Job Description: * ಪ್ರಸ್ತುತ ಜಗತ್ತಿನಾದ್ಯಂತ ಇರುವ ಭ್ರಷ್ಟಾಚಾರದ ಮಟ್ಟವನ್ನು ಮೌಲ್ಯಮಾಪನ ಮಾಡುವ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿಯು ಇದೇ ಜನವರಿ. 25 ರಂದು ಬಿಡುಗಡೆ ಮಾಡಲಾಗಿದೆ. ಈ ವರದಿಯಲ್ಲಿ ಭಾರತವು 85 ನೇ ಸ್ಥಾನದಲ್ಲಿದೆ. ಇದೀಗ 2021 ರ ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಒಟ್ಟು 180 ದೇಶಗಳ ವರದಿಯನ್ನು ಪ್ರಕಟಿಸಲಾಗಿದೆ. * ಪ್ರಸ್ತುತ 2021 ರ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಕೆಳಕ್ಕೆ ಮಟ್ಟಕ್ಕೆ ಜಾರಿರುವ ದೇಶಗಳ ಪೈಕಿ ಪಾಕಿಸ್ತಾನ ದೇಶವು 140 ನೇ ಸ್ಥಾನದಲ್ಲಿದೆ, ಹಾಗೂ ಬಾಂಗ್ಲಾದೇಶವು 147 ನೇ ಸ್ಥಾನದಲ್ಲಿದೆ. * * ಸದ್ಯದ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ದುರ್ಬಲ ಸ್ಥಾನದಲ್ಲಿ ಅಧಿಕ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳು : ಚೀನಾ 45 ನೇ ಸ್ಥಾನ, ಭಾರತ 40 ನೇ ಸ್ಥಾನ, ದೊಡ್ಡ ಆರ್ಥಿಕತೆಯ ದೇಶ ಇಂಡೋನೇಷ್ಯಾ 38 ನೇ ಸ್ಥಾನ, ಪಾಕಿಸ್ತಾನ 28 ನೇ ಸ್ಥಾನ, ಹಾಗೂ ಬಾಂಗ್ಲಾದೇಶ 26 ಸ್ಥಾನದಲ್ಲಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಮಾಹಿತಿಯನ್ನು ಪಿಟಿಐ ಸುದ್ದಿ ವಾಹಿನಿ ವರದಿ ಮಾಡಿದೆ. * ಈ ಹಿಂದೆ ಭಾರತವು 2020 ರಲ್ಲಿ 86 ನೇ ಸ್ಥಾನದಲ್ಲಿತ್ತು. ಹಾಗೂ 2021 ರಲ್ಲಿ 85ನೇ ಸ್ಥಾನಕ್ಕೇರಿದೆ. ಪ್ರಸ್ತುತ 2021 ರ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್‌ನ ವರದಿಯು ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿ ನೋಡಿದರೆ ಬೇರೆ ಯಾವುದೇ ದೇಶಗಳಲ್ಲಿ ಸುಧಾರಣೆಯಾಗಿಲ್ಲ ಎಂದು ತಿಳಿಸಿದೆ. * ಪ್ರಸ್ತುತ ದಕ್ಷಿಣ ಏಷ್ಯಾದ ದೇಶಗಳು ಭ್ರಷ್ಟಾಚಾರ ಸೂಚ್ಯಂಕದಲ್ಲಿ ಕಡಿಮೆ ಸ್ಥಾನದಲ್ಲಿರುವ ದೇಶಗಳು, ಡೆನ್ಮಾರ್ಕ್, ಫಿನ್ಲ್ಯಾಂಡ್, ನ್ಯೂಜಿಲೆಂಡ್ ಹಾಗೂ ನಾರ್ವೆ ದೇಶಗಳು ಈ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಈ 2021 ರ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್‌ನ ವರದಿಯುಲ್ಲಿ ಅಗ್ರಸ್ಥಾನ ಪಡೆದಿವೆ. ಇದೀಗ ಹೆಚ್ಚಿನ ಅಂಕಗಳನ್ನು ಪಡೆದ ರಾಷ್ಟ್ರಗಳು ಭ್ರಷ್ಟಾಚಾರದ ಗ್ರಹಿಕೆ ಸ್ಕೋರ್ 88 ನ್ನು ಹೊಂದಿದೆ. * ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI) ವಿಶ್ವ ಬ್ಯಾಂಕ್, ವಿಶ್ವ ಆರ್ಥಿಕ ವೇದಿಕೆ, ಖಾಸಗಿ ಅಪಾಯ, ಸಲಹಾ ಕಂಪನಿಗಳು, ಥಿಂಕ್ ಟ್ಯಾಂಕ್ಸ್‌ ಒಳಗೊಂಡಂತೆ 13 ಬಾಹ್ಯ ಮೂಲಗಳಿಂದ ಈ ಮಾಹಿತಿಯನ್ನು ಬಳಸಿಕೊಂಡು ಸಾರ್ವಜನಿಕ ವಲಯದ ಭ್ರಷ್ಟಾಚಾರದ ಮಟ್ಟವನ್ನು ಪರಿಗಣಿಸಿ ಸುಮಾರು 180 ದೇಶಗಳ ಅಂಕಗಳನ್ನು ಲೆಕ್ಕಾಚಾರ ಮಾಡಲಾಗುತ್ತದೆ.