Job Description: * ಭಾರತದಲ್ಲಿ ಕಳೆದ ಎರಡು ವರ್ಷಗಳ ಕಾಲಾವಕಾಶದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿಯು ಸುಮಾರು 2,200 ಚ. ಕಿ.ಮೀ.ನಷ್ಟು ಹೆಚ್ಚಿದೆ. ಇತ್ತೀಚಿಗೆ ಅರಣ್ಯ ವ್ಯಾಪ್ತಿ ಬಗೆಗಿನ 2021 ರ ವರದಿಯನ್ನು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರು ಬಿಡುಗಡೆ ಮಾಡಿದ್ದಾರೆ. * ಪ್ರಸ್ತುತ ಈ ಅರಣ್ಯ ಸಮೀಕ್ಷೆಯಲ್ಲಿನ ಮಾಹಿತಿ ಪ್ರಕಾರ ದೇಶದಲ್ಲಿಯೇ ಕರ್ನಾಟಕದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿಯು ಹೆಚ್ಚಾಗಿದೆ, ಇದರಿಂದಾಗಿ ಕರ್ನಾಟಕವು 4 ನೇ ಸ್ಥಾನವನ್ನು ತಲುಪಿದೆ. * ಈ ಹಿಂದೆ 2017 ಮತ್ತು 2019 ರ ಅವಧಿಯಲ್ಲಿ ಅರಣ್ಯ ಬೆಳವಣಿಗೆ ಪ್ರಮಾಣವು ಹೆಚ್ಚಾಗಿದೆ, ಈ ಕಾಲಾವಕಾಶದಲ್ಲಿ ಅರಣ್ಯ ಪ್ರದೇಶವು ಸುಮಾರು 3,976 ಚ. ಕಿ.ಮೀ. ಮತ್ತು ಮರಗಳ ವ್ಯಾಪ್ತಿಯು 1,212 ಚದರ ಕಿ.ಮೀ. ಏರಿಕೆ ಕಂಡಿದೆ. ಸದ್ಯ ಭಾರತದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿ 8.9 ಕೋಟಿ ಹೆಕ್ಟೇರ್'ಗಳಷ್ಟು ಹೆಚ್ಚಾಗಿದೆ, ಪ್ರಸ್ತುತ ದೇಶದ ಭೌಗೋಳಿಕ ಪ್ರದೇಶದ ಶೇ.24.62 ರಷ್ಟಿದೆ ಎಂದು ಹೇಳಿದ್ದಾರೆ. * ಪ್ರಸ್ತುತ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಇದೀಗ ದೇಶದಲ್ಲಿ ಮರಗಳ ವ್ಯಾಪ್ತಿ ವಿಸ್ತರಣೆ ಮಾಡಲು ರಾಷ್ಟ್ರೀಯ ಹಸಿರು ಮಿಷನ್‌ ನ 2 ನೇ ಹಂತದಲ್ಲಿ ಇನ್ನು ಅನೇಕ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. * ಇದೀಗ 2019 ಮತ್ತು 2021 ರ ನಡುವೆ ದಟ್ಟ ಅರಣ್ಯದ ವ್ಯಾಪ್ತಿಯು ಸುಮಾರು 1,582 ಚದರ ಕಿ.ಮೀ.ನಷ್ಟು ಕಡಿಮೆಯಾಗಿದೆ. ಆದರೆ ಅತೀ ದಟ್ಟ ಅರಣ್ಯ ವ್ಯಾಪ್ತಿಯು ಪ್ರದೇಶವು ಸುಮಾರು 501 ಚದರ ಕಿ.ಮೀನಷ್ಟು ಹೆಚ್ಚಾಗಿದೆ ಎಂದಿದ್ದಾರೆ. * ಅರಣ್ಯ ವ್ಯಾಪ್ತಿ ಹೆಚ್ಚಳವಾಗಿರುವ '5' ರಾಜ್ಯಗಳು : ಕರ್ನಾಟಕ ರಾಜ್ಯದಲ್ಲಿ 155 ಚದರ ಕಿ.ಮೀ. ಅರಣ್ಯ ಪ್ರದೇಶ ಹೆಚ್ಚಿದೆ. ಆಂಧ್ರಪ್ರದೇಶ 747 ಚ.ಕಿ.ಮೀ, ತೆಲಂಗಾಣ 632 ಚ.ಕಿ.ಮೀ, ಒಡಿಶಾ 537 ಚ.ಕಿ.ಮೀ, ಹಾಗೂ ಜಾರ್ಖಂಡ್‌ ರಾಜ್ಯದಲ್ಲಿ 110 ಚ.ಕಿ.ಮೀ, ನಷ್ಟು ಅರಣ್ಯ ಪ್ರದೇಶ ಹೆಚ್ಚಿದೆ. ಆದರೆ ಈಶಾನ್ಯ ರಾಜ್ಯಗಳಲ್ಲಿ ಅರಣ್ಯ ವ್ಯಾಪ್ತಿಯು ಕಡಿಮೆಯಾಗಿದೆ ಎಂದು ಈ ಸಮೀಕ್ಷೆಯ ಪ್ರಕಾರ ತಿಳಿದು ಬಂದಿದೆ. * ಇದೀಗ 2019 ನೇ ಸಾಲಿನ ಅಂದಾಜಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ಅರಣ್ಯ ಪ್ರದೇಶ ವೃದ್ಧಿಯು ಬೆಳಗಾವಿ ಜಿಲ್ಲೆಯಲ್ಲಿ 24.06 ಚ.ಕಿ.ಮೀ, ಚಿತ್ರದುರ್ಗ ಜಿಲ್ಲೆಯಲ್ಲಿ 30.39 ಚ.ಕಿ.ಮೀ, ತುಮಕೂರು ಜಿಲ್ಲೆಯಲ್ಲಿ 39.03 ಚ.ಕಿ.ಮೀ. ಹೆಚ್ಚಾಗಿದೆ. ಆದರೆ ರಾಜ್ಯದ ಉಡುಪಿ ಜಿಲ್ಲೆಯಲ್ಲಿ 26.65 ಚ.ಕಿ.ಮೀ. ನಷ್ಟು ಗರಿಷ್ಠ ಪ್ರಮಾಣದಲ್ಲಿ ಅರಣ್ಯ ವ್ಯಾಪ್ತಿಯು ಕುಗ್ಗಿದೆ ಎಂದು ತಿಳಿದು ಬಂದಿದೆ.