Job Description: * ದೇಶೀಯ ನಾಗರಿಕ ವಿಮಾನಯಾನಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಹಾಗೂ ದೇಶದ ಪ್ರವಾಸೋದ್ಯಮಕ್ಕೆ ಶಕ್ತಿಯನ್ನು ತುಂಬಲು ಇದೀಗ ಕೇಂದ್ರ ಸರಕಾರವು ಮುಂದಾಗಿದೆ, ಇದೀಗ 'ಉಡಾನ್‌-2' ಯೋಜನೆ ಅಡಿಯಲ್ಲಿ ದೇಶದ ಮೊಟ್ಟಮೊದಲ ಹೆಲಿಪೋರ್ಟ್‌ ನಿರ್ಮಾಣ ಮಾಡಿದೆ. * ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಹೆಲಿಕಾಪ್ಟರ್‌ ನಿಲ್ದಾಣಕ್ಕೆ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಅವರು ಚಾಲನೆ ನೀಡಿದ್ದಾರೆ. ಈ ಪ್ರದೇಶದಲ್ಲಿ ಸ್ವದೇಶಿ ದರ್ಶನ ಅಡಿಯಲ್ಲಿ ಒಟ್ಟು ಆರು ಹೆಲಿಪೋರ್ಟ್‌ಗಳನ್ನು ನಿರ್ಮಾಣ ಮಾಡಲಾಗಿದೆ, ಇದೀಗ ಅದರಲ್ಲಿ ಮೊದಲ ಹೆಲಿಕಾಪ್ಟರ್‌ ನಿಲ್ದಾಣಕ್ಕೆ ಚಾಲನೆ ಸಿಕ್ಕಿದೆ, ಈ ಹೆಲಿಕಾಪ್ಟರ್‌ ನಿಲ್ದಾಣವು ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. * ಹಿಮಾಚಲ ಪ್ರದೇಶದಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹಾಗೂ ತುರ್ತು ವೈದ್ಯಕೀಯ ಬಳಕೆಗೆ ಹೆಲಿಪೋರ್ಟ್‌ ನ್ನು ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಹೆಲಿಕಾಫ್ಟರ್ ಶಿಮ್ಲಾದಲ್ಲಿನ ಇಂದಿರಾಗಾಂಧಿ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆ ಹತ್ತಿರದಲ್ಲಿ ನಿರ್ಮಾಣವಾಗಿದೆ ಎಂದಿದ್ದಾರೆ. * ಪ್ರಸ್ತುತ ಕೇಂದ್ರ ಸರಕಾರವು ಹಿಮಾಲಯನ್‌ ಸರ್ಕ್ಯೂಟ್ ಆಫ್‌ ಸ್ವದೇಶ್‌ ದರ್ಶನ್‌ ಯೋಜನೆ ಅಡಿಯಲ್ಲಿ ಈ ಹೆಲಿಪೋರ್ಟ್‌ ನಿರ್ಮಾಣಕ್ಕೆ 12.13 ಕೋಟಿ ರೂ. ಒದಗಿಸಿದೆ. ಇನ್ನು ಬಾಕಿ ಇರುವ '6' ಕೋಟಿ ಮೊತ್ತವನ್ನು ಉಡಾನ್‌-2 ಯೋಜನೆ ಅಡಿಯಲ್ಲಿ ಹಿಮಾಚಲ ಪ್ರದೇಶ ಸರ್ಕಾರವು ನೀಡಿದೆ ಎಂದು ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಅವರು ತಿಳಿಸಿದ್ದಾರೆ. * ಇದೀಗ ಈ ಉಡಾನ್‌ 2.0 ಯೋಜನೆಯು ಬುಡಕಟ್ಟು ಜನರು ವಾಸವಾಗಿರುವ ಪ್ರದೇಶಗಳು, ಗುಡ್ಡಗಾಡು ಜಿಲ್ಲೆಗಳು, ಈಶಾನ್ಯ ರಾಜ್ಯಗಳ ಪ್ರವಾಸೋದ್ಯಮಕ್ಕೆ ವಿಮಾನ ಸಂಪರ್ಕ ಹೆಚ್ಚಿಸಲು ಈ ಯೋಜನೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. * ಶಿಮ್ಲಾದಲ್ಲಿನ ಈ ಹೊಸ ಹೆಲಿಕಾಪ್ಟರ್ ನಿಲ್ದಾಣದಿಂದ ಹೆಲಿಕಾಪ್ಟರ್ ಬೆಳಗ್ಗೆ 8 ಗಂಟೆಗೆ ಹೊರಟು ಸುಮಾರು 8.20ಕ್ಕೆ ಚಂಡೀಗಢ ತಲುಪಲಿದೆ. ಮತ್ತೆ ಪುನಃ ಚಂಡೀಗಢ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9 ಗಂಟೆಯಿಂದ 9.20 ಕ್ಕೆ ಶಿಮ್ಲಾವನ್ನು ತಲುಪುತ್ತದೆ. * ಇದೀಗ ಹಿಮಾಚಲ ಪ್ರದೇಶ ಸರ್ಕಾರವು ಶಿಮ್ಲಾದಿಂದ ಚಂಡೀಗಢಕ್ಕೆ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯನ್ನು ಆರಂಭಿಸಿದೆ. ಈ ಪ್ರಯಾಣವು ನಗರಗಳನ್ನು ಕೇವಲ 20 ನಿಮಿಷಗಳಲ್ಲಿ ತಲುಪಿಸಲಿದೆ ಎಂದಿದ್ದಾರೆ, ಈ ಸೇವೆಯುನ್ನು ಹಿಮಾಚಲ ಪ್ರದೇಶ ರಾಜ್ಯದಲ್ಲಿ ಹೆಲಿ ಟೆಕ್ಸಿ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ, ಹಾಗೂ ಭವಿಷ್ಯದಲ್ಲಿ ಬೇರೆ ಬೇರೆ ಪ್ರವಾಸಿ ತಾಣಗಳಿಗೂ ವಿಸ್ತರಿಸಬಹುದಾಗಿದೆ ಎಂದಿದ್ದಾರೆ. * ಈ ಹೆಲಿ ಟ್ಯಾಕ್ಸಿ ಸೇವೆಯನ್ನು ಪವನ್ ಹನ್ಸ್ ಲಿಮಿಟೆಡ್ ಸಹಯೋಗದಲ್ಲಿ ಆರಂಭಿಸಲಾಗಿದೆ, ಈ ಹೆಲಿ ಟ್ಯಾಕ್ಸಿ ಸೇವೆಯು ಜನರಿಗೆ 2,999 ರೂ.ಗೆ ಲಭ್ಯವಿರಲಿದೆ ಎಂದಿದ್ದಾರೆ.