Job Description: * ಪ್ರಸ್ತುತ ಚೀನಾ ದೇಶದಲ್ಲಿ ಕಳೆದ ವರ್ಷದ ಜನಸಂಖ್ಯೆ ಜನನ ಪ್ರಮಾಣದಲ್ಲಿ 5 ಲಕ್ಷಕ್ಕೂ ಕಡಿಮೆ ಏರಿಕೆಯಾಗಿದೆ, ಇದೀಗ ಚೀನಾ ದೇಶದಲ್ಲಿ ಸತತವಾಗಿ 5 ವರ್ಷಗಳಿಂದ ಜನ ಪ್ರಮಾಣ ಕುಸಿತಗೊಂಡಿದೆ. * 2021 ಅಂತ್ಯದ ವೇಳೆಗೆ ಚೀನಾ ಜನಸಂಖ್ಯೆ 1.4126 ಶತಕೋಟಿಯಷ್ಟು ದಾಖಲಾಗಿತ್ತು. ಅಧಕ್ಕೂ ಹಿಂದಿನ ವರ್ಷ 2020 ರಲ್ಲಿ 1.4120 ಶತಕೋಟಿಯಷ್ಟು ಜನಸಂಖ್ಯೆ ದಾಖಲಾಗಿತ್ತು. ಇದೀಗ ಚೀನಾ ದೇಶದಲ್ಲಿ ಜನನ ಪ್ರಮಾಣದ ಮಟ್ಟದಲ್ಲಿ ಕುಸಿತ ಕಾಣುತ್ತಿರುವುದು ಒಂದು ರೀತಿಯ ಆತಂಕವಾಗಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಈ ಜನಸಂಖ್ಯೆ ಪ್ರಮಾಣವು ಕುಸಿತ ಕಾಣುವದರಿಂದ ದೇಶದ ಆರ್ಥಿಕ ಪ್ರಗತಿ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ ಎಂದು ಚೀನಾದ ನ್ಯಾಷನಲ್ ಬ್ಯೂರೊ ಆಫ್ ಸ್ಟಾಟಿಸ್ಟಿಕ್ಸ್ ಸಂಸ್ಥೆಯು ಇತ್ತೀಚಿಗೆ ಜನಸಂಖ್ಯೆ ಮಾಹಿತಿಯನ್ನು ಬಹಿರಂಗಪಡಿಸಿದೆ * * ಚೀನಾ : ಅಧಿಕೃತವಾಗಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ. ಇದೊಂದು ಪೂರ್ವ ಏಷ್ಯಾದ ಒಂದು ದೇಶ. ಹಾಗೂ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ, ಸದ್ಯ ಈ ದೇಶದಲ್ಲಿ 1.4 ಬಿಲಿಯನ್‌ಗಿಂತಲೂ ಅಧಿಕ ಜನಸಂಖ್ಯೆ ಇದೆ. ಪ್ರತುತ ಚೀನಾ ದೇಶವು ಐದು ಭೌಗೋಳಿಕ ಸಮಯ ವಲಯಗಳನ್ನು ವ್ಯಾಪಿಸಿದೆ, ಹಾಗೂ 14 ವಿವಿಧ ದೇಶಗಳ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಚೀನಾ ದೇಶವು ವಿಶ್ವದ 3 ನೇ ಅಥವಾ 4 ನೇ ಅತಿದೊಡ್ಡ ದೇಶವಾಗಿದೆ. ಈ ದೇಶವು ಹಾಂಗ್ ಕಾಂಗ್ ಮತ್ತು ಮಕಾವು ಎಂಬ ಎರಡು ವಿಶೇಷ ಆಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಬೀಜಿಂಗ್ ಈ ದೇಶದ ರಾಜಧಾನಿಯಾಗಿದೆ. * ಉತ್ತರ ಚೀನಾ ಬಯಲು ಪ್ರದೇಶದ ಹಳದಿ ನದಿಯ ಫಲವತ್ತಾದ ಜಲಾನಯನ ಪ್ರದೇಶದಲ್ಲಿ ಚೀನಾ ದೇಶದಲ್ಲಿ ಪ್ರಪಂಚದ ಮೊದಲ ನಾಗರಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಿತು. ಚೀನಾ ದೇಶವು 1 ರಿಂದ 19 ನೇ ಶತಮಾನದವರೆಗಿನ '2' ಸಹಸ್ರಮಾನಗಳಲ್ಲಿ ವಿಶ್ವದ ಅಗ್ರಗಣ್ಯ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿತ್ತು. ಸಹಸ್ರಮಾನ ಎಂದರೆ ಚೀನಾದ ರಾಜಕೀಯ ವ್ಯವಸ್ಥೆಯು ಸಂಪೂರ್ಣ ಆನುವಂಶಿಕ ರಾಜಪ್ರಭುತ್ವಗಳು ಅಥವಾ ರಾಜವಂಶಗಳನ್ನು ಆಧರಿಸಿದೆ ಎಂದರ್ಥ. * ಈ ಹಿಂದೆ 1912 ರಲ್ಲಿ ಕ್ಸಿನ್ಹೈ ಕ್ರಾಂತಿಯಿಂದಾಗಿ ಚೀನೀ ರಾಜಪ್ರಭುತ್ವವು ಕುಸಿತ ಕಂಡಿತು, ಕ್ವಿಂಗ್ ರಾಜವಂಶವನ್ನು ರಿಪಬ್ಲಿಕ್ ಆಫ್ ಚೀನಾ ಬದಲಾಯಿಸಿತು. ಹಾಗೂ 2 ನೇ ಮಹಾಯುದ್ಧದ ಸಮಯದಲ್ಲಿ ಚೀನಾವನ್ನು ಜಪಾನ್ ಸಾಮ್ರಾಜ್ಯವು ಆಕ್ರಮಣ ಮಾಡಿಕೊಂಡಿತು. ಮತ್ತೆ 1949 ರಲ್ಲಿ ಚೀನೀ ಕಮ್ಯುನಿಸ್ಟ್ ಪಕ್ಷವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಸ್ಥಾಪಿಸಿದಾಗ ಅಂತರ್ಯುದ್ಧವು ಭೂಪ್ರದೇಶದ ವಿಭಜನೆಗೆ ಕಾರಣವಾಗಿ ಹೊರಹೊಮ್ಮಿತ್ತು. ಚೀನಾ ದೇಶವು 2001 ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆಗೆ ಪ್ರವೇಶವನ್ನು ಪಡೆದುಕೊಂಡಿತು. ಚೀನಾ ಸದ್ಯ BRICS, G8+5, G20, APEC ಹಾಗೂ ಪೂರ್ವ ಏಷ್ಯಾ ಶೃಂಗಸಭೆಯ ಸದಸ್ಯನಾಗಿದೆ. * ಚೀನಾ ದೇಶವು ತನ್ನ ಒಟ್ಟು ಸಂಪತ್ತಿನ ಮೂಲಕ ವಿಶ್ವದ 2 ನೇ ಶ್ರೀಮಂತ ರಾಷ್ಟ್ರವಾಗಿದೆ. ಹಾಗೂ ಈ ದೇಶವು ವಿಶ್ವದ ಅತಿದೊಡ್ಡ ಮಿಲಿಟರಿ ಸೈನ್ಯವನ್ನು ಹೊಂದಿದೆ, ಹಾಗೂ ವಿಶ್ವದ 2 ನೇ ಅತಿದೊಡ್ಡ ಯುನೆಸ್ಕೋ ಸೈಟ್‌ಗಳನ್ನು ಹೊಂದಿದೆ, ಜೊತೆಗೆ 65.7 ಮಿಲಿಯನ್ ಸಂದರ್ಶಕರನ್ನು ಒಳಗೊಂಡಿರುವ 4 ನೇ ಅತಿ ಹೆಚ್ಚು ಭೇಟಿ ನೀಡಿದ ದೇಶವಾಗಿದೆ.