Job Description: * ಪ್ರಸ್ತುತ ಫೋರ್ಬ್ಸ್‌ ನಿಯತಕಾಲಿಕೆ ವರದಿ ಪ್ರಕಾರ ಜಪಾನ್‌ನ ಟೆನಿಸ್‌ ಆಟಗಾರ್ತಿ ನವೊಮಿ ಒಸಾಕ ಅವರು ಅತಿ ಹೆಚ್ಚು ಆದಾಯ ಗಳುಸುತ್ತಿರುವ ಮಹಿಳಾ ಅಥ್ಲೀಟ್ ಆಗಿದ್ದಾರೆ. ಒಸಾಕ ಅವರು ಕಳೆದ ವರ್ಷದಲ್ಲಿನ ಪ್ರಶಸ್ತಿ ಹಾಗೂ ಕೆಲ ಬ್ರಾಂಡ್‌ಗಳ ಜೊತೆ ಮಾಡಿಕೊಂಡಿರುವ ಒಪ್ಪಂದದಿಂದಾಗಿ ಸರಿ ಸುಮಾರು ಅಂದಾಜು 423.59 ಕೋಟಿ ರೂ. ಆದಾಯವನ್ನು ಗಳಿಸಿದ್ದಾರೆ. * ನವೊಮಿ ಒಸಾಕ ಅವರು ಒಟ್ಟಾರೆ '4' ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಜಯಿಸಿಕೊಂಡಿದ್ದಾರೆ. * ಫೋರ್ಬ್ಸ್‌ ನಿಯತಕಾಲಿಕೆ ವರದಿ ಮಾಡಿರುವ ಆದಾಯ ಗಳಿಕೆ ಪಟ್ಟಿಯಲ್ಲಿ ನವೊಮಿ ಒಸಾಕ ನಂತರದ ಸ್ಥಾನಗಳಲ್ಲಿ ದಿಗ್ಗಜ ಆಟಗಾರ್ತಿಯರಾದ 'ವಿಲಿಯಮ್ಸ್‌' ಸಹೋದರಿಯರು ಸೇರಿದ್ದಾರೆ, 'ಸೆರೆನಾ ವಿಲಿಯಮ್ಸ್‌' ಕಳೆದ ವರ್ಷದಲ್ಲಿ ಅಂದಾಜು 332.03 ಕೋಟಿ ರೂ. ಆದಾಯವನ್ನು ಗಳಿಸಿ‌ 2ನೇ ಸ್ಥಾನದಲ್ಲಿದ್ದಾರೆ, ಹಾಗೂ 'ವೀನಸ್‌ ವಿಲಿಯಮ್ಸ್‌' ಅವರು ಕಳೆದ ವರ್ಷದಲ್ಲಿ ಅಂದಾಜು 83.56 ಕೋಟಿ ರೂ. ಆದಾಯವನ್ನು ಗಳಸಿ 3 ನೇ ಸ್ಥಾನದಲ್ಲಿದ್ದಾರೆ. * ಅಮೇರಿಕದ ಜಿಮ್ನಾಸ್ಟ್ ಪಟು ಆಗಿರುವ 'ಸಿಮೋನ್‌ ಬಿಲೆಸ್‌' ಅವರು ಅಂದಾಜು 74.68 ಕೋಟಿ ರೂ. ಆದಾಯವನ್ನು ಗಳಸಿ 4ನೇ ಸ್ಥಾನದಲ್ಲಿದ್ದಾರೆ. ಹಾಗೂ ಸ್ಪೇನ್‌ ದೇಶದ ಟೆನಿಸ್‌ ಆಟಗಾರ್ತಿ 'ಗಾರ್ಬೈನ್‌ ಮುಗುರಜಾ' ಅವರು ಅಂದಾಜು 65,07 ಕೋಟಿ ರೂ. ಆದಾಯವನ್ನು ಗಳಸಿ 5ನೇ ಸ್ಥಾನದಲ್ಲಿದ್ದಾರೆ. * ಭಾರತದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಅಂದಾಜು 53.24 ಕೋಟಿ ರೂ. ಆದಾಯವನ್ನು ಗಳಸಿ ಟಾಪ್ ಹತ್ತರಲ್ಲಿ ಒಬ್ಬರಾಗಿದ್ದಾರೆ. ಟಾಪ್ 10 ರಲ್ಲಿ '5' ಜನ ಟೆನಿಸ್‌ ಆಟಗಾರ್ತಿಯರಿದ್ದಾರೆ ಎಂದು ಫೋರ್ಬ್ಸ್‌ ಮಾಹಿತಿ ಪ್ರಕಟಿಸಿದೆ. * ಫೋರ್ಬ್ಸ್ : ಇದು ಹಣಕಾಸು, ಉದ್ಯಮ, ಹೂಡಿಕೆ ಮತ್ತು ಮಾರುಕಟ್ಟೆ ವಿಷಯಗಳ ಕುರಿತು ಲೇಖನಗಳನ್ನು ಒಳಗೊಂಡಿರುತ್ತದೆ. ಹಾಗೂ ಇದು ಇಂಟಿಗ್ರೇಟೆಡ್ ವೇಲ್ ಮೀಡಿಯಾ ಇನ್ವೆಸ್ಟ್‌ಮೆಂಟ್ಸ್ ಮತ್ತು ಫೋರ್ಬ್ಸ್ ಕುಟುಂಬದ ಒಡೆತನದ ಅಮೇರಿಕನ್ ವ್ಯಾಪಾರ ನಿಯತಕಾಲಿಕವಾಗಿದೆ. ಇದನ್ನು ವರ್ಷಕ್ಕೆ '8' ಬಾರಿ ಪ್ರಕಟಿಸಲಾಗುತ್ತದೆ. ಇದನ್ನು ತಂತ್ರಜ್ಞಾನ, ಸಂವಹನ, ವಿಜ್ಞಾನ, ರಾಜಕೀಯ ಮತ್ತು ಕಾನೂನಿನಂತಹ ಸಂಬಂಧಿತ ವಿಷಯಗಳ ಬಗ್ಗೆ ವರದಿ ಮಾಡುತ್ತದೆ. * ಫೋರ್ಬ್ಸ್ ನ ಪ್ರಧಾನ ಕಛೇರಿಯು ನ್ಯೂಜೆರ್ಸಿಯ ಜರ್ಸಿ ನಗರದಲ್ಲಿದೆ. ಫೋರ್ಬ್ಸ್ ಪ್ರಪಂಚದಾದ್ಯಂತ 27 ದೇಶಗಳು ಹಾಗೂ ಪ್ರದೇಶಗಳಲ್ಲಿ ಪರವಾನಿಗೆಯ ಅಡಿಯಲ್ಲಿ ಸಿದ್ಧಪಡಿಸಿರುವ ಆವೃತ್ತಿಗಳನ್ನು ಒಳಗೊಂಡಿರುತ್ತದೆ. * ಫೋರ್ಬ್ಸ್ ವಿಶ್ವದ ಅತ್ಯಂತ ಶಕ್ತಿಶಾಲಿ ಜನರ ಪಟ್ಟಿ, ಹಾಗೂ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದು 'ಚೇಂಜ್ ದಿ ವರ್ಲ್ಡ್' ಎಂಬ ಧ್ಯೇಯವಾಕ್ಯವನ್ನು ಹೊಂದಿದೆ.