Job Description: * ಲೀಪ್ (LEAP) ಎಂಬುದು ಫ್ಲಿಪ್‌ಕಾರ್ಟ್‌ನ ಹೊಸ ಸ್ಟಾರ್ಟ್ ಅಪ್ ಕಾರ್ಯಕ್ರಮವಾಗಿದೆ. ಇದನ್ನು ಲೀಪ್ ಅಹೆಡ್ ಎಂದು ಕರೆಯಲಾಗುತ್ತದೆ. ಹಾಗೂ ಇದು ಭಾರತದಲ್ಲಿನ ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. * ಫ್ಲಿಪ್ಕಾರ್ಟ್ ಈ LEAP ಕಾರ್ಯಕ್ರಮದ ಅಡಿಯಲ್ಲಿ '2' ಕಾರ್ಯಕ್ರಮಗಳನ್ನು ಜಾರಿಗೊಳಿಸಲಿದೆ. ಒಂದು ಫ್ಲಿನ್(FLIN ), ಮತ್ತೊಂದು ಪ್ಲಾ(FLA )ಗಳಾಗಿವೆ. - FLIN ಎಂಬುದು ಫ್ಲಿಪ್‌ಕಾರ್ಟ್ ಲೀಪ್(LEAP) ಇನ್ನೋವೇಶನ್ ನೆಟ್‌ವರ್ಕ್ ಆಗಿದೆ. - FLA ಎಂಬುವದು ಫ್ಲಿಪ್‌ಕಾರ್ಟ್ ಲೀಪ್ ಅಹೆಡ್ ಆಗಿದೆ. * ಪ್ರಸ್ತುತ ಈ ಲೀಪ್ ಇದು ಅತ್ಯಾಧುನಿಕ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುವ ಸ್ಟಾರ್ಟ್ ಅಪ್‌ಗಳಲ್ಲಿ ಹೂಡಿಕೆಯನ್ನು ಮಾಡಲಿದೆ. ಅಲ್ಲದೇ ಕಂಪನಿಗೆ ಆದ್ಯತೆಯ ಹೊಸ ತಂತ್ರಜ್ಞಾನಗಳಲ್ಲಿ ಕಾರ್ಯ ನಿರ್ವಹಿಸುವ ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡುತ್ತದೆ, ಹಾಗೂ ಕೆಲ ಆಯ್ದ ಸ್ಟಾರ್ಟ್‌ಅಪ್‌ಗಳು ಟೆಕ್ ಹಾಗೂ ಉತ್ಪನ್ನ ತಂಡಗಳೊಂದಿಗೆ ಕಾರ್ಯ ನಿರ್ವಹಿಸುತ್ತದೆ. * ಈ ಲೀಪ್ ಪ್ರೋಗ್ರಾಂ ಎಂಬುವದು ಫ್ಲಿಪ್‌ಕಾರ್ಟ್‌'ನ ಬೀಜ-ಹಂತದ ಹೂಡಿಕೆಯ ಒಂದು ಭಾಗವಾಗಿದೆ. ಈ ಹಿಂದೆ ಫ್ಲಿಪ್‌ಕಾರ್ಟ್ 2021 ರಲ್ಲಿ ಭಾರತೀಯ ಸ್ಟಾರ್ಟ್‌ಅಪ್‌ಗಳಿಗಾಗಿ ಬೀಜ ನಿಧಿಯಾಗಿ 100 ಮಿಲಿಯನ್ USD ಯನ್ನು ಘೋಷಣೆ ಮಾಡಿದೆ. * ಪ್ರಸ್ತುತ 2021 ರ ಜುಲೈನಲ್ಲಿ ಫ್ಲಿಪ್‌ಕಾರ್ಟ್ ಕಾರ್ಯಕ್ರಮದ ಅಡಿಯಲ್ಲಿ 8 ಸ್ಟಾರ್ಟ್‌ಅಪ್‌ಗಳನ್ನು ಆಯ್ಕೆ ಮಾಡಲಾಗಿದೆ. ಈ '8' ಸ್ಟಾರ್ಟ್‌ಅಪ್‌ಗಳು ಫ್ಲಿಪ್‌ಕಾರ್ಟ್ ನಡೆಸಿರುವ ಕಾರ್ಯಕ್ರಮದಂತಹ 16 ವಾರಗಳ ತರಬೇತಿಯಲ್ಲಿ ಪಾಲ್ಗೊಂಡಿದ್ದವು. * * ಈ ಲೀಪ್ ಕಾರ್ಯಕ್ರಮದ ವೈಶಿಷ್ಟ್ಯಗಳು : - - 500,000 USD ವರೆಗೆ ಇಕ್ವಿಟಿ ಆಧಾರಿತ ಹೂಡಿಕೆ, ಕೈಗಾರಿಕೆಗಳಿಂದ ತಜ್ಞರು ರಚಿಸಿದ ಕಸ್ಟಮೈಸ್ ಮಾಡಿದ ಪಠ್ಯಕ್ರಮ, ಹಾಗೂ ವಿಷಯಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಹಿರಿಯ ಫ್ಲಿಪ್‌ಕಾರ್ಟ್ ತಜ್ಞರ ಮಾರ್ಗದರ್ಶನ, ಮತ್ತು ಫ್ಲಿಪ್‌ಕಾರ್ಟ್ ಪರಿಸರ ವ್ಯವಸ್ಥೆಯೊಂದಿಗೆ ಉತ್ತಮ ಸಂಪರ್ಕ ಸಾಧಿಸುವದು, ಹಾಗೂ ಕೋರ್ ಉತ್ಪನ್ನ ಪರಿಹಾರವನ್ನು ಅಭಿವೃದ್ಧಿಪಡಿಸುವದು. * ಈ ಲೀಪ್ (LEAP) ಕಾರ್ಯಕ್ರಮವು ಉದ್ಯಮಿಗಳು ಅನುಭವಿಸುತ್ತಿರುವ ಅನೇಕ ಸವಾಲುಗಳ ಮೂಲಕ ನ್ಯಾವಿಗೇಟ್ ಮಾಡಲು ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡಲಿದೆ. * * ಲೀಪ್ (LEAP) ಕಾರ್ಯಕ್ರಮ ಗುರಿಗಳು : - ಗ್ರಾಹಕರ ಅನುಭವವನ್ನು ಮರು ಪರಿಗಣಿಸುವದು. - ಚಿಲ್ಲರೆ ಪರಿಸರ ವ್ಯವಸ್ಥೆಗಾಗಿ ಕಟ್ಟಡ ನಿರ್ಮಿಸುವದು. - ಫ್ಯಾಷನ್ ಭವಿಷ್ಯ ಸೃಷ್ಟಿಸುವದು. - ಪೂರೈಕೆ ಸರಪಳಿಯನ್ನು ಮರುಚಿಂತನೆಮಾಡುವದು. - ಡಿಜಿಟಲ್ ವಾಣಿಜ್ಯವನ್ನು ವೇಗಗೊಳಿಸುವದಾಗಿದೆ.