Job Description: * ಇತ್ತೀಚಿಗೆ ಇಥಿಯೋಪಿಯಾದಲ್ಲಿ 2.3 ಲಕ್ಷ ವರ್ಷ ಹಳೆಯ ಮಾನವ ಪಳೆಯುಳಿಕೆ ಪತ್ತೆಯಾಗಿದೆ ಎಂದು ತಜ್ಞರು ಅಧ್ಯಯನದಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಈ ಪಳೆಯುಳಿಕೆಗಳನ್ನು ಓಮೋ ಎಂದು ಕರೆಯುತ್ತಾರೆ. * ಈ ಹಿಂದೆ 1960 ರ ದಶಕದ ಉತ್ತರಾರ್ಧದಲ್ಲಿ ಮೊದಲು ಪತ್ತೆಯಾಗಿರುವ ಅವಶೇಷಗಳು ಹೋಮೋ ಸೇಪಿಯನ್ಸ್ ಪಳೆಯುಳಿಕೆಗಳಿಗೆ ಇಂದು ಉದಾಹರಣೆಯಾಗಿದೆ ಎಂದಿದ್ದಾರೆ. ಆದರೆ ಈ ಹಿಂದಿನ ಅಧ್ಯಯನಗಳು ಇವುಗಳನ್ನು 2,00,000 ವರ್ಷಗಳ ಹಿಂದಿನ ಪಳೆಯುಳಿಕೆಗಳು ಎಂದು ಅಂದಾಜಿಸಿದ್ದಾರೆ. * ಪ್ರಸ್ತುತ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನದ ಪ್ರಕಾರ ಈ ಪಳೆಯುಳಿಕೆಗಳು ಸುಮಾರು 2,30,000 ವರ್ಷಗಳ ಹಿಂದೆ ಸಂಭವಿಸಿರುವ ಬೃಹತ್ ಜ್ವಾಲಾಮುಖಿ ಸ್ಫೋಟದಲ್ಲಿ ಮುಚ್ಚಿಕೊಂಡಿರುವ ಅವಶೇಷಗಳಾಗಿರಬಹುದು ಎಂದು ಅಂದಾಜಿಸಿದೆ. * ಇತ್ತೀಚಿಗಿನ ಹೊಸ ಸಂಶೋಧನೆಗಳ ಪ್ರಕಾರ ಪೂರ್ವ ಆಫ್ರಿಕಾದಲ್ಲಿ ಹೋಮೋ ಸೇಪಿಯನ್ನರ ಕನಿಷ್ಠ ವಯಸ್ಸನ್ನು 30,000 ವರ್ಷಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗಿವೆ, ಆದರೆ ಭವಿಷ್ಯದಲ್ಲಿನ ಹೊಸ ಹೊಸ ಅಧ್ಯಯನಗಳು ಈ ವಯಸ್ಸನ್ನು ಇನ್ನಷ್ಟು ಹಿಂದಕ್ಕೆ ಕರೆದುಕೊಂಡು ಹೋಗಲಿವೆ ಎಂದಿದ್ದಾರೆ. * ಈ ಹಿಂದೆ 2017 ರಲ್ಲಿ ವಿಶ್ವದ ಅತ್ಯಂತ ಹಳೆಯ ಹೋಮೋ ಸೇಪಿಯನ್ಸ್ ಪಳೆಯುಳಿಕೆಗಳ ಆವಿಷ್ಕಾರವನ್ನು ಮಾಡಲಾಗಿದೆ ಎಂದು ಪುರಾತತ್ವಶಾಸ್ತ್ರಜ್ಞರು ತಿಳಿಸಿದ್ದಾರೆ. ಇದೀಗ ಮೊರಾಕೊದ ಜೆಬೆಲ್ ಇರ್ಹೌಡ್‌ನಲ್ಲಿ ಕಂಡು ಬಂದ ತಲೆಬುರುಡೆಯು 3,00,000 ವರ್ಷಗಳಷ್ಟು ಹಳೆಯದಾಗಿದೆ ಎಂದಿದ್ದಾರೆ. ಆದರೆ ವಿಜ್ಞಾನಿಗಳು ದಶಕಗಳಿಂದ ಪೂರ್ವ ಆಫ್ರಿಕಾದ ಅತ್ಯಂತ ಹಳೆಯ ಪಳೆಯುಳಿಕೆಗಳ ನಿಖರವಾದ ವಯಸ್ಸನ್ನು ಕಂಡು ಹಿಡಿಯಲು ಪ್ರಯತ್ನಪಡುತ್ತಿದ್ದಾರೆ. * ಇಥಿಯೋಪಿಯಾ ಆಫ್ರಿಕಾದ ಹಾರ್ನ್‌ನಲ್ಲಿದೆ, ಇದು ಗ್ರೇಟ್ ರಿಫ್ಟ್ ವ್ಯಾಲಿಯಿಂದ ವಿಭಜಿತವಾದ ಒರಟಾದ, ಹಾಗೂ ಭೂಕುಸಿತದ ದೇಶವಾಗಿದೆ. ಪ್ರಸ್ತುತ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರಗಳಿಂದ 3 ಮಿಲಿಯನ್ ವರ್ಷಗಳಷ್ಟು ಹಿಂದಿನ ದೇಶವಾಗಿದೆ. ಹಾಗೂ ಇದೊಂದು ಪ್ರಾಚೀನ ಸಂಸ್ಕೃತಿಯ ಸ್ಥಳವಾಗಿದೆ, ಅಲ್ಲಿನ ಪ್ರಮುಖ ಸ್ಥಳಗಳಲ್ಲಿ ಲಾಲಿಬೆಲಾವು ಒಂದಾಗಿದೆ. ಇದು 12-13 ನೇ ಶತಮಾನಗಳಿಂದ ಕಲ್ಲಿನ ಕಟ್ ಕ್ರಿಶ್ಚಿಯನ್ ಚರ್ಚ್‌ಗಳನ್ನು ಹೊಂದಿರುವ ಪ್ರದೇಶವಾಗಿದೆ. * ಪ್ರಸ್ತುತ ಅಡಿಸ್ ಅಬಾಬಾ ನಗರ ಪ್ರದೇಶವು ಇಥಿಯೋಪಿಯಾದ ರಾಜಧಾನಿಯಾಗಿದೆ. ಅಬಿ ಅಹ್ಮದ್ ಅವರು ಪ್ರಸ್ತುತ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ. * ಇಥಿಯೋಪಿಯಾ ದೇಶವು 2020 ರ ಪ್ರಕಾರ 11.5 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಹಾಗೂ ಅಂಹರಿಕ್ ಎಂಬುವದು ಇಥಿಯೋಪಿಯಾ ದೇಶದ ಅಧಿಕೃತ ಭಾಷೆಯಾಗಿದೆ.