Job Description: * ಇತ್ತೀಚಿಗೆ ಆಸ್ಟ್ರೇಲಿಯಾ ಸರ್ಕಾರವು ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರು ಕೋವಿಡ್-19 ಲಸಿಕೆಯನ್ನು ತೆಗೆದುಕೊಂಡಿಲ್ಲ ಎಂದು ತಿಳಿದು ಇದರಿಂದ ನಮ್ಮ ದೇಶಕ್ಕೆ ಬೆದರಿಕೆಯಾಗಲಿದೆ ಎಂದು ಪರಿಗಣಿಸಿ ಈ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರನನ್ನು ಆಸ್ಟ್ರೇಲಿಯಾದಿಂದ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದೆ. * ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್‌, ಪ್ರಸ್ತುತ ನಾಲ್ಕು ಪ್ರಮುಖ ಪಂದ್ಯಾವಳಿಗಳಲ್ಲಿ ಒಂದಾಗಿದೆ. ಈ ಓಪನ್ ಗ್ರ್ಯಾಂಡ್ ಸ್ಲಾಮ್‌ ಪಂದ್ಯವು 2022 ರ ಜನೆವರಿ. 17 ರಂದು ಆರಂಭವಾಗಬೇಕಿತ್ತು. ಆದರೆ ಆಟಗಾರ ನೊವಾಕ್ ಅವರು COVID ಲಸಿಕೆ ತೆಗೆದುಕೊಳ್ಳದ ಹಿನ್ನಲೆಯಿಂದಾಗಿ ಆಸ್ಟ್ರೇಲಿಯಾದ ನ್ಯಾಯಾಲಯವು ನೊವಾಕ್‌ ಅವರನ್ನು ಗಡಿಪಾರು ಮಾಡಿದೆ ಎಂದು ತಿಳಿಸಿದೆ. * ಈ ಆಸ್ಟ್ರೇಲಿಯಾ ಸರ್ಕಾರದ ಪ್ರಕಾರ, ನೊವಾಕ್ ಅವರು ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರು ಲಸಿಕೆ ಹಾಕಿಸಿಕೊಳ್ಳದಿರುವದು ದೇಶಕ್ಕೆ ಅಪಾಯ ಹಾಗೂ ಅವರ ಅಭಿಮಾನಿಗಳಿಗೆ ನೆಗೆಟಿವ್ ಸಂದೇಶವನ್ನು ರವಾನಿಸಿದಂತಾಗುತ್ತದೆ, ಹಾಗೂ ಪ್ರಪಂಚದಲ್ಲಿರುವ ಅವರ ಅಪಾರ ಅಭಿಮಾನಿಗಳಲ್ಲಿ ವ್ಯಾಕ್ಸಿನೇಷನ್ ವಿರೋಧಿ ಭಾವನೆಯನ್ನು ಬೆಳೆಸಿದಂತಾಗುತ್ತದೆ ಎಂದು ತಿಳಿದು ಆಸ್ಟ್ರೇಲಿಯಾ ಸರ್ಕಾರವು ಇವರನ್ನು ಗಡಿಪಾರು ಮಾಡಿದೆ ಎಂದು ತಿಳಿದು ಬಂದಿದೆ. * ಇತ್ತೀಚಿಗೆ ಆಸ್ಟ್ರೇಲಿಯನ್ ಸರ್ಕಾರವು ಲಸಿಕೆ ಹಾಕಿಸಿಕೊಂಡಿರುವ ಜನರನ್ನು ಮಾತ್ರ ತನ್ನ ದೇಶಕ್ಕೆ ಪ್ರವೇಶಿಸಲು ಪರವಾನಿಗೆಯನ್ನು ನೀಡುತ್ತಿದೆ. ಸರ್ಬಿಯಾದ ನೊವಾಕ್ ಅವರನ್ನು ವಿಕ್ಟೋರಿಯನ್ ರಾಜ್ಯದಿಂದ ವೈದ್ಯಕೀಯ ವಿನಾಯಿತಿಯ ಮೂಲಕ ಆಸ್ಟ್ರೇಲಿಯಾವನ್ನು ಪ್ರವೇಶಿಸಲು ಅನುಮತಿಯನ್ನು ನೀಡಲಾಗಿತ್ತು, ಆದರೆ ಲಸಿಕೆ ತೆಗೆದುಕೊಳ್ಳದ ಕಾರಣ ಅವರನ್ನು ಬಂಧಿಸಲಾಗಿತ್ತು ಎಂದು ತಿಳಿಸಿದೆ. ಇದೀಗ ಆರೋಗ್ಯ ಹಾಗೂ ಉತ್ತಮ ಕ್ರಮದ ಆಧಾರದ ಮೇಲೆ ಲಸಿಕೆ ಹಾಕಿಸಿಕೊಳ್ಳದ ಆಟಗಾರರ ವೀಸಾವನ್ನು ರದ್ದುಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾ ಸರ್ಕಾರ ತಿಳಿಸಿದೆ. * * ಆಸ್ಟ್ರೇಲಿಯಾ ಓಪನ್ ಇದೊಂದು ಪ್ರಮುಖ ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳಲ್ಲಿ ಒಂದಾಗಿದೆ. ಇನ್ನುಳಿದ '3' ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಗಳು : ಯುಎಸ್ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಪಂದ್ಯಾವಳಿಗಳಲ್ಲಿ ಎಲ್ಲರು ಭಾಗವಹಿಸಲು ಸಾಧ್ಯವಿಲ್ಲ. ಈ ಪಂದ್ಯಾವಳಿಗಳನ್ನು ವಿಶ್ವದ ಅಗ್ರ ಶ್ರೇಯಾಂಕವನ್ನು ಹೊಂದಿರುವವರ ನಡುವೆ ನಡೆಸಲಾಗುತ್ತದೆ. * ಆಸ್ಟ್ರೇಲಿಯನ್ ಓಪನ್ ಇದೊಂದು ಟೆನಿಸ್ ಪಂದ್ಯಾವಳಿಯಾಗಿದೆ. ಇದನ್ನು ವಾರ್ಷಿಕವಾಗಿ ಜನೇವರಿಯ ಕೊನೆಯ ಹದಿನೈದು ದಿನಗಳ ಕಾಲ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆಡಿಸಲಾಗುತ್ತದೆ. * ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯನ್ನು 1905 ರಲ್ಲಿ ಸ್ಥಾಪನೆ ಮಾಡಲಾಗಿದೆ.