Job Description: * ಇತ್ತೀಚಿಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಓಪನ್ ಡೇಟಾ ವೀಕ್ ನ್ನು ಆರಂಭಿಸಿದೆ. ಈ ವಾರವನ್ನು 2022 ರ ಜನೆವರಿ. 17 ರಿಂದ 21 ರ ನಡುವೆ ಆಚರಣೆ ಮಾಡಲಾಗುತ್ತದೆ. ಈ ವಾರದಲ್ಲಿ ದೇಶದ ನಗರ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು ಪ್ರೋತ್ಸಾಹವನ್ನು ನೀಡಲಾಗುತ್ತದೆ. * * ಓಪನ್ ಡೇಟಾ ವೀಕ್ : ಈ ವಾರದ ಆಚರಣೆಯಲ್ಲಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಮಾರ್ಟ್ ಸಿಟಿಗಳ ಬಗೆಗಿನ ಉತ್ತಮ ಗುಣಮಟ್ಟದ ಬ್ಲಾಗ್‌ಗಳು ಹಾಗೂ ಡೇಟಾ ಸೆಟ್‌ಗಳನ್ನು ತೆರೆದ ಡೇಟಾ ಪೋರ್ಟಲ್‌ನಲ್ಲಿ ಪ್ರಕಟಣೆ ಮಾಡುತ್ತದೆ. ಈ ಡೇಟಾ ಪೋರ್ಟಲ್ ಈಗಾಗಲೇ 60 ಕ್ಕೂ ಅಧಿಕ ನಗರಗಳ ಯಶಸ್ಸಿನ ಕಥೆಗಳನ್ನು ಒಳಗೊಂಡಿವೆ. ಸದ್ಯ ಈ ಪೋರ್ಟಲ್ ಪರೀಕ್ಷಿಸಲಾಗುತ್ತಿದೆ, ಇದೀಗ ತಜ್ಞರಿಗೆ ಮಾತ್ರ ಈ ಪೋರ್ಟಲ್'ಗೆ ಪ್ರವೇಶ ಲಭ್ಯವಿದೆ ಎಂದಿದ್ದಾರೆ. * ಈ ಓಪನ್ ಡೇಟಾ ವೀಕ್ ನಾವೀನ್ಯತೆ, ಪಾರದರ್ಶಕತೆ ಹಾಗೂ ಉತ್ತಮ ಗುಣಮಟ್ಟದ ತೆರೆದ ಡೇಟಾದ ಪ್ರಯೋಜನಗಳನ್ನು ಪ್ರದರ್ಶಿಸಲಿದೆ. ಇದೀಗ ಈ ಸ್ಮಾರ್ಟ್ ಸಿಟಿ ಓಪನ್ ಡೇಟಾ ಪೋರ್ಟಲ್‌'ನಲ್ಲಿ ಸಚಿವಾಲಯವು API ಗಳು, ಡೇಟಾಸೆಟ್ ದೃಶ್ಯೀಕರಣ ಹಾಗೂ ಡೇಟಾ ಬ್ಲಾಗ್‌ಗಳನ್ನು ಅಪ್‌ಲೋಡ್ ಮಾಡಲಿದೆ. ಈ ಎಲ್ಲವನ್ನು ಇದೇ 17 ರಿಂದ 20 ರ ನಡುವೆ ಅಪ್‌ಲೋಡ್ ಮಾಡಬೇಕು. ಅವುಗಳನ್ನು 2 ನೇ ಹಂತದಲ್ಲಿ ಡೇಟಾ ದಿನವನ್ನು ಆಚರಣೆ ಮಾಡಲಾಗುತ್ತದೆ. * ಡೇಟಾ ದಿನ ಆಚರಣೆಯು ಇದೊಂದು ಓಪನ್ ಡೇಟಾ ವೀಕ್ ಆಚರಣೆಯ ಒಂದು ಭಾಗವಾಗಿದೆ. ಇದನ್ನು 2022 ರ ಜನೆವರಿ. 21 ರಂದು ಆಚರಣೆ ಮಾಡಲಾಗುತ್ತದೆ. * ಇದೀಗ ದೇಶದ ಡಿಜಿಟಲ್ ಜಗತ್ತಿನಲ್ಲಿ ಡೇಟಾದ ಮಹತ್ವವನ್ನು ಪ್ರಚಾರ ಮಾಡುವ ಉದ್ದೇಶದಿಂದ ಈ ವಾರವನ್ನು ಆಚರಿಸಲಾಗುತ್ತದೆ. ಹಾಗೂ ಈ ವೇದಿಕೆಯ ಮೂಲಕ ಡೇಟಾ ಬಳಕೆಯನ್ನು ಉತ್ತೇಜಿಸುವ ಅವಕಾಶಗಳನ್ನು ನೀಡಲಾಗುತ್ತದೆ. ಹಾಗೂ ಹೊಸ ಜ್ಞಾನಕ್ಕೆ ಅಗತ್ಯವಿರುವ ಡೇಟಾದ ಸಂಯೋಜನೆಗಳನ್ನು ರಚಿಸಲಿದೆ ಎಂದಿದ್ದಾರೆ. * ಈ ಓಪನ್ ಡೇಟಾ ವೀಕ್ ನೀತಿಯಿಂದಾಗಿ ತಂತ್ರಗಳನ್ನು ಸುಧಾರಿಸಲಾಗುತ್ತದೆ. ಇದು ಸರ್ಕಾರಕ್ಕೆ ಹೊಸ ಯೋಜನೆಗಳನ್ನು ರಚಿಸಲು ಸಹಾಯ ಮಾಡುತ್ತದೆ, ಹಾಗೂ ಸದ್ಯ ನಡೆಯುತ್ತಿರುವ ಕಾರ್ಯಕ್ರಮಗಳ ಅನುಷ್ಠಾನದ ಬಗೆಗಿನ ಮಾಹಿತಿಯನ್ನು ಕಲ್ಪಿಸುತ್ತದೆ.