Job Description: * ವಿಶ್ವದ ಅತ್ಯಂತ ಹಳೆಯ ಆಮೆ ಎಂದು ಗುರುತಿಸಲ್ಪಟ್ಟಿರುವ ಜೊನಾಥನ್ ಆಮೆಯು ಇದೀಗ ವಿಶ್ವದ ಅತೀ ಹಳೆಯ ಜೀವಂತ ಭೂ ಪ್ರಾಣಿ ಎಂಬ ಹೆಸರು ಪಡೆದುಕೊಂಡು ಇದೀಗ ವಿಶ್ವ ದಾಖಲೆಯ ಪುಟವನ್ನು ಸೇರಿದೆ. * ಇತ್ತೀಚಿಗೆ ಈ ಜೊನಾಥನ್ ಆಮೆಯು 190 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ, ಈ ಆಮೆಯು ಬ್ರಿಟಿಷ್ ಸಾಗರೋತ್ತರ ಪ್ರದೇಶವಾದ ಸೇಂಟ್ ಹೆಲೆನಾ ದ್ವೀಪದಲ್ಲಿದೆ ಎಂದು ತಿಳಿದು ಬಂದಿದೆ. ಇದೀಗ ಈ ಆಮೆಯು ವಿಶ್ವದ ಅತ್ಯಂತ ಹಳೆಯ ಆಮೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. * ಪ್ರಸ್ತುತ ಈ ಜೊನಾಥನ್ ಆಮೆಯು ಈ ಹಿಂದೆ 1832 ರಲ್ಲಿ ಜನಿಸಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್ ವರದಿ ಮಾಡಿದೆ, ಇದೀಗ ಇದಕ್ಕೆ 2022 ರಲ್ಲಿ 190 ವರ್ಷ ವಯಸ್ಸಾಗಿದೆ ಎಂದು ತಿಳಿಸಿದ್ದಾರೆ. * ಈ ಆಮೆಯು ಈ ಹಿಂದೆ 1882 ರಲ್ಲಿ ಸೇಶೆಲ್ಸ್‌ನಿಂದ ಸೇಂಟ್ ಹೆಲೆನಾಗೆ ಬಂದಿರುವ ಸಮಯದಲ್ಲಿ ಈ ಆಮೆಯು ಪ್ರಬುದ್ಧವಾಗಿ ಕನಿಷ್ಠ 50 ವರ್ಷ ವಯಸ್ಸನ್ನು ಹೊಂದಿತ್ತು ಎಂಬ ವಿಷಯದ ಮೇಲೆ ಜೊನಾಥನ್ ಆಮೆ ವಿಶ್ವ ದಾಖಲೆಯನ್ನು ಸೇರಿದೆ ಎನ್ನಲಾಗಿದೆ. * ಪ್ರಸ್ತುತ ಈ ಜೊನಾಥನ್ ಆಮೆಕ್ಕಿಂತಲೂ ಮುಂಚಿತವಾಗಿ 'ತುಯಿ ಮಲಿಲಾ' ಎಂಬ ಆಮೆಯು ಹಳೆಯ ಆಮೆಯಾಗಿತ್ತು, ಇದು ಸುಮಾರು 188 ವರ್ಷಗಳ ಕಾಲ ಬದುಕಿತ್ತು. ಈ 'ತುಯಿ ಮಲಿಲಾ' ಎಂಬ ಆಮೆಯನ್ನು 1777 ರಲ್ಲಿ ಕ್ಯಾಪ್ಟನ್ ಕುಕ್ ಅವರು ಇದನ್ನು ಟೋಂಗಾ ರಾಜಮನೆತನಕ್ಕೆ ದಾನ ಮಾಡಿದ್ದರು, ಆಗಿನಿಂದಲೂ ಅದು ಸಾಯೋವರೆಗೂ ಅಂದರೆ 1965 ರವರೆಗೂ ಈ ಆಮೆ ಟೋಂಗಾ ರಾಜಮನೆತದ ಆರೈಕೆಯಲ್ಲಿತ್ತು. * ಇತ್ತೀಚಿಗೆ ಸೇಂಟ್ ಹೆಲೆನಾ ಸರ್ಕಾರವು ನೀಡಿರುವ ಮಾಹಿತಿಯ ಪ್ರಕಾರ ಜೊನಾಥನ್ ಆಮೆಯು ಚಳಿಗಾಲದ ಕಾರಣದಿಂದ ಸ್ವಲ್ಪ ಬಳಲಿದೆ, ಆದರೆ ಚೆನ್ನಾಗಿ ಆಹಾರವನ್ನು ತಿನ್ನುತ್ತಿದೆ, ಇದೀಗ ಪಶುವೈದ್ಯಕೀಯ ವಿಭಾಗವು ಈ ಆಮೆಗೆ ಆಹಾರವನ್ನು ವಾರಕ್ಕೊಮ್ಮೆ ಕೈಯಿಂದ ನೀಡುತ್ತಿದೆ, ಕಾರಣ ಈ ಆಮೆಗೆ ಸದ್ಯ ಕಣ್ಣು ಕಾಣಿಸುವದಿಲ್ಲ ಹಾಗೂ ವಾಸನೆಯ ಪ್ರಜ್ಞೆಯನ್ನು ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ.