Job Description: * ಸುಪ್ರಸಿದ್ದ ವ್ಯಂಗ್ಯ ಚಿತ್ರಕಾರ ನಾರಾಯಣ ದೇಬಾಂತ್ ಅವರು ನಿಧನರಾಗಿದ್ದಾರೆ. ಇವರು ಬಂತೂಲ್ ದಿ ಗ್ರೇಟ್, ಹಂಡಾ ಬೋಂಡಾ, ನೋಂಟೆ ಪೋ0ಟೆ ಎಂಬ ಹಾಸ್ಯ ಕಾರ್ಟೂನ್‍ಗಳನ್ನು ಬಿಡಿಸುವ ಮೂಲಕ ಪ್ರಖ್ಯಾತಿಯನ್ನು ಪಡೆದಿದ್ದಾರೆ. * ವ್ಯಂಗ್ಯ ಚಿತ್ರಕಾರ ನಾರಾಯಣ ದೇಬಾಂತ್ ಅವರು ಈ ಹಿಂದೆ 1925 ರ ನವೆಂಬರ್. 25 ರಂದು ಔರಾದಲ್ಲಿ ಜನಿಸಿದ್ದರು. ನಾರಾಯಣ್ ಅವರು ಬಿಡಿಸಿರುವ ಹಂಡ ಬೋಂಡಾ ಎಂಬ ವ್ಯಂಗ್ಯ ಚಿತ್ರವು ಆ ಪ್ರದೇಶದಲ್ಲಿ ಪತ್ರಿಕೆಯೊಂದರಲ್ಲಿ ಸುಮಾರು 53 ವರ್ಷಗಳ ಕಾಲ ಪ್ರಕಟವಾಗಿ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಅಷ್ಟೇ ಅಲ್ಲದೇ ಬ್ಲಾಕ್ ಡೈಮಾಂಡ್ ಇಂದ್ರಜಿತ್ ರಾಯ್, ಪಾತೋಲ್‍ಚಂದ್ ದಿ ಮೆಜಿಸಿಯನ್, ಸುಕ್ತಿ-ಮುಕ್ತಿ, ಹಸೀರ್ ಆಟಂ ಬಾಂಬ್ ಎಂಬ ಹಲವಾರು ವ್ಯಂಗ್ಯ ಚಿತ್ರಗಳನ್ನು ಬಿಡಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. * ಕೇಂದ್ರ ಸರ್ಕಾರವು 2021 ರಲ್ಲಿ ನಾರಾಯಣ ದೇಬಾಂತ್ ಅವರಿಗೆ ದೇಶದ 4 ನೇ ಅತ್ಯುನ್ನತ ಪ್ರಶಸ್ತಿಯಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತ್ತು. ಇದರ ಜೊತೆಗೆ 2007 ರಲ್ಲಿ ರಾಷ್ಟ್ರಪತಿಗಳ ವಿಶೇಷ ಪ್ರಶಸ್ತಿ, ಹಾಗು 2013 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮತ್ತು 2013 ರಲ್ಲಿಯೇ ಬಾಂಗ್ಲಾ ಭೂಷಣ್ ಹೀಗೆ ಹಲವಾರು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ. * ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ಅವರು ವ್ಯಂಗ್ಯ ಚಿತ್ರಕಾರ ನಾರಾಯಣ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. * * ನಾರಾಯಣ್ ದೇಬನಾಥ್ : ಇವರೊಬ್ಬ ಭಾರತೀಯ ಕಾಮಿಕ್ಸ್(ವ್ಯಂಗ್ಯ ಚಿತ್ರಕಾರ) ಕಲಾವಿದ, ಬರಹಗಾರ. ಇವರ ಹಂಡಾ ಭೋಂಡಾ ಕಾಮಿಕ್ಸ್ ಸರಣಿಯು ನಿರಂತರ 53 ವರ್ಷಗಳ ಓಟವನ್ನು ಪೂರ್ಣಗೊಳಿಸಿ ಒಬ್ಬ ವೈಯಕ್ತಿಕ ಕಲಾವಿದರಿಂದ ದೀರ್ಘಾವಧಿಯ ಕಾಮಿಕ್ಸ್‌ನ ದಾಖಲೆಯನ್ನು ಪಡೆದುಕೊಂಡಿತು. ಹಾಗೂ ಡಿ. ಲಿಟ್ ಪಡೆದ ಭಾರತದ ಮೊದಲ ಮತ್ತು ಏಕೈಕ ಕಾಮಿಕ್ಸ್-ಕಲಾವಿದ ಇವರಾಗಿದ್ದಾರೆ. * ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲು ರಬಿ ಚೋಬಿಯಂತಹ ಅವರ ಇತರ ರಚನೆಗಳನ್ನು ಆನಂದಮೇಳ ಎಂಬ ವಾರಪತ್ರಿಕೆಯ 1961 ರ ಮೇ ತಿಂಗಳ ಸಂಚಿಕೆಯಲ್ಲಿ ಪ್ರಕಟಿಸಲಾಗಿತ್ತು. ಇದೀಗ 50 ಪುಟಗಳ ಕಾಮಿಕ್ಸ್ ನ್ನು ಮೊದಲು ಪುಸ್ತಕ ರೂಪದಲ್ಲಿ ಪ್ರಕಟಣೆ ಮಾಡಲಾಗಿತ್ತು. ಹಾಗೂ ಸ್ವಾಮಿ ವಿವೇಕಾನಂದ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲು ಬಿಮಲ್ ಘೋಷ್ ವನ್ನು ಇವರು ರಚಿಸಿದ್ದಾರೆ.