Job Description: * ಇದೀಗ ಭಾರತೀಯ ಪ್ಯಾರಾ-ಬ್ಯಾಡ್ಮಿಂಟನ್ ತಂಡದ ಮುಖ್ಯ ತರಬೇತುದಾರ ಗೌರವ್ ಖನ್ನಾ ಅವರ ಸಹಭಾಗಿತ್ವದಲ್ಲಿ ಭಾರತ ದೇಶದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಲಕ್ನೋದಲ್ಲಿ ಪ್ರಾರಂಭಗೊಂಡಿದೆ. ಕೋಚ್ ಗೌರವ್ ಖನ್ನಾ ಅವರು ಏಜೆಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ. * ಈ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿಯು ಆಧುನಿಕ ಸಾಮಗ್ರಿಗಳನ್ನು ಹೊಂದಿದೆ, ಸ್ಟೇಟ್ ಆಫ್ ದಿ ಆರ್ಟ್, ಹೈ ಪರ್ಫಾಮೆನ್ಸ್ ಸೆಂಟರ್ ಹೊಂದಿರುವ ಅಕಾಡೆಮಿಯಾಗಿದೆ. ಈ ಅಕಾಡೆಮಿಯಿಂದ ಮುಂದೆ ನಡೆಯಲಿರುವ 2024 ರ ಪ್ಯಾರಾಲಿಂಪಿಂಕ್ಸ್'ನಲ್ಲಿ ಭಾರತದ ಪದಕ ಗೆಲ್ಲುವ ಅವಕಾಶಗಳನ್ನು ಪಡೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ. 2028 ಹಾಗೂ 2032 ರ ಪ್ಯಾರಾಲಿಂಪಿಕ್ಸ್ ನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರತಿಭೆಗಳನ್ನು ಗುರುತಿಸುವದು ಹಾಗೂ ಅವರಿಗೆ ಅವಕಾಶವನ್ನು ನೀಡುವದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. * ಈ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿಯ ಉತ್ತಮ ರೀತಿಯ ಕೇಂದ್ರ 4 ಕೋರ್ಟ್'ಗಳಿಗೆ ಬಿಡಬ್ಲ್ಯೂಎಫ್ ಅನುಮೋದನೆ ನೀಡಿದೆ, ಅವುಗಳಲ್ಲಿ '2' ಸಿಂಥೆಟಿಕ್ ಮ್ಯಾಟ್ಸ್ ಮತ್ತು ವೀಲ್ಹ್ ಚೇರ್ ಅಥ್ಲೀಟ್'ಗಳಿಗಾಗಿ, ಹಾಗೂ '2' ವುಡನ್ ಕೋರ್ಟ್ ಗಳಾಗಿರಲಿವೆ. ಈ ಹೊಸ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಸಂಪೂರ್ಣ ಸುಸಜ್ಜಿತ ಜಿಮ್, ಐಸ್ ಸ್ನಾನ, ಹಬೆ ಸ್ನಾನ, ಹೈಡ್ರೋಥೆರಪಿ ಒಳಗೊಂಡಿರಲಿದೆ, ಅಥ್ಲೀಟ್ ಗಳಿಗೆ ಎಲ್ಲ ರೀತಿಯ ಆಧುನಿಕ ಸೌಲಭ್ಯ, ಹಾಗೂ ಕ್ರೀಡಾಪಟುಗಳಿಗೆ ಸುಸಜ್ಜಿತವಾಗಿರುವ ಕೊಠಡಿಗಳನ್ನು ನೀಡಲಿದೆ ಎಂದು ತಿಳಿಸಿದ್ದಾರೆ. * ಈ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಕ್ರೀಡಾಪಟುಗಳಿಗೆ ಅರ್ಹ ತರಬೇತುದಾರರು, ಫಿಸಿಯೋಗಳು, ಫಿಸಿಕಲ್ ಟ್ರೈನರ್ಸ್, ನ್ಯೂಟ್ರಿಷಿಯನ್ಸ್ ಹಾಗೂ ಇನ್ನಿತರ ಸಹಾಯಕ ಸಿಬ್ಬಂದಿಗಳು ಎಲ್ಲರೂ ಲಭ್ಯವಿರಲಿದ್ದಾರೆ. ಇತ್ತೀಚಿಗಿನ ಬೇಸಿಗೆಯ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ಯಾರಾ-ಬ್ಯಾಡ್ಮಿಂಟನ್ ಭಾರತ ದೇಶಕ್ಕೆ ಅಪಾರವಾದ ಹೆಮ್ಮೆಯನ್ನು ತಂದು ಕೊಟ್ಟಿದೆ. ಈ ಕ್ರೀಡೆಯು 2024 ರ ಪ್ಯಾರಿಸ್ ನಲ್ಲಿ ನಡೆಯುವ ಗೇಮ್‌ಗಳಲ್ಲಿ ಹೆಚ್ಚಿನ ಪ್ರಶಸ್ತಿಗಳನ್ನು ಜಯಿಸಲು ಕ್ರೀಡಾಪಟುಗಳಿಗೆ ಈ ಅಕಾಡೆಮಿಯ ಸಹಾಯ ಮಾಡಲಿದೆ ಎಂದು ಗೌರವ್ ಖನ್ನಾ ಅವರು ತಿಳಿಸಿದ್ದಾರೆ. * ಕೋವಿಡ್-19 ನಿರ್ಬಂಧಗಳ ಹಿನ್ನಲೆಯಿಂದಾಗಿ ಈ ಕಾರ್ಯಕ್ರಮದ ಉದ್ಘಾಟಣೆಯನ್ನು ಸರಳರೀತಿಯಲ್ಲಿ ಮುಕ್ತಾಯಗೊಳಿಸಲಾಗಿದೆ. ಮುಂಬರುವ 2024 ರ ಪ್ಯಾರಿಸ್ ಪ್ಯಾರಾಲಿಂಪಿಂಕ್ಸ್ ನಲ್ಲಿ ಕ್ರೀಡಾಪಟುಗಳು ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಈ ಹಿಂದೆ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಪ್ರಮೋದ್ ಭಗತ್ ಮತ್ತು ಕೃಷ್ಣಸಾಗರ್ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು, ಸುಹಾಸ್ ಯತಿರಾಜ್ ಮತ್ತು ಮನೋಜ್ ಸರ್ಕಾರ್ ಅವರು ಬೆಳ್ಳಿ ಪದಕ ಹಾಗೂ ಕಂಚಿನ ಪದಕವನ್ನು ಜಯಿಸಿದ್ದರು. ಇದೀಗ ಈ ಅಕಾಡೆಮಿಯಲ್ಲಿ ಸರಿ ಸುಮಾರು 50 ಕ್ರೀಡಾಪಟುಗಳು ತರಬೇತಿ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.