಚಿಗೆ ಜನವರಿ. 15 ರಂದು ಸೇನಾ ದಿನದ ಮುನ್ನಾದಿನದ ಅಂಗವಾಗಿ ವಿರಾಟ್‌'ಗೆ ಸೇನಾ ಮುಖ್ಯಸ್ಥರ ಹೃಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದರು, ಹಾಗೂ ಸೇವೆಯ ಬಗ್ಗೆ ಪ್ರಶಂಸೆಯನ್ನು ಪಡೆದ ಮೊದಲ ಕುದುರೆ ಇದಾಗಿದೆ ಎಂದಿದ್ದಾರೆ. * ಈ ಕಪ್ಪು ಕುದುರೆ ವಿರಾಟ್ ಹ್ಯಾನೋವೇರಿಯನ್ ತಳಿಯ ಕುದುರೆಯಾಗಿದೆ. ಈ ಕುದುರೆಯು 2003 ರಲ್ಲಿ ಅಂಗರಕ್ಷಕ ಕುಟುಂಬದಲ್ಲಿ ಸೇವೆಯನ್ನು ಆರಂಭಿಸಿದೆ. ಹಾಗೂ ಈ ಕುದುರೆಯನ್ನು ಅಧ್ಯಕ್ಷರ ಅಂಗರಕ್ಷಕನ 'ಚಾರ್ಜರ್' ಎನುತ್ತಿದ್ದರು. * ಈ ಹಿಂದೆ 1773 ರಲ್ಲಿ ರಚಿಸಲಾಗಿರುವ ಅಧ್ಯಕ್ಷರ ಅಂಗರಕ್ಷಕ, ಭಾರತೀಯ ಸೇನೆಯಲ್ಲಿನ ಅತ್ಯಂತ ಗಣ್ಯ ರೆಜಿಮೆಂಟ್ ಆಗಿದೆ, ಈ ರೆಜಿಮೆಂಟ್ ಭಾರತದ ರಾಷ್ಟ್ರಪತಿಗಳಿಗೆ ವಿಧ್ಯುಕ್ತ ಕರ್ತವ್ಯಗಳನ್ನು ನಿರ್ವಹಿಸುತ್ತದೆ.